Good News: ಆಕ್ಸ್‌ಫರ್ಡ್‌ COVID-19 ಲಸಿಕೆಯ ತುರ್ತು ಬಳಕೆಗೆ ಮುಂದಿನ ವಾರವೇ ಅನುಮತಿ ಸಾಧ್ಯತೆ

ಲಸಿಕೆಯ ತುರ್ತು ಬಳಕೆಗೆ ಭಾರತದ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (CDSCO) ಅನುಮತಿ ನೀಡಬೇಕಾಗಿದ್ದು, ಕಳೆದ ವಾರ ಅದು ಔಷಧ ತಯಾರಿಕಾ ಸಂಸ್ಥೆ ಸೆರಂ ಇನ್ಸ್‌ಟಿಟ್ಯೂಟ್‌ ನಿಂದ ಕೆಲವು ದತ್ತಾಂಶಗಳನ್ನು ಕೇಳಿತ್ತು.‌ ಭಾರತದ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಕೇಳಿದ್ದ ದತ್ತಾಂಶಗಳನ್ನು ಸೆರಂ ಇನ್ಸ್‌ಟಿಟ್ಯೂಟ್‌ ನೀಡಿದೆ. ಆದುದರಿಂದ ಈಗ ಲಸಿಕೆ ತುರ್ತು ಬಳಕೆಗೆ ಮುಂದಿನ ವಾರವೇ ಅನುಮತಿ ಸಿಗಲಿದೆ ಎಂದು ಹೇಳಲಾಗುತ್ತಿದೆ.

Written by - Yashaswini V | Last Updated : Dec 24, 2020, 07:30 AM IST
  • ಬ್ರಿಟನ್‌ಗಿಂತ ಮೊದಲೇ ಭಾರತದಲ್ಲಿ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ಸೂಚಿಸುವ ಸಾಧ್ಯತೆ
  • ಈಗಾಗಲೇ ದತ್ತಾಂಶ ಸಂಗ್ರಹಿಸಿರುವ ಭಾರತದ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO)
  • ಶೀಘ್ರವೇ ಫೈಜರ್‌ ಮತ್ತು ಭಾರತ್ ಬಯೊಟೆಕ್‌‌ ಲಸಿಕೆಗಳ ತುರ್ತು ಬಳಕೆ ಬಗ್ಗೆಯೂ ಒಪ್ಪಿಗೆ ಸಾಧ್ಯತೆ
Good News: ಆಕ್ಸ್‌ಫರ್ಡ್‌  COVID-19 ಲಸಿಕೆಯ ತುರ್ತು ಬಳಕೆಗೆ ಮುಂದಿನ ವಾರವೇ ಅನುಮತಿ ಸಾಧ್ಯತೆ title=
Oxford-AstraZenica COVID vaccine (File Image)

ನವದೆಹಲಿ: ಹೊಸ ಸ್ವರೂಪದ ಕೊರೊನಾ ಪತ್ತೆಯಾಗಿ ಮತ್ತೊಮ್ಮೆ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ. ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್‌ ಯುನಿವರ್ಸಿಟಿ ಅಭಿವೃದ್ಧಿಪಡಿಸಿರುವ COVID-19 ಲಸಿಕೆಯ ತುರ್ತು ಬಳಕೆಗೆ ಭಾರತವು ಮುಂದಿನ ವಾರವೇ ಅನುಮತಿ ನೀಡಲಿದೆ ಎಂದು ತಿಳಿದುಬಂದಿದೆ.

ಲಸಿಕೆಯ ತುರ್ತು ಬಳಕೆಗೆ ಭಾರತದ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (CDSCO) ಅನುಮತಿ ನೀಡಬೇಕಾಗಿದ್ದು, ಕಳೆದ ವಾರ ಅದು ಔಷಧ ತಯಾರಿಕಾ ಸಂಸ್ಥೆ ಸೆರಂ ಇನ್ಸ್‌ಟಿಟ್ಯೂಟ್‌ ನಿಂದ ಕೆಲವು ದತ್ತಾಂಶಗಳನ್ನು ಕೇಳಿತ್ತು.‌ ಭಾರತದ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಕೇಳಿದ್ದ ದತ್ತಾಂಶಗಳನ್ನು ಸೆರಂ ಇನ್ಸ್‌ಟಿಟ್ಯೂಟ್‌ ನೀಡಿದೆ. ಆದುದರಿಂದ ಈಗ ಲಸಿಕೆ ತುರ್ತು ಬಳಕೆಗೆ ಮುಂದಿನ ವಾರವೇ ಅನುಮತಿ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಬ್ರಿಟನ್‌ನ ಔಷಧ ನಿಯಂತ್ರಣ ಸಂಸ್ಥೆ ಕೂಡ COVID-19 ಲಸಿಕೆಯ (Covid 19 Vaccine) ಮನುಷ್ಯನ ಮೇಲಿನ ಪ್ರಯೋಗಗಳ ದತ್ತಾಂಶ ವಿಶ್ಲೇಷಣೆಯನ್ನು ನಡೆಸುತ್ತಿದೆ. ಆದರೆ ವಿಶ್ಲೇಷಣಾ ಪ್ರಕ್ರಿಯೆ ಇನ್ನೂ ಅಂತಿಮ ಹಂತ ತಲುಪಿಲ್ಲ. ಆದುದರಿಂದ ಭಾರತ, ಬ್ರಿಟನ್‌ಗಿಂತ ಮೊದಲೇ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Covid-19 Vaccination Program: ಲಸಿಕಾಕರಣ ಕಾರ್ಯಕ್ರಮ ಸ್ವಯಂಪ್ರೆರಿತ ಎಂದ ಕೇಂದ್ರ ಆರೋಗ್ಯ ಸಚಿವಾಲಯ

ಭಾರತ ಮುಂದಿನ ವಾರವೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವುದಕ್ಕೆ ಮತ್ತೂ ಒಂದು ಕಾರಣ ಇದೆ. 2021ರ ಜನವರಿ ತಿಂಗಳಿನಿಂದಲೇ Covid ಲಸಿಕೆ ನೀಡಿಕೆ ಆರಂಭಿಸಲು ತಯಾರಿ ನಡೆಸುತ್ತಿದೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ (Dr. Harshwardhan) ಈ ವಿಷಯವನ್ನು ಬಹಿರಂಗವಾಗಿ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಾಯೋಗಿಕವಾಗಿ ಈಗ ತುರ್ತು ಬಳಕೆಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.

ಇದಲ್ಲದೆ ಭಾರತದ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (CDSCO) ಫೈಜರ್‌ ಮತ್ತು ಭಾರತ್ ಬಯೊಟೆಕ್‌‌ ಸಂಸ್ಥೆಗಳು ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳ ತುರ್ತು ಬಳಕೆಯ ಅನುಮತಿ ಅರ್ಜಿಗಳನ್ನೂ ಕೂಡ ಪರಿಶೀಲಿಸಲಿದೆ ಎಂಬ ಶುಭ‌ ಸುದ್ದಿ ಕೂಡ ಲಭಿಸಿದೆ.

ಭಾರತವು ಜಗತ್ತಿನಲ್ಲಿಯೇ ಅತಿ ಹೆಚ್ಚು ಲಸಿಕೆ ತಯಾರಿಸುವ ದೇಶ ಜೊತೆಗೆ ಅತಿ ಹೆಚ್ಚು ಲಸಿಕೆಗಳು ಅಗತ್ಯ ಇರುವ ದೇಶ. ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್‌ ಯುನಿವರ್ಸಿಟಿ ಅಭಿವೃದ್ಧಿಪಡಿಸಿರುವ COVID-19 ಲಸಿಕೆ ಕಡಿಮೆ ಆದಾಯ ಇರುವ ದೇಶಗಳು ಮತ್ತು ಹೆಚ್ಚು ತಾಪಮಾನ ಇರುವ ದೇಶಗಳಿಗೆ ಸೂಕ್ತವಾದದ್ದಾಗಿದೆ.

ಇದನ್ನೂ ಓದಿ: ಬ್ರಿಟನ್‌ನಿಂದ ಭಾರತಕ್ಕೆ ಬಂದವರೆಲ್ಲರನ್ನೂ ಪತ್ತೆ ಹಚ್ಚಿ RT-PCR ಟೆಸ್ಟ್ ಮಾಡಿಸಲು ಸೂಚನೆ

ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್‌ ಯುನಿವರ್ಸಿಟಿ ಅಭಿವೃದ್ಧಿಪಡಿಸಿರುವ COVID-19 ಲಸಿಕೆಯ ದರ ಕಡಿಮೆ ಎನ್ನುವುದರ ಜೊತೆಗೆ ಭಾರತದಂತಹ ಭೌಗೋಳಿಕವಾಗಿ ವಿಸ್ತೀರ್ಣವಾದ ದೇಶಗಳಲ್ಲಿ ಸಾಗಾಟ ಮಾಡುವುದಕ್ಕೂ ಸುಲಭವಾಗಿದೆ. ಸಾಮಾನ್ಯ ಫ್ರಿಜ್‌ನ ತಾಪಮಾನದಲ್ಲಿ ದೀರ್ಘಕಾಲದವರೆಗೆ ಈ ಲಸಿಕೆಗಳನ್ನು ಇರಿಸಬಹುದಾಗಿದೆ.

ಸದ್ಯ ಭಾರತದ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (CDSCO) ಜೊತೆ ಆಸ್ಟ್ರಾಜೆನೆಕಾ ಸಂಸ್ಥೆಯ ಹಾಗೂ ಭಾರತದ ಆರೋಗ್ಯ ಇಲಾಖೆ ಅಧಿಕಾರಿಗಳು ಸಂಪರ್ಕದಲ್ಲಿದ್ದು ಮುಂದಿನ ವಾರದಲ್ಲೇ ಅನುಮತಿ ಸಿಗಬಹುದೆಂಬ ಮುನ್ಸೂಚನೆಗಳು ದೊರೆಯುತ್ತಿವೆ.

ಲಸಿಕೆ ವಿತರಣೆಗೂ ಕೂಡ ಅಗತ್ಯ ತಯಾರಿಗಳಾಗಿದ್ದು ಮೊದಲ ಹಂತದಲ್ಲಿ 5ರಿಂದ 6 ಕೋಟಿ ಡೋಸ್ ಲಸಿಕೆಗಳು‌ ಲಭ್ಯವಾಗಬಹುದು. ಸೆರಂ ಸಂಸ್ಥೆಯು ಈಗಾಗಲೇ 5 ಕೋಟಿ ಡೋಸ್‌ಗಳನ್ನು ತಯಾರಿಸಿದೆ. ,2021ರ ಜುಲೈ ವೇಳೆಗೆ 40 ಕೋಟಿ ಡೋಸ್‌ ಉತ್ಪಾದನೆ ಆಗಲಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ. ಆದರೆ ಲಸಿಕೆಗಳ ಪೂರೈಕೆ ಬಗ್ಗೆ ಭಾರರವು ಯಾವುದೇ ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಕೊಂಡಿಲ್ಲ.

ಇದನ್ನೂ ಓದಿ: ಹೊಸ ಪ್ರಭೇಧದ ಕೋವಿಡ್ ವೈರಸ್ ಪತ್ತೆ; ತತ್ತರವಾದ ಜಗತ್ತು- ಇಲ್ಲಿವೆ ಪ್ರಮುಖ ಬೆಳವಣಿಗೆಗಳ ಸಾರ

ಆಸ್ಟ್ರಾಜೆನೆಕಾ (AstraZenica) ಕಂಪನಿಯು ಈ ತಿಂಗಳ ಆರಂಭದಲ್ಲಿ ಬ್ರಿಟನ್‌ ಮತ್ತು ಬ್ರೆಜಿಲ್‌ನಲ್ಲಿ ಮನುಷ್ಯನ ಮೇಲೆ ನಡೆಸಿದ ಪ್ರಯೋಗಗಳ ಫಲಿತಾಂಶವನ್ನು  ಬಹಿರಂಗಪಡಿಸಿದೆ. ಎರಡು ಪೂರ್ಣ ಡೋಸ್‌ ಪಡೆದವರಲ್ಲಿ ಲಸಿಕೆ ಪರಿಣಾಮವು ಶೇ 62ರಷ್ಟಿದ್ದರೆ, ಮೊದಲಿಗೆ ಅರ್ಧ ಮತ್ತು ನಂತರ ಪೂರ್ಣ ಡೋಸ್‌ ಪಡೆದವರಲ್ಲಿ ಪರಿಣಾಮ ಶೇ 90ರಷ್ಟಿತ್ತು ಎಂಬ ಫಲಿತಾಂಶ ಹೊರಬಿದ್ದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News