EPFO UAN Bank Account Details Update: ಇಪಿಎಫ್ ಚಂದಾದಾರರಿಗೆ (EPF Subscribers)ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ನೌಕರರ ಭವಿಷ್ಯ ನಿಧಿ ಸಂಘಟನೆ (EPFO) EPFO ​​ಗಾಗಿ ಹೊಸ ಅಪ್ಡೇಟ್ ಅನ್ನು ಜಾರಿಗೆ ತಂದಿದೆ. ಇದೀಗ ಈಶಾನ್ಯ ಸಂಸ್ಥೆಗಳು ಮತ್ತು ಕೆಲವು ವಿಶೇಷ ವರ್ಗದ ಸಂಸ್ಥೆಗಳಿಗಾಗಿ UAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಗಡುವನ್ನು 31 ಡಿಸೆಂಬರ್ 2021 ರವರೆಗೆ ವಿಸ್ತರಿಸಿದೆ. ಇಪಿಎಫ್‌ಒ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಈ ಮಾಹಿತಿಯನ್ನು ಟ್ವೀಟ್ ಮಾಡಿದೆ.


EPFO ​​ಎಲ್ಲಾ ಉದ್ಯೋಗಿಗಳಿಗೆ 1 ಸೆಪ್ಟೆಂಬರ್ 2021 ಅನ್ನು UAN ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಕೊನೆಯ ದಿನಾಂಕ ನೀಡಿತ್ತು. ಆದರೆ ಇದೀಗ ಅದನ್ನು ಡಿಸೆಂಬರ್ 31 ರವರೆಗೆ ಹೆಚ್ಚಿಸಲಾಗಿದೆ. ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-FY21 ನಲ್ಲಿ ನಿಮ್ಮ ITR ಫೈಲ್ ಮಾಡ್ತೀರಾ? ಹಾಗಿದ್ರೆ ನೆನಪಿನಲ್ಲಿಡಿ ಈ ಪ್ರಮುಖ ಅಂಶಗಳು


ನಿಮ್ಮ PF ಖಾತೆಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ನೀವು ಹೇಗೆ ಲಿಂಕ್ (How To Link PF Account With Aadhaar Card)
>> ಇದಕ್ಕಾಗಿ ಮೊದಲು www.epfindia.gov.in ಭೇಟಿ ನೀಡಿ
>> ಉದ್ಯೋಗಿಗಳ ಟ್ಯಾಬ್ ಗೆ ಹೋಗಿ ಮತ್ತು 'ಯುಎಎನ್ ಸದಸ್ಯ ಇ-ಸೇವಾ'(UAN Member E-Sewa Portal) ಲಿಂಕ್ ಆಯ್ಕೆ ಮಾಡಿ
>> ನಿಮ್ಮ UAN ID ಮತ್ತು Password ನೊಂದಿಗೆ ಲಾಗಿನ್ ಮಾಡಿ
>> 'ಟ್ಯಾಬ್ ನಿರ್ವಹಿಸಿ' ಅಡಿಯಲ್ಲಿ, KYC ಆಯ್ಕೆಯನ್ನ ಆಯ್ಕೆಮಾಡಿ


ಇದನ್ನೂ ಓದಿ-Big PPF update!: ಈಗ ಪೋಸ್ಟ್ ಆಫೀಸ್ ಭೇಟಿ, ಚೆಕ್ ಪ್ರಕ್ರಿಯೆ ಇಲ್ಲದೆ ಹಣ ಹಿಂಪಡೆದುಕೊಳ್ಳಬಹುದು..

>> ನಿಮ್ಮನ್ನು ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ (ಅಲ್ಲಿ ನೀವು ನಿಮ್ಮ ಇಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಲು ಹಲವಾರು ದಾಖಲೆಗಳನ್ನ ಅಪ್ ಲೋಡ್ ಮಾಡಲು ಟ್ಯಾಬ್ʼಗಳನ್ನು ಕಾಣಬಹುದು)
>> 'ಆಧಾರ್' ಟ್ಯಾಬ್ ಅನ್ನು ಆಯ್ಕೆ ಮಾಡಿ
>> ವಿವರಗಳನ್ನು ಭರ್ತಿ ಮಾಡಿ ಮತ್ತು 'Save' ಮೇಲೆ ಕ್ಲಿಕ್ ಮಾಡಿ
>> ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ಪರಿಶೀಲಿಸಲಾಗುತ್ತದೆ.
>> ಉದ್ಯೋಗದಾತರು ಮತ್ತು UIDAI ನಿಮಗೆ ವಿವರಗಳನ್ನು ಅನುಮೋದಿಸಿದ ನಂತರ, ನಿಮ್ಮ PF ಖಾತೆ ಆಧಾರ್ ಕಾರ್ಡ್ʼಗೆ ಲಿಂಕ್ ಆಗುತ್ತೆ.


ಇದನ್ನೂ ಓದಿ-Alert! SBI ಗ್ರಾಹಕರು ಓದಲೇಬೇಕಾದ ಸುದ್ದಿ ಇದು, ಬೇಗ ಈ ಕೆಲಸ ಮುಗಿಸಿಕೊಳ್ಳಿ ಇಲ್ದಿದ್ರೆ...?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.