ಎರಡು ದಿನಗಳ ಭೇಟಿಗೆ ಲೇಹ್ಗೆ ಆಗಮಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಭಾರತ-ಚೀನಾ ಗಡಿಯಲ್ಲಿನ ಘರ್ಷಣೆ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಈ ಹಿನ್ನಲೆಯಲ್ಲಿ ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ (ಎಲ್‌ಎಸಿ) ಪ್ರದೇಶಕ್ಕೆ ಭೇಟಿ ನೀಡಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಲೇಹ್ ತಲುಪಿದ್ದಾರೆ.
ನವದೆಹಲಿ: ಭಾರತ-ಚೀನಾ ಗಡಿಯಲ್ಲಿನ ಉದ್ವಿಗ್ನತೆ ಮುಂದುವರೆದಿದೆ. ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ (LAC) ಪ್ರದೇಶಕ್ಕೆ ಭೇಟಿ ನೀಡಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಲೇಹ್ ತಲುಪಿದ್ದಾರೆ. ಅವರೊಂದಿಗೆ ಸಿಡಿಎಸ್ ಬಿಪಿನ್ ರಾವತ್ (Bipin Rawat) ಕೂಡ ಇದ್ದಾರೆ. ರಾಜನಾಥ್ ಸಿಂಗ್ ಎರಡು ದಿನಗಳ ಪ್ರವಾಸದಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ಗೆ ಹೋಗಲಿದ್ದಾರೆ. ಎಲ್‌ಎಸಿ ಜೊತೆಗೆ ಅವರು ಎಲ್‌ಒಸಿಯ ಸ್ಟಾಕ್ ಅನ್ನು ಸಹ ತೆಗೆದುಕೊಳ್ಳುತ್ತಾರೆ. ಈ ವೇಳೆ ಚೀಫ್ ಜನರಲ್ ಮನೋಜ್ ಮುಕುಂದ್ ನರ್ವಾನೆ ಅವರು ರಕ್ಷಣಾ ಸಚಿವರೊಂದಿಗೆ ಹೋಗಲಿದ್ದಾರೆ.
ಪೂರ್ವ ಲಡಾಕ್‌ನಲ್ಲಿರುವ ಫಾರ್ವರ್ಡ್ ಪೋಸ್ಟ್‌ಗೆ ರಕ್ಷಣಾ ಸಚಿವರು ಭೇಟಿ ನೀಡಲಿದ್ದಾರೆ. ರಕ್ಷಣಾ ಸಚಿವರು ಉತ್ತರ ಕಮಾಂಡ್ ಮತ್ತು ಲೆಹ್ ಕಾರ್ಪ್ಸ್ ಕಮಾಂಡರ್ ಅವರಿಂದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಜಮ್ಮು ಮತ್ತು ಕಾಶ್ಮೀರವನ್ನು ತಲುಪಲಿದ್ದು, ಎಲ್‌ಒಸಿಯಲ್ಲಿ ಸೈನ್ಯದ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ರಾಜನಾಥ್ ಸಿಂಗ್ ಅವರು ಶ್ರೀನಗರದ ಪಾಕಿಸ್ತಾನ ಗಡಿಯಲ್ಲಿರುವ ಪ್ರದೇಶಗಳಿಗೂ ಭೇಟಿ ನೀಡಲಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರ ಭೇಟಿಯು ಚೀನಾ ಮತ್ತು ಪಾಕಿಸ್ತಾನ ಎರಡಕ್ಕೂ ಒಂದು ಸಂದೇಶವನ್ನು ನೀಡಲಿದೆ. ಚೀನಾಕ್ಕೆ ಭಾರತವು ತನ್ನ ವಿಸ್ತರಣಾವಾದವನ್ನು ಸಹಿಸುವುದಿಲ್ಲ ಮತ್ತು ಚೀನಾದ ಅತಿಕ್ರಮಣ ನೀತಿಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದೆ. ಇದೇ ವೇಳೆ ಪಾಕಿಸ್ತಾನಕ್ಕೆ ಅದರ ಪಿಒಕೆ ಆಕ್ರಮಣದ ಅಂತ್ಯದ ಕ್ಷಣಗಣನೆ ಪ್ರಾರಂಭವಾಗಿದೆ ಮತ್ತು ಯಾವುದೇ ಭಯೋತ್ಪಾದಕ ದಾಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಲಿದೆ ಎಂಬ ಸಂದೇಶವನ್ನು ರವಾನಿಸಲಿದೆ.
ಕಠಿಣ ಕ್ರಮ ಕೈಗೊಳ್ಳಲು ಅಮೆಜಾನ್ ಸಿದ್ಧತೆ, ಚೀನಾಕ್ಕೆ ಮತ್ತೊಂದು ದೊಡ್ಡ ಹೊಡೆತ
ಗಾಲ್ವಾನ್‌ನಲ್ಲಿ ಭಾರತದೊಂದಿಗೆ ಘರ್ಷಣೆ ಸೃಷ್ಟಿಸುವ ಮೂಲಕ ತಾನು ದೊಡ್ಡ ತಪ್ಪು ಮಾಡಿದ್ದೇನೆ ಎಂದು ಚೀನಾ ಭಾರತದ ದಾಳಿ ಮತ್ತು ಬಹಿಷ್ಕಾರದ ನೀತಿ ಅರ್ಥಮಾಡಿಕೊಂಡಿದ್ದು ಇದೀಗ ಅವರು ದೊಡ್ಡ ಬೆಲೆ ತೆರಬೇಕಾಗುತ್ತಿದೆ.
ಗಾಲ್ವಾನ್ ಕಣಿವೆಯಲ್ಲಿ ಹಿಂಸಾತ್ಮಕ ಘರ್ಷಣೆ:
ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿತ್ತು. ಈ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾದರೆ, ಚೀನಾ (China) ಕೂಡ ಭಾರೀ ನಷ್ಟವನ್ನು ಅನುಭವಿಸಿರುವುದಾಗಿ ಹೇಳಿಕೊಂಡಿದೆ.