Coronavirus ವಿರುದ್ಧದ ಹೋರಾಟದಲ್ಲಿ ಮಹತ್ತರ ಹೆಜ್ಜೆ ; ಅಕ್ಟೋಬರ್ ಮೊದಲ ವಾರದಿಂದ ಮಕ್ಕಳಿಗೂ ಲಸಿಕೆ
ದೇಶದಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. 12 ವರ್ಷ ಮತ್ತು ಮೇಲ್ಪಟ್ಟ ಮಕ್ಕಳಿಗೆ ಕರೋನಾ ಲಸಿಕೆಯನ್ನು ಡಿಸಿಜಿಐ ಈಗಾಗಲೇ ಅನುಮೋದಿಸಿದೆ.
ನವದೆಹಲಿ : ಕರೋನಾ ವಿರುದ್ಧದ ಹೋರಾಟದಲ್ಲಿ ದೇಶ ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಿದೆ. ದೇಶದಲ್ಲಿ 12 ವರ್ಷ ಮತ್ತು ಮೇಲ್ಪಟ್ಟ ಮಕ್ಕಳು ಕೂಡ ಶೀಘ್ರದಲ್ಲೇ ಕರೋನಾ ಲಸಿಕೆ (Corona Vaccine) ಪಡೆಯುವುದು ಸಾಧ್ಯವಾಗುತ್ತದೆ. ಈ ವಯಸ್ಸಿನ ಮಕ್ಕಳಿಗೆ ಅಕ್ಟೋಬರ್ ಮೊದಲ ವಾರದಿಂದ ಲಸಿಕೆ (Vaccine) ಹಾಕಲು ಯೋಜಿಸಲಾಗಿದೆ. ಮೊದಲು ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಲಸಿಕೆ ನೀಡಲಾಗುವುದು. ದೇಶದಲ್ಲಿ 12 ರಿಂದ 17 ವರ್ಷ ವಯಸ್ಸಿನ ಸುಮಾರು 120 ಮಿಲಿಯನ್ ಮಕ್ಕಳಿದ್ದಾರೆ. ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗಾಗಿ ಶಾಲೆಗಳನ್ನು ತೆರೆಯಬೇಕು ಎಂದು ಕೋವಿಡ್ ವರ್ಕಿಂಗ್ ಗ್ರೂಪ್ (Covid working group) ಹೇಳಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಮಕ್ಕಳಿಗೆ ಲಸಿಕೆ ಹಾಕಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ.
ಅಂತಿಮ ಹಂತದಲ್ಲಿ ತಯಾರಿ :
ದೇಶದಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. 12 ವರ್ಷ ಮತ್ತು ಮೇಲ್ಪಟ್ಟ ಮಕ್ಕಳಿಗೆ ಕರೋನಾ ಲಸಿಕೆಯನ್ನು (Corona Vaccine) ಡಿಸಿಜಿಐ (DCGI) ಈಗಾಗಲೇ ಅನುಮೋದಿಸಿದೆ. ಜೈಡಸ್ ಕ್ಯಾಡಿಲಾದ ಲಸಿಕೆ ಜೈ ಕೋವ್-ಡಿ ಅನ್ನು ಈ ವರ್ಷದ ಅಕ್ಟೋಬರ್ ಮೊದಲ ವಾರದಿಂದ ಮಕ್ಕಳಿಗೆ ನೀಡಲು ಯೋಜಿಸಲಾಗಿದೆ.
ಇದನ್ನೂ ಓದಿ : Gail Omvedt: ಅಂಬೇಡ್ಕರವಾದಿ ಚಿಂತಕಿ ಗೇಲ್ ಓಮ್‌ವೆಡ್ ಇನ್ನಿಲ್ಲ
ಎಲ್ಲಾ ಮಕ್ಕಳಿಗೂ ಅಕ್ಟೋಬರ್‌ನಲ್ಲಿ ಲಸಿಕೆ ಹಾಕಲಾಗುವುದಿಲ್ಲ :
ಸರ್ಕಾರದ ಯೋಜನೆಯ ಪ್ರಕಾರ, ಅಕ್ಟೋಬರ್ ನಿಂದ 12 ವರ್ಷ ಮತ್ತು ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ ಲಸಿಕೆಯನ್ನು (Corona Vaccine for Kids) ನೀಡಲಾಗುವುದಿಲ್ಲ. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು. ಗಂಭೀರ ಕಾಯಿಲೆಗಳಲ್ಲಿ ಯಾವ ರೋಗಗಳನ್ನು ಒಳಪಡಿಸಲಾಗುತ್ತದೆ ಎಂದು, ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಮ್ಯುನೈಸಶನ್ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.
ಕುಟುಂಬದ ಸದಸ್ಯರಿಗೆ ಲಸಿಕೆ ಹಾಕುವುದು ಕೂಡ ಮಕ್ಕಳಿಗೆ ಸುರಕ್ಷಾ ಕವಚ :
ಕೋವಿಡ್ ವರ್ಕಿಂಗ್ ಗ್ರೂಪ್ ನ (Covid working group) ಅಧ್ಯಕ್ಷರಾದ ಡಾ. ಎನ್ ಕೆ ಅರೋರಾ ಪ್ರಕಾರ, ಶಾಲೆಗಳನ್ನು ತೆರೆಯಲು ಮಕ್ಕಳಿಗೆ ಲಸಿಕೆ ಅಗತ್ಯವಿಲ್ಲ. ಮಕ್ಕಳಿರುವ ಮನೆಗಳಲ್ಲಿ, ಎಲ್ಲಾ ಪೋಷಕರು ಮತ್ತು ಮನೆಯ ಇತರ ವಯಸ್ಕರಿಗೆ ಲಸಿಕೆ ಹಾಕಬೇಕು ಮತ್ತು ಅದೇ ಸಮಯದಲ್ಲಿ ಶಾಲೆಯಲ್ಲಿ ಶಿಕ್ಷಕರು ಮತ್ತು ಇತರ ಸಿಬ್ಬಂದಿಗೂ ಲಸಿಕೆ ಹಾಕಿಸಬೇಕು. ಹೀಗಾದಲ್ಲಿ ಮಕ್ಕಳು ಸುರಕ್ಷಿತವಾಗಿರುತ್ತಾರೆ. ಈ ಕಾರಣದಿಂದಾಗಿ, ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗಾಗಿ ಶಾಲೆಗಳನ್ನು ತೆರೆಯಲು ತಜ್ಞರು ಸಲಹೆ ನೀಡುತ್ತಿದ್ದಾರೆ.
ಇದನ್ನೂ ಓದಿ :Cheque ನೀಡುವ ಮುನ್ನ ತಿಳಿದಿರಲಿ RBI ಹೊಸ ನಿಯಮ, ಇಲ್ಲವಾದರೆ ಎದುರಾದೀತು ಸಮಸ್ಯೆ
ಶಿಕ್ಷಕರ ದಿನದ ಮೊದಲು ಎಲ್ಲ ಶಿಕ್ಷಕರಿಗೆ ಲಸಿಕೆ :
ಮತ್ತೊಂದೆಡೆ, ಶಾಲೆಗಳ ಶಿಕ್ಷಕರಿಗೆ ಆದ್ಯತೆಯ ಆಧಾರದ ಮೇಲೆ ಲಸಿಕೆ ಹಾಕಲು ಸರ್ಕಾರ ನಿರ್ಧರಿಸಿದೆ. ಶಾಲಾ ಶಿಕ್ಷಕರ ಲಸಿಕೆಗೆ ಆದ್ಯತೆ ನೀಡಿದ್ದಕ್ಕಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಧನ್ಯವಾದ ಸಲ್ಲಿಸಿದ್ದಾರೆ. ಮುಂಬರುವ ಶಿಕ್ಷಕರ ದಿನವಾದ ಸೆಪ್ಟೆಂಬರ್ 5 ರ ಮೊದಲು ಎಲ್ಲಾ ಶಾಲೆಗಳ ಶಿಕ್ಷಕರಿಗೆ ವ್ಯಾಕ್ಸಿನೇಷನ್ ನಲ್ಲಿ ಆದ್ಯತೆ ನೀಡಲು ಸರ್ಕಾರ ನಿರ್ಧರಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ