57 ಸ್ಥಾನಗಳಿಗೆ ಉಪಚುನಾವಣೆ ಘೋಷಿಸಿದ ಚುನಾವಣಾ ಆಯೋಗ, ಎಲ್ಲಿ? ಯಾವಾಗ? ಎಂದು ತಿಳಿಯಿರಿ
ಆದರೆ ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿನ 7 ಸ್ಥಾನಗಳಿಗೆ ಉಪಚುನಾವಣೆ ನಡೆಸದಿರಲು ಚುನಾವಣಾ ಆಯೋಗ ನಿರ್ಧರಿಸಿದೆ.
ನವದೆಹಲಿ: ಭಾರತದ ಚುನಾವಣಾ ಆಯೋಗ (Election Commission Of India) 56 ವಿಧಾನಸಭಾ ಸ್ಥಾನಗಳು ಮತ್ತು ಒಂದು ಲೋಕಸಭಾ ಸ್ಥಾನಗಳಿಗೆ ಉಪ ಚುನಾವಣಾ ದಿನಾಂಕವನ್ನು ಮಂಗಳವಾರ ಪ್ರಕಟಿಸಿದೆ. ನವೆಂಬರ್ 3 ರಂದು ಈ ಸ್ಥಾನಗಳಿಗೆ ಮತದಾನ ನಡೆಯಲಿದ್ದು ನವೆಂಬರ್ 10ರಂದು ಮತ ಎಣಿಕೆ ಮಾಡಲಾಗುತ್ತದೆ. ಬಿಹಾರ ವಿಧಾನಸಭಾ ಚುನಾವಣೆ 2020ರ ಫಲಿತಾಂಶವೂ ನವೆಂಬರ್ 10ರಂದು ಹೊರಬರಲಿದೆ. ಬಿಹಾರದ ವಾಲ್ಮೀಕಿ ನಗರ ಲೋಕಸಭಾ ಸ್ಥಾನದಲ್ಲಿ ನವೆಂಬರ್ 3ರಂದು ಉಪಚುನಾವಣೆ ನಡೆಯಲಿದ್ದು, ಈ ಕ್ಷೇತ್ರದ ಫಲಿತಾಂಶವೂ ನವೆಂಬರ್ 10ರಂದು ಬರಲಿದೆ.
ಈ ಪ್ರದೇಶಗಳಲ್ಲಿ ಉಪಚುನಾವಣೆ ಕಹಳೆ:
ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಒಡಿಶಾ, ನಾಗಾಲ್ಯಾಂಡ್, ಮಣಿಪುರ, ತೆಲಂಗಾಣ, ಜಾರ್ಖಂಡ್ ಮತ್ತು ಕರ್ನಾಟಕದ 56 ವಿಧಾನಸಭಾ ಸ್ಥಾನಗಳಲ್ಲಿ ಉಪಚುನಾವಣೆ ನಡೆಯಲಿದೆ. ಆದರೆ ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ 7 ಸ್ಥಾನಗಳಿಗೆ ಉಪಚುನಾವಣೆ ನಡೆಸದಿರಲು ಚುನಾವಣಾ ಆಯೋಗ (Election Commission) ನಿರ್ಧರಿಸಿದೆ. ಉಪಚುನಾವಣೆ ನಡೆಯದ ಸ್ಥಾನಗಳಲ್ಲಿ ಅಸ್ಸಾಂನ ರಂಗಪರಾ ಮತ್ತು ಸಿಬ್ಸಾಗರ್ ಸ್ಥಾನಗಳು, ಕೇರಳದ ಕುಟ್ಟನಾಡ ಮತ್ತು ಚವರ ಸ್ಥಾನಗಳು, ತಿರುವಿನೋಟಿಯೂರ್, ಗುಡಿಯತ್ತಮ್ ಮತ್ತು ತಮಿಳುನಾಡಿನ ಫಲಕತ್ ಸ್ಥಾನಗಳು ಸೇರಿವೆ.
ಮಧ್ಯ ಪ್ರದೇಶದ (Madhya pradesh) 28 ವಿಧಾನಸಭಾ ಸ್ಥಾನಗಳ ಉಪಚುನಾವಣೆಗಳ (By Election) ಮೇಲೆ ಎಲ್ಲರ ಚಿತ್ತ:
ಈ 56 ಸ್ಥಾನಗಳಲ್ಲಿ ಮಧ್ಯಪ್ರದೇಶದ 28 ವಿಧಾನಸಭಾ ಸ್ಥಾನಗಳಲ್ಲಿನ ಉಪಚುನಾವಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಈ 28 ರಲ್ಲಿ ಕಾಂಗ್ರೆಸ್ ಶಾಸಕರ ರಾಜೀನಾಮೆ ನಂತರ 25 ಸ್ಥಾನಗಳು ಖಾಲಿ ಇವೆ. ಶಾಸಕರ ಅಕಾಲಿಕ ನಿಧನದಿಂದಾಗಿ 3 ಸ್ಥಾನಗಳಲ್ಲಿ ಉಪಚುನಾವಣೆ ನಡೆಯುತ್ತಿದೆ.
ಲವ್ ಲೈಫ್ ಮೇಲೂ ಚುನಾವಣೆಗಳು ಪ್ರಭಾವ ಬೀರುತ್ತವಂತೆ!
ಗ್ವಾಲಿಯರ್-ಚಂಬಲ್ ಕ್ಷೇತ್ರ:
1. ಮೊರೆನಾ
2. ಮೆಹಗಾಂವ್
3. ಗ್ವಾಲಿಯರ್ ಪೂರ್ವ
4. ಗ್ವಾಲಿಯರ್
5. ದಬ್ರಾ
6. ಬಮೌರಿ
7. ಅಶೋಕ್ ನಗರ
8. ಅಂಬಾ
9. ಪೌಹರಿ
10. ಭಂದರ್
11. ಸುಮಾವಾಲಿ
12. ಕರೇರಾ
13. ಮುಂಗೋಲಿ
14. ಗೋಹಾದ್
15 . ಡಿಮ್ನಿ
16. ಸುರ್ಖಿ.
ಮಾಲ್ವಾ-ನಿಮಾರ್ ಕ್ಷೇತ್ರ:
1. ಸುವಸ್ರಾ
2. ಮಾಂಧತ
3. ಸನ್ವರ್
4. ಜೌರಾ
5. ಅಗರ್
6. ಬದ್ನವಾರ್
7. ಹತ್ಪಿಪಾಲ್ಯ
8. ನೇಪನಗರ
ಕರೋನಾ ಏಕಾಏಕಿ ನಡುವೆ ಅಸೆಂಬ್ಲಿ ಎಲೆಕ್ಷನ್‌ಗಳಿಗಾಗಿ ಚುನಾವಣಾ ಆಯೋಗ ಯಾವ ಕ್ರಮ ಕೈಗೊಳ್ಳಲಿದೆ?
ಇತರ ಪ್ರದೇಶಗಳು:
1. ಸಾಂಚಿ (ಭೋಪಾಲ್)
2. ಮಲ್ಹರಾ (ಛತ್ರಪುರ)
3. ಅನುಪ್ಪೂರ್
4. ಬಿಯಾವರಾ (ರಾಜ್‌ಗಢ)
ಜೌರಾ, ಅಗರ್ ಮತ್ತು ಬಿಯೋರಾ ಸ್ಥಾನಗಳ 3 ಶಾಸಕರು ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.