COVID-19 vaccination : 2 ದಿನದಲ್ಲಿ Co-Win ಪೋರ್ಟಲ್‌ನಲ್ಲಿ 2.28 ಕೋಟಿಗೂ ಅಧಿಕ ಜನ ನೋಂದಣಿ!
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಪ್ರಕಟಣೆ
ನವದೆಹಲಿ : ಕೋವಿಡ್ ವ್ಯಾಕ್ಸಿನೇಷನ್‌ಗಾಗಿ ಕೋ-ವಿನ್ ಪೋರ್ಟಲ್‌ನಲ್ಲಿ ಕೇವಲ ಎರಡು ದಿನಗಳಲ್ಲಿ 2.28 ಕೋಟಿ ಅಧಿಕ ಜನ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶಾದ್ಯಂತ ಸಧ್ಯ ವ್ಯಾಕ್ಸಿನೇಷನ್(Vaccination) 15.21 ಕೋಟಿಗಿಂತ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗಿಗೆ ನೀಡುವ ಮೂರನೇ ಹಂತದ ವ್ಯಾಕ್ಸಿನೇಷನ್ ನೋಂದಣಿ ಮೇ 1 ರಿಂದ ಪ್ರಾರಂಭವಾಗಲಿದೆ.
ಇದನ್ನೂ ಓದಿ : Soli Sorabjee : ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಬ್ಜಿ ಕೊರೋನಾಗೆ ಬಲಿ!
ದೇಶದಲ್ಲಿ ಇಂದು ರಾತ್ರಿ 8 ಗಂಟೆಯವರೆಗೆ 20 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಅಲ್ಲದೆ, ಮೂರನೇ ಹಂತದ ವ್ಯಾಕ್ಸಿನೇಷನ್ ಗಾಗಿ ಕೋ-ವಿನ್ ಪೋರ್ಟಲ್(Co-Win Portal) ನೊಂದಣಿ ಆರಂಭವಾಗಿ ಕೇವಲ 2 ದಿನಗಳಲ್ಲಿ 2.28 (2,28,99,157) ಜನ ನೊಂದಹಿಸಿಕೊಂಡಿದ್ದಾರೆ.
ಇದನ್ನೂ ಓದಿ : ಭಾರತದ ಮಹಾ ಲಸಿಕೆ ಅಭಿಯಾನಕ್ಕೆ ಮಹಾ ವಿಘ್ನ.! ಪರಿಹಾರ ಏನು..?
ರಾತ್ರಿ 8 ರ ತಾತ್ಕಾಲಿಕ ವರದಿಯ ಪ್ರಕಾರ ದೇಶದಲ್ಲಿ ನೀಡಲಾಗುವ ಕೋವಿಡ್ 19(Covid-19) ಲಸಿಕೆಯ ಒಟ್ಟು ಪ್ರಮಾಣ 15,21,05,563 ಆಗಿದೆ. ಇದರಲ್ಲಿ 1 ನೇ ಡೋಸ್ ತೆಗೆದುಕೊಂಡ 93,85,676 ಹೆಲ್ತ್‌ಕೇರ್ ವರ್ಕರ್ಸ್ (ಎಚ್‌ಸಿಡಬ್ಲ್ಯು) ಮತ್ತು 2 ನೇ ಡೋಸ್ ತೆಗೆದುಕೊಂಡವಾರ ಸಂಖ್ಯೆ 61,89,635 ಎಚ್‌ಸಿಡಬ್ಲ್ಯೂ, 1,24,12,904 ಫ್ರಂಟ್ಲೈನ್ ವರ್ಕರ್ಸ್ (ಎಫ್‌ಎಲ್‌ಡಬ್ಲ್ಯೂ) (1 ನೇ ಡೋಸ್), 67,04,193 ಎಫ್‌ಎಲ್‌ಡಬ್ಲ್ಯೂ (2 ನೇ ಡೋಸ್), 45 ವರ್ಷದಿಂದ 60 ವರ್ಷ ವಯಸ್ಸಿನವರಿಗೆ 5,17,23,607 (1 ನೇ ಡೋಸ್), 45 ವರ್ಷದಿಂದ 60 ವರ್ಷಕ್ಕೆ 34,02,049 (2 ನೇ ಡೋಸ್), 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 5,18,72,503 (1 ನೇ ಡೋಸ್) ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ (2 ನೇ ಡೋಸ್) 1,04,14,996 "ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : ಕರೋನಾ ಮೂರನೇ ಅಲೆಯ ಭಯ.! ಮಹಾರಾಷ್ಟ್ರ ಸರ್ಕಾರ ಮಾಡುತ್ತಿರುವುದೇನು ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.