ಈ ವ್ಯವಹಾರ ಪ್ರಾರಂಭಿಸಲು ಸರ್ಕಾರವೇ ನಿಮಗೆ ಸಹಾಯ ಮಾಡುತ್ತೆ
ಡೈರಿ ವ್ಯವಹಾರ ಯೋಜನೆಯನ್ನು ಸಿದ್ಧಪಡಿಸುವ ಮೂಲಕ ನೀವು ಸರ್ಕಾರಿ ಬ್ಯಾಂಕಿನಲ್ಲಿ ಮುದ್ರಾ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ನವದೆಹಲಿ : ಕರೋನಾವೈರಸ್ (Coronavirus) ಪ್ರಾಣಕ್ಕೆ ಸಂಚಕಾರ ತಂದಿರುವುದು ಮಾತ್ರವಲ್ಲ ಕೋವಿಡ್-19 (Covid-19) ತಡೆಗಟ್ಟುವ ಸಲುವಾಗಿ ಜಾರಿಗೆ ತರಲಾದ ಲಾಕ್‌ಡೌನ್ ನಿಂದಾಗಿ ಲಕ್ಷಾಂತರ ಜನರ ನೌಕರಿಗೂ ಕೊಕ್ಕೆ ಬಿದ್ದಿದೆ. ಈ ಹಿನ್ನಲೆಯಲ್ಲಿ ನೀವೇನಾದರೂ ಲಾಕ್‌ಡೌನ್ ನಂತರ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ ಡೈರಿ ಉತ್ಪನ್ನಗಳ ವ್ಯವಹಾರವು ನಿಮಗೆ ಅನುಕೂಲಕರವಾಗಿದೆ.
ಲಾಕ್‌ಡೌನ್ (Lockdown) ನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಇದಲ್ಲದೆ ಸಾಮಾನ್ಯ ದಿನಗಳಲ್ಲೂ ಡೈರಿ ಉತ್ಪನ್ನಗಳ ಬೇಡಿಕೆಗೇನು ಕೊರತೆಯಿಲ್ಲ. ಡೈರಿ ವ್ಯವಹಾರವು ವೈಫಲ್ಯದ ಸಾಧ್ಯತೆ ಹೊಂದಿರದ ವ್ಯವಹಾರವಾಗಿದೆ. ಕಡಿಮೆ ಹೂಡಿಕೆ ಮಾಡಿ ಈ ವ್ಯವಹಾರ ಪ್ರಾರಂಭಿಸುವ ಮೂಲಕ ನೀವು ಪ್ರತಿ ತಿಂಗಳು ಗಣನೀಯ ಮೊತ್ತವನ್ನು ಗಳಿಸಬಹುದು.
ಮುದ್ರಾ ಸಾಲ ಯೋಜನೆಯಿಂದ ಸಿಗಲಿದೆ ಸಹಾಯ:
ಹೊಸ ಡೈರಿ (Dairy) ವ್ಯವಹಾರವನ್ನು ಪ್ರಾರಂಭಿಸುವಲ್ಲಿ ನೀವು ಯಾವುದೇ ಹಣದ ಕೊರತೆಯನ್ನು ಎದುರಿಸುವುದಿಲ್ಲ, ಏಕೆಂದರೆ ಕೇಂದ್ರ ಸರ್ಕಾರದ ಮುದ್ರಾ ಸಾಲ ಯೋಜನೆಯೊಂದಿಗೆ ನಿಮ್ಮ ಕೆಲಸವನ್ನು ಪ್ರಾರಂಭಿಸಲು ನೀವು ಸಾಲವನ್ನು ತೆಗೆದುಕೊಳ್ಳಬಹುದು. ವಿಶೇಷ ಸಂಗತಿಯೆಂದರೆ ಹೊಸ ವ್ಯವಹಾರವನ್ನು ಪ್ರಾರಂಭಿಸುವಾಗ ಸರ್ಕಾರವು ಹಣಕ್ಕೆ ಸಹಾಯ ಮಾಡುವುದಲ್ಲದೆ ಇಡೀ ಯೋಜನೆಯ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತದೆ.
ಈ ವಸ್ತುಗಳನ್ನು ಉತ್ಪಾದಿಸಬಹುದು:
ಡೈರಿ ಉತ್ಪನ್ನಗಳಲ್ಲಿ ನೀವು ಪ್ರತ್ಯೇಕವಾಗಿ ಮಾಡಬಹುದಾದ ಹಲವು ಉತ್ಪನ್ನಗಳಿವೆ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಅದರ ವೆಚ್ಚ ಮತ್ತು ಬೇಡಿಕೆಯ ಬಗ್ಗೆ ಸಂಶೋಧನೆ ನಡೆಸಬೇಕು. ನೀವು ರುಚಿಯಾದ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪವನ್ನು ತಯಾರಿಸಬಹುದು ಮತ್ತು ಮಾರಾಟ ಮಾಡಬಹುದು.
ಯೋಜನೆಯನ್ನು ಸಿದ್ಧಪಡಿಸುವ ಮೂಲಕ ನೀವು ಯಾವುದೇ ಸರ್ಕಾರಿ ಬ್ಯಾಂಕಿನಲ್ಲಿ ಮುದ್ರಾ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಯೋಜನೆಯ 70 ಪ್ರತಿಶತದಷ್ಟು ಹಣವನ್ನು ನೀವು ಸಾಲವಾಗಿ ಪಡೆಯುತ್ತೀರಿ. ನೀವು ಕೇವಲ 30 ಪ್ರತಿಶತದಷ್ಟು ಹಣದ ವ್ಯವಸ್ಥೆ ಮಾತ್ರ ಮಾಡಬೇಕು.