ನವದೆಹಲಿ: ಕೊರೊನಾವೈರಸ್ ಈಗಾಗಲೇ ದೇಶದಲ್ಲಿ 1 ಕೋಟಿಗೂ ಹೆಚ್ಚು ಜನರಿಗೆ ತಗುಲಿದೆ. 1 ಲಕ್ಷದ 45 ಸಾವಿರಕ್ಕೂ ಹೆಚ್ಚು ಜನರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇಂಥ ಆತಂಕಕಾರಿ ಪರಿಸ್ಥಿತಿಯ ನಡುವೆ ಕೊರೋನಾ ಲಸಿಕೆ ಕುರಿತು ಸಂಶೋಧನೆ ನಡೆಯುತ್ತಿದೆ. ಪರಿಣಾಮಕಾರಿಯಾದ ಮತ್ತು ಸುರಕ್ಷಿತವಾದ ಲಸಿಕೆ ಶೀಘ್ರದಲ್ಲೇ ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಶುಭ ಸುದ್ದಿ ನೀಡಿದ್ದಾರೆ.
"ಸುರಕ್ಷತೆ ಮತ್ತು ಲಸಿಕೆಯನ್ನು ಪರಿಣಾಮಕಾರಿಯಾಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಇದರೊಂದಿಗೆ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ಜನವರಿ ತಿಂಗಳ ಯಾವುದೇ ವಾರದಲ್ಲಿ ಲಸಿಕೆ ಸಿಗುವಂತಾಗಬಹುದೆಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಜನವರಿಯಲ್ಲಿ ಭಾರತದ ಜನರು ತಮ್ಮ ಮೊದಲ ಕೊರೋನಾ ಲಸಿಕೆಯನ್ನು ಪಡೆಯಬಹುದು" ಎಂದು ಆರೋಗ್ಯ ಸಚಿವ ಡಾ. ಹರ್ಷವರ್ಧನ್ (Dr Harsh Vardhan) ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
Our first priority has been safety & effectiveness of vaccines. We don't want to compromise on that. I personally feel, maybe in any week of January, we can be in a position to give first COVID vaccine shot to people of India: Union Health Minister Dr Harsh Vardhan to ANI pic.twitter.com/I6rNWc4tad
— ANI (@ANI) December 20, 2020
ಭಾರತದಲ್ಲಿ ಇನ್ನೂ ಯಾವುದೇ ಲಸಿಕೆಗಳ ಬಳಕೆಗೆ ಅನುಮೋದನೆ ನೀಡಿಲ್ಲ. ಆದರೆ ಸರ್ಕಾರ ಕೊರೊನಾ ಲಸಿಕೆ ಹಾಕಲು ಸಿದ್ಧತೆ ಆರಂಭಿಸಿದೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ SOPಗಳನ್ನು ಕಳುಹಿಸಿದೆ. SOP ಪ್ರಕಾರ, ವ್ಯಾಕ್ಸಿನೇಷನ್ ಸೈಟ್ನಲ್ಲಿ ಗರಿಷ್ಠ 100-200 ಜನರಿಗೆ ಒಂದು ಹಂತದಲ್ಲಿ (ಒಂದು ದಿನ) ಕೊರೊನಾ ಲಸಿಕೆ ಹಾಕಬಹುದಾಗಿದೆ.
ಇದನ್ನೂ ಓದಿ: ಸರ್ಕಾರದ ಚಿಂತೆ ಹೆಚ್ಚಿಸಿದ ಕರೋನವೈರಸ್‌ನ ಹೊಸ ರೂಪಾಂತರ
ಕೊರೊನಾ ಲಸಿಕೆ (Corona Vaccine) ಯಲ್ಲಿ ಯಾರಿಗೆ ಆದ್ಯತೆ ನೀಡಲಾಗುವುದು ಎಂದು ಅದರ ನೀಲನಕ್ಷೆಯನ್ನು ಈಗಾಗಲೇ ಸರ್ಕಾರ ಸಿದ್ಧಪಡಿಸಿದೆ. ಮೊದಲನೆಯದಾಗಿ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು. ನಂತರ 2 ಕೋಟಿ ಮುಂಚೂಣಿ ಕಾರ್ಮಿಕರಿಗೆ ಆದ್ಯತೆ ನೀಡಲಾಗುವುದು. ಮೂರನೇ ಆದ್ಯತೆಯನ್ನು ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ 50 ವರ್ಷಕ್ಕಿಂತ ಹೆಚ್ಚಿನ ಕೆಳಗಿನ 1 ಕೋಟಿ ಜನರಿಗೆ ನೀಡಲಾಗುವುದು. ನಾಲ್ಕನೇ ಆದ್ಯತೆ 50 ವರ್ಷಕ್ಕಿಂತ ಮೇಲ್ಪಟ್ಟ 26 ಕೋಟಿ ಜನರಿಗೆ ನೀಡಲಾಗುವುದು. ಐದನೇ ಆದ್ಯತೆಯಾಗಿ ದೇಶದ ಒಟ್ಟು 30 ಕೋಟಿ ಜನರಿಗೆ ಕರೋನಾ ಲಸಿಕೆ ಹಾಕುವ ಸಿದ್ಧತೆ ನಡೆಸಲಾಗಿದೆ.
ಮತ್ತೊಂದೆಡೆ, ಭಾರತದಲ್ಲಿ ಕರೋನಾವೈರಸ್ (Coronavirus) ಸೋಂಕಿನ ಸಂಖ್ಯೆ 1,00,31,223ಕ್ಕೆ ಏರಿದೆ. ಆರೋಗ್ಯ ಸಚಿವಾಲಯ ಭಾನುವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಕೊರೋನಾ ಸೋಂಕಿನ ಸಂಖ್ಯೆ 1,00,31,223ಕ್ಕೆ ಏರಿದೆ. 26,624 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 1,45,447ಕ್ಕೆ ಏರಿದೆ. ಈವರೆಗೆ ಕೊರೋನಾದಿಂದ ಒಟ್ಟು 95,80,402 ರೋಗಿಗಳಿ ಗುಣ ಆಗಿದ್ದಾರೆ.
ಇದನ್ನೂ ಓದಿ: Covid-19 ಮಕ್ಕಳಿಗೆ Paralysis Attack ಸಮಸ್ಯೆಯನ್ನೂ ತಂದೊಡ್ಡಬಹುದು- ಸಂಶೋಧನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.