ನವದೆಹಲಿ: ದೇಶದಲ್ಲಿ ಚೀನಾದ ಕಂಪನಿಗಳು ಮತ್ತು ಉತ್ಪನ್ನಗಳ ವಿರುದ್ಧ ಪ್ರತಿಭಟನೆ ಮುಂದುವರೆದಿದೆ. ಏತನ್ಮಧ್ಯೆ ಅತಿದೊಡ್ಡ ಇ-ಕಾಮರ್ಸ್ ಸೈಟ್ ಅಮೆಜಾನ್ (Amazon) ನಿಂದ ಚೀನಾದ ಕಂಪನಿಗಳಿಗೆ ಹಿನ್ನಡೆಯಾಗಲಿದೆ. ಚೀನಾ (China) ವಿರುದ್ಧ ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಜನರ ವಿರೋಧದ ಮಧ್ಯೆ ಅಮೆಜಾನ್ ತನ್ನ ಎಲ್ಲಾ ಉತ್ಪನ್ನಗಳ ಬಗ್ಗೆ ಮೂಲದ ದೇಶವನ್ನು ನಮೂದಿಸಲು ನಿರ್ಧರಿಸಿದೆ. ಈ ಹಂತದಿಂದ ಭಾರತೀಯ ಗ್ರಾಹಕರು ಚೀನಾದ ಉತ್ಪನ್ನಗಳನ್ನು ಕಡಿಮೆ ಖರೀದಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಆಗಸ್ಟ್ 10 ರಿಂದ ನಿಯಮಗಳು ಜಾರಿಗೆ ಬರುವ ಸಾಧ್ಯತೆ:
ಲಭ್ಯವಾದ ಮಾಹಿತಿಯ ಪ್ರಕಾರ ಅಮೆಜಾನ್ ತನ್ನ ಸೈಟ್ನಲ್ಲಿರುವ ಎಲ್ಲಾ ಕಂಪನಿಗಳನ್ನು ಆಗಸ್ಟ್ 10 ರೊಳಗೆ ತನ್ನ ಉತ್ಪನ್ನಗಳ ಮೂಲದ ದೇಶದ ಮಾಹಿತಿಯನ್ನು ಹಂಚಿಕೊಳ್ಳಲು ಕೇಳಿಕೊಂಡಿದೆ. ಮಾರಾಟವಾಗುವ ಉತ್ಪನ್ನದಲ್ಲಿ ಈ ಪ್ರಮುಖ ಮಾಹಿತಿಯು ಕಂಡುಬರದಿದ್ದರೆ, ಕಂಪನಿಯ ಹೆಸರನ್ನು ತೆಗೆದುಹಾಕಬಹುದು ಎಂದು ಅಮೆಜಾನ್‌ಗೆ ಸಂಬಂಧಿಸಿದ ಎಲ್ಲಾ ಕಂಪನಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಇಂಡೋ-ಚೀನಾ (Indo-china) ಗಡಿ ವಿವಾದ ಇತ್ತೀಚೆಗೆ ಹೆಚ್ಚಾಗಲು ಮತ್ತು ಈ ನಡುವೆ ದೇಶೀಯ ಮಾರುಕಟ್ಟೆಯಲ್ಲಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ಕಾರಣ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ 59 ಚೀನಾದ ಆ್ಯಪ್‌ಗಳನ್ನುಬ್ಯಾನ್ ಮಾಡಿದ ನಂತರ ಚೀನಾದ ಉತ್ಪನ್ನಗಳು ಮತ್ತು ಕಂಪನಿಗಳ ವಿರುದ್ಧ ಪ್ರತಿಭಟನೆ ಹೆಚ್ಚುತ್ತಿದೆ.
ಏತನ್ಮಧ್ಯೆ ದೇಶೀಯ ಸಂಸ್ಥೆಗಳು ಚೀನಾದ ಉತ್ಪನ್ನಗಳನ್ನು ವಿರೋಧಿಸಲು ಪ್ರಾರಂಭಿಸಿವೆ ಎಂಬುದು ಗಮನಾರ್ಹ. ಕೆಲವು ಸಂಸ್ಥೆಗಳು ಚೀನಾದ ಉತ್ಪನ್ನಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿವೆ. ಇತ್ತೀಚೆಗೆ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಭಾರತದ ಎಲ್ಲಾ ಇ-ಕಾಮರ್ಸ್ ತಾಣಗಳಲ್ಲಿ ಮಾರಾಟವಾಗುವ ಉತ್ಪನ್ನಗಳ ಬಗ್ಗೆ ಮೂಲ ದೇಶವನ್ನು ಉಲ್ಲೇಖಿಸಬೇಕು. ಆದ್ದರಿಂದ ಖರೀದಿದಾರರು ತಮ್ಮ ವಿವೇಚನೆಯಿಂದ ಸರಕುಗಳನ್ನು ಖರೀದಿಸಲು ನಿರ್ಧರಿಸಬಹುದು ಎಂದು ಒತ್ತಾಯಿಸಿದೆ.