SBI Alert! ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಗ್ರಾಹಕರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಬ್ಯಾಂಕ್ ಜಾರಿಗೊಳಿಸಿರುವ ನೋಟಿಸ್ ನಲ್ಲಿ ಗ್ರಾಹಕರು ಪ್ಯಾನ್ ಕಾರ್ಡ್ (PAN Card) ಅನ್ನು ಆಧಾರ್ ಕಾರ್ಡ್(Aadhaar Card) ಜೊತೆ ಲಿಂಕ್ ಮಾಡಬೇಕು ಎಂದು ಸೂಚಿಸಲಾಗಿದೆ. ಇದಕ್ಕಾಗಿ, ಬ್ಯಾಂಕ್ ವತಿಯಿಂದ ಸೆಪ್ಟೆಂಬರ್ 30 ರವರೆಗೆ ಗಡುವು (Aadhaar-PAN Linking Deadline) ನೀಡಲಾಗಿದೆ. ಬ್ಯಾಂಕ್ ಪ್ರಕಾರ, ಗ್ರಾಹಕರು ಈ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ದರೆ, ಮುಂಬರುವ ಸಮಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂದು ಹೇಳಲಾಗಿದೆ.
We advise our customers to link their PAN with Aadhaar to avoid any inconvenience and continue enjoying a seamless banking service.#ImportantNotice #AadhaarLinking #Pancard #AadhaarCard pic.twitter.com/bVGDbbYajX
— State Bank of India (@TheOfficialSBI) September 10, 2021
ಬ್ಯಾಂಕ್ ವತಿಯಿಂದ ಈ ಕುರಿತು ಟ್ವೀಟ್ ಮಾಡಲಾಗಿದ್ದು, ಟ್ವೀಟ್ ನಲ್ಲಿ 'ಯಾವುದೇ ರೀತಿಯ ಅಸೌಕರ್ಯದಿಂದ ಪಾರಾಗಲು ಗ್ರಾಹಕರು ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಲು ಬ್ಯಾಂಕ್ ಸಲಹೆ ನೀಡುತ್ತದೆ ಎನ್ನಲಾಗಿದೆ. ಒಂದು ವೇಳೆ ನಿಗತ್ದಿತ ಸಮಯದಲ್ಲಿ ಈ ಕೆಲಸವನ್ನು ಮಾಡದೆ ಹೋದಲ್ಲಿ ಗ್ರಾಹಕರ ಪ್ಯಾನ್ ಕಾರ್ಡ್ ನಿಷ್ಕ್ರೀಯ ಎಂದು ಭಾವಿಸಲಾಗುವುದು ಎನ್ನಲಾಗಿದೆ. ಆಧಾರ್ ಜೊತೆಗೆ ಪ್ಯಾನ್ ಕಾರ್ಡ್ ಜೋಡಣೆ ಅನಿವಾರ್ಯವಾಗಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-LIC Scheme:LICಯ ಈ ಸೂಪರ್ ಹಿಟ್ ಯೋಜನೆಯಲ್ಲಿ ಸಿಗುತ್ತಿದೆ 1ಕೋಟಿ ರೂ.ಗಳ ಲಾಭ, ಇಲ್ಲಿದೆ ಡಿಟೇಲ್ಸ್
PAN-Aadhaar ಲಿಂಕ್ ಮಾಡುವುದು ಹೇಗೆ?
>> ಇದಕ್ಕಾಗಿ ಮೊದಲು ಆದಾಯ ತೆರಿಗೆ ಇಲಾಖೆಯ www.incometax.gov.in.ಗೆ ಭೇಟಿ ನೀಡಿ.
>> ಬಳಿಕ Our Services ನಲ್ಲಿ ನೀಡಲಾಗಿರುವ Link Aadhaar ಮೇಲೆ ಕ್ಲಿಕ್ಕಿಸಬೇಕು.
>> ಅಲ್ಲಿ ನೀವು ನಿಮ್ಮ PAN ಹಾಗೂ Aadhaar ಸಂಖ್ಯೆಯನ್ನು ನಮೂದಿಸಬೇಕು.
>> ನಿಮ್ಮ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಮೇಲೆ ನಿಮ್ಮ ಹೆಸರು ಒಂದೇ ಆಗಿರಬೇಕು.
>> ಒಂದು ವೇಳೆ ನಿಮ್ಮ ಆದಾರ್ ಕಾರ್ಡ್ ನಲ್ಲಿ ಜನನ ವರ್ಷವಿದ್ದರೆ, ಕೆಳಗೆ ನೀಡಲಾಗಿರುವ ಒಂದು ಚಿಕ್ಕ ಬಾಕ್ಸ್ ನಲ್ಲಿ ಕ್ಲಿಕ್ಕಿಸಿ.
>> ಇದಾದ ಬಳಿಕ 'Link Aadhaar' ಮೇಲೆ ಕ್ಲಿಕ್ಕಿಸಿ. ಇದಾದ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ.
>> ಈ ರೀತಿ ನಿಮ್ಮ ಆಧಾರ್ ಹಾಗೂ ಪ್ಯಾನ್ ಸಂಖ್ಯೆಗಳು ಲಿಂಕ್ ಆಗಲಿವೆ.
ಇದನ್ನೂ ಓದಿ-Income Tax Return : ತೆರಿಗೆದಾರರಿಗೆ ಸಿಹಿ ಸುದ್ದಿ : IT ರಿಟರ್ನ್ ಸಲ್ಲಿಸುವ ದಿನಾಂಕ ಮತ್ತೆ ವಿಸ್ತರಣೆ
ಎಸ್‌ಎಂಎಸ್ ಕಳುಹಿಸುವ ಮೂಲಕ ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡುವ ವಿಧಾನ
ಇದಕ್ಕಾಗಿ, ನಿಮ್ಮ ಫೋನ್‌ನಲ್ಲಿ ನೀವು - ಯುಐಡಿಪಿಎನ್ ಎಂದು ಟೈಪ್ ಮಾಡಬೇಕು. ಇದರ ನಂತರ, 12-ಅಂಕಿಯ ಆಧಾರ್ ಸಂಖ್ಯೆ ಮತ್ತು ನಂತರ 10-ಅಂಕಿಯ ಪ್ಯಾನ್ ಸಂಖ್ಯೆಯನ್ನು ಬರೆಯಿರಿ. ಈಗ ಹಂತ 1 ರಲ್ಲಿ ತಿಳಿಸಲಾದ ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಿ.
ಇದನ್ನೂ ಓದಿ-Yamaha Festive Offers: ದ್ವಿಚಕ್ರ ವಾಹನಗಳ ಮೇಲೆ ಬಂಪರ್ ಆಫರ್ ಘೋಷಿಸಿದ ಯಮಹಾ ಮೋಟಾರ್ ಇಂಡಿಯಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.