ನವದೆಹಲಿ: ಹಿರಿಯ ಕಾನೂನು ತಜ್ಞ ಮತ್ತು ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಬ್ಜಿ(91) ಅವರು ಇಂದು ಕೊರೋನಾದಿಂದ ನಿಧನ ಹೊಂದಿದ್ದಾರೆ.
ಸೋಲಿ ಸೊರಬ್ಜಿ ಅವರಿಗೆ ಕೊರೋನಾ ಸೋಂಕು(Coronavirus) ಕಾಣಿಸಿಕೊಂಡ ನಂತರ ಅವರನ್ನ ದೆಹಲಿಯ ಖಾಸಗಿ ಆಸ್ಪತ್ರಗೆ ದಾಖಲು ಮಾಡಲಾಗಿತ್ತು. ಇಂದು ಬೆಳಗ್ಗೆ ಅಲ್ಲಯೇ ನಿಧನ ಹೊಂದಿದ್ದಾರೆ.
ಇದನ್ನೂ ಓದಿ : ಭಾರತದ ಮಹಾ ಲಸಿಕೆ ಅಭಿಯಾನಕ್ಕೆ ಮಹಾ ವಿಘ್ನ.! ಪರಿಹಾರ ಏನು..?
ಸೋಲಿ ಸೊರಬ್ಜಿ(Soli Sorabjee) ಅವರು ಬಾಂಬೆಯಲ್ಲಿ 1930 ರಲ್ಲಿ ಜನಿಸಿದರು. 1953 ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದರು.
ಇದನ್ನೂ ಓದಿ : ಕರೋನಾ ಮೂರನೇ ಅಲೆಯ ಭಯ.! ಮಹಾರಾಷ್ಟ್ರ ಸರ್ಕಾರ ಮಾಡುತ್ತಿರುವುದೇನು ಗೊತ್ತಾ..?
ಸೋಲಿ ಸೊರಬ್ಜಿ ಅವರು 1971 ರಲ್ಲಿ ಸುಪ್ರೀಂ ಕೋರ್ಟ್(Supreme Court) ಹಿರಿಯ ವಕೀಲರಾಗಿ ನೇಮಕವಾದರು. ಅವರು ಸುಮಾರು ಏಳು ದಶಕಗಳ ಕಾಲ ಕಾನೂನು ಸೇವೆ ಸಲ್ಲಿಸಿದರು ಮತ್ತು ಭಾರತಕ್ಕೆ ಎರಡು ಬಾರಿ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. - ಮೊದಲು ಭಾರಿ 1989-90 ಮತ್ತು ಮೊದಲ ಎನ್‌ಡಿಎ ಅಧಿಕಾರಾವಧಿಯಲ್ಲಿ ಎರಡನೇ ಭಾರಿಗೆ ಅವಧಿ 1998 ರಿಂದ 2004 ರವರೆಗೆ ಕೆಲಸ ಮಾಡಿದ್ದಾರೆ. ಇವರು ಸೇವೆಗೆ ಪದ್ಮವಿಭೂಷಣ ಪ್ರಶಸ್ತಿಗೆ ಕೂಡ ಭಾಜನರಿಗಿದ್ದರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.