Controversy On Vaccine: `ಲಸಿಕೆಯಲ್ಲಿ ಹಸುವಿನ ರಕ್ತ, ಭಾರತದಲ್ಲಿ ಬಳಕೆ ಬೇಡ `
ಈ ಲಸಿಕೆಯನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಆ ವ್ಯಕ್ತಿಯು ಧರ್ಮಕ್ಕೆ ವಿರುದ್ಧವಾಗಿದ್ದಾರೆಯೇ ಎಂಬುದು ಸ್ಪಷ್ಟವಾಗುವವರೆಗೆ ಲಸಿಕೆಯನ್ನು ಭಾರತದಲ್ಲಿ ಬಳಸಬಾರದು ಎಂದು ಸ್ವಾಮಿ ಚಕ್ರಪಾಣಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಾಣ ಹೋದರು ಪರವಾಗಿಲ್ಲ, ಧರ್ಮ ನಷ್ಟವಾಗಬಾರದು ಹಾಗೂ ಇದೇ ಕಾರಣದಿಂದ ಕೊರೊನಾ ವಿರುದ್ಧ ತಯಾರಿಸಲಾಗಿರುವ ಲಸಿಕೆಯಲ್ಲಿ ಹಸುವಿನ ರಕ್ತ ಬಳಕೆಯಾಗಿರುವ ಕುರಿತು ಸ್ಪಷ್ಟನೆ ಸಿಗದ ಹೊರತು ಲಸಿಕೆಯನ್ನು ಹಾಕಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ನವದೆಹಲಿ: ದೇಶಾದ್ಯಂತ ಮಾರಕ ಕೊರೊನಾ ವೈರಸ್ ವಿರುದ್ಧ ಸಿದ್ಧಪದಿಸಲಾಗುತ್ತಿರುವ ಲಸಿಕೆಯ ಕುರಿತು ಭಾರಿ ಕೋಲಾಹಲ ಸೃಷ್ಟಿಯಾಗುತ್ತಿದೆ. ಮುಸ್ಲಿಂ ಸಂಘಟನೆಗಳ ಬಳಿಕ ಇದೀಗ ಹಿಂದೂ ಮಹಾಸಭಾದ ಸ್ವಾಮಿ ಚಕ್ರಪಾಣಿ ವ್ಯಾಕ್ಸಿನ್ ಗೆ ಸಂಬಂಧಿಸಿದಂತೆ ಪ್ರಶ್ನೆ ಎತ್ತಿದ್ದಾರೆ. ಕೊರೊನಾ ವ್ಯಾಕ್ಸಿನ್ ನಲ್ಲಿ ಹಸುವಿನ ರಕ್ತ ಬಳಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಅದಕ್ಕೆ ಈ ದೇಶದಲ್ಲಿ ಬಳಕೆಗೆ ಅನುಮತಿ ಸಿಗಬಾರದು ಎಂದು ಅವರು ಹೇಳಿದ್ದಾರೆ. ಈ ಕುರಿತು ಚಕ್ರಪಾಣಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರಿಗೆ ವಿಜ್ನಪ್ತಿಯೊಂದನ್ನು ಸಲ್ಲಿಸಿದ್ದಾರೆ.
ವ್ಯಾಕ್ಸಿನ್ ಕಾರಣ ಧರ್ಮ ನಷ್ಟವಾಗಬಾರದು
ಈ ಲಸಿಕೆಯನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಆ ವ್ಯಕ್ತಿಯು ಧರ್ಮಕ್ಕೆ ವಿರುದ್ಧವಾಗಿದ್ದಾರೆಯೇ ಎಂಬುದು ಸ್ಪಷ್ಟವಾಗದ ಹೊರತು ಲಸಿಕೆಯನ್ನು ಭಾರತದಲ್ಲಿ ಬಳಸಬಾರದು ಎಂದು ಸ್ವಾಮಿ ಚಕ್ರಪಾಣಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. "ಕೊರೊನಾ ಬೇಗ ಅಂತ್ಯವಾಗಬೇಕು ಹಾಗೂ ವ್ಯಾಕ್ಸಿನೆಶನ್ ಕಾರ್ಯಕ್ರಮ ಕೂಡ ಬೇಗ ನಡೆಯಬೇಕು. ಆದರೆ, ಇದಕ್ಕಾಗಿ ಧರ್ಮ ನಷ್ಟವಾಗಬಾರದು". ಯಾವುದೇ ಒಂದು ಕಂಪನಿ ಔಷಧಿಯನ್ನು ತಯಾರಿಸಿದರೆ, ಔಷಧಿಯಲ್ಲಿ ಏನನ್ನು ಬಳಸಲಾಗಿದೆ ಎಂಬುದರ ಕುರಿತು ಮಾಹಿತಿ ನೀಡುತ್ತವೆ. ಹೀಗಾಗಿ ಕೊರೊನಾ ವ್ಯಾಕ್ಸಿನ್ (Covid-19 Vaccine) ಬಗ್ಗೆ ಈ ಮಾಹಿತಿ ಯಾಕೆ ಬಯಸಬಾರದು. ಅಮೇರಿಕಾದಲ್ಲಿ ತಯಾರಿಸಲಾಗಿರುವ ವ್ಯಾಕ್ಸಿನ್ ನಲ್ಲಿ ಹಸುವಿನ ರಕ್ತ ಬೆರೆಸಲಾಗಿದೆ ಎಂಬ ಮಾಹಿತಿ ನಮಗೆ ದೊರೆತಿದೆ" ಎಂದು ಸ್ವಾಮಿ ಚಕ್ರಪಾಣಿ ಹೇಳಿದ್ದಾರೆ.
ಇದನ್ನು ಓದಿ- Good News: ಕೋವಿಡ್ ವ್ಯಾಕ್ಸಿನ್ ಹೇಗೆ ವಿತರಣೆ ಮಾಡ್ತಾರೆ ಗೊತ್ತಾ? ಇಂದಿನಿಂದ ಡ್ರೈ ರನ್!
"ಸನಾತನ ಧರ್ಮದಲ್ಲಿ ಹಸುವನ್ನು ತಾಯಿ ಎಂದು ಭಾವಿಸಲಾಗುತ್ತದೆ ಹಾಗೂ ಹಸುವಿನ ರಕ್ತ ನಮ್ಮ ಶರೀರಕ್ಕೆ ತಲುಪಿದರೆ ನಮ್ಮ ಧರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಸನಾತನ ಧರ್ಮವನ್ನು ಮುಗಿಸಲು ಹಲವಾರು ವರ್ಷಗಳಿಂದ ಕುತಂತ್ರಗಳು ನಡೆಯುತ್ತಿವೆ. ಹೀಗಾಗಿ ಕೊರೊನಾ ವಿರುದ್ಧ ಹೊರಡುವ ಲಸಿಕೆ ಬರುತ್ತಿದ್ದರೆ, ವ್ಯಾಕ್ಸಿನ್ ಕುರಿತು ನಮಗ ಸಂಪೂರ್ಣ ಮಾಹಿತಿ ಇರುವುದು ಆವಶ್ಯಕ. ಈ ಕುರಿತಾದ ಎಲ್ಲಾ ಸಂಶಯಗಳು ನಿವಾರಣೆಯಾದ ಬಳಿಕ ಮಾತ್ರವೇ ವ್ಯಾಕ್ಸಿನ್ ಬಳಕೆಗೆ ಅನುಮತಿ ನೀಡಬೇಕು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- BIG NEWS: ಸ್ಥಳೀಯ ಲಸಿಕೆ 'Covaxin' ಸುರಕ್ಷಿತ ಮತ್ತು ಪರಿಣಾಮಕಾರಿ ಎಂದ ICMR
ವ್ಯಾಕ್ಸಿನ್ ಮಾಹಿತಿಯನ್ನು ಸರ್ಕಾರ ಸಾರ್ವಜನಿಕಗೊಳಿಸಬೇಕು
ಪ್ರಮುಖವಾಗಿ ಅಮೆರಿಕಾದಲ್ಲಿ ತಯಾರಿಸಲಾಗಿರುವ ಲಸಿಕೆಯ ಕುರಿತು ಸ್ವಾಮಿ ಚಕ್ರಪಾಣಿ ಮಾತನಾಡಿದ್ದಾರೆ. ಆದರೆ, ಈ ಮಾಹಿತಿ ಕೇವಲ ಅಮೆರಿಕಾದಲ್ಲಿ ತಯಾರಿಸಲಾಗಿರುವ ವ್ಯಾಕ್ಸಿನ್ ಗೆ ಸಂಬಂಧಿಸಿದಂತೆ ಮಾತ್ರ ಬಂದಿದೆ ಎಂಬುದಕ್ಕೆ ಅವರು ಒತ್ತು ನೀಡಿದ್ದಾರೆ. ಆದರೆ ದೇಶದಲ್ಲಿ ಯಾವುದೇ ವ್ಯಾಕ್ಸಿನ್ ಬಳಕೆಗೆ ಬಂದರೂ ಕೂಡ ಆ ವ್ಯಾಕ್ಸಿನ್ ಕುರಿತಾದ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸಬೇಕು. ನಂತರವಷ್ಟೇ ಅದನ್ನು ಯಾರಿಗೆ ಬೇಕಾದರೂ ನೀಡಬಹುದು ಎಂದು ಚಕ್ರಪಾಣಿ ಹೇಳಿದ್ದಾರೆ.
ಇದನ್ನು ಓದಿ- Good News: ಆಕ್ಸ್‌ಫರ್ಡ್ COVID-19 ಲಸಿಕೆಯ ತುರ್ತು ಬಳಕೆಗೆ ಮುಂದಿನ ವಾರವೇ ಅನುಮತಿ ಸಾಧ್ಯತೆ
ಪ್ರಾಣ ಹೋದರು ಪರವಾಗಿಲ್ಲ, ಧರ್ಮ ನಷ್ಟವಾಗಬಾರದು
"ಮೊದಲು ಭರವಸೆ ನೀಡಿ ನಂತರ ಬಳಕೆ ಮಾಡಿ ಎಂಬ ನೀತಿಯನ್ನು ನಾವು ಅನುಷ್ಥಾನಕ್ಕೆ ತರಬೇಕು. ವ್ಯಾಕ್ಸಿನ್ ನಲ್ಲಿ ಹಸುವಿನ ರಕ್ತ ಬಳಕೆಯಾಗಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿ ಕೊಡಿ. ಆ ಬಳಿಕ ಮಾತ್ರವೇ ಅದನ್ನು ಬಳಕೆಗೆ ಅನುಮತಿ ನೀಡಿ " ಎಂದು ಚಕ್ರಪಾಣಿ ಹೇಳಿದ್ದಾರೆ. ಜೊತೆಗೆ "ಪ್ರಾಣ ಹೋದರು ಚಿಂತೆಯಿಲ್ಲ, ಧರ್ಮಕ್ಕೆ ಚ್ಯುತಿ ಬರಬಾರದು. ಎಲ್ಲಿಯವರೆಗೆ ನಮಗೆ ಆ ಕುರಿತು ಭರವಸೆಯಾಗುವುದಿಲ್ಲವೋ ಅಲ್ಲಿಯ ವರೆಗೆ ವ್ಯಾಕ್ಸಿನ್ ಅನ್ನು ಹಾಕಿಸಿಕೊಳ್ಳುವುದಿಲ್ಲ" ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- Corona vaccine ಬಗ್ಗೆ ಶುಭ ಸುದ್ದಿ ನೀಡಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.