Fact Check: `ಸಬ್ ಕಾ ಸಾಥ್, ಸಬ್ ಕಾ ವಿಕಾಸ್` ಯೋಜನೆಯಡಿ ಪ್ರತಿಯೊಬ್ಬರ ಖಾತೆಗೆ 1 ಲಕ್ಷ ರೂ.! ನಿಜಾನಾ?
Fact Check -ಕೇಂದ್ರ ಸರ್ಕಾರ ` ಪ್ರಧಾನ ಮಂತ್ರಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ (Sab Ka Saath-Sab Ka Vikas)` ಯೋಜನೆಯ ಅಡಿ ಎಲ್ಲ ನಾಗರಿಕರ ಖಾತೆಗೆ 1 ಲಕ್ಷ ರೂ. ಧನರಾಶಿ ವರ್ಗಾಯಿಸಲಿದೆ ಎಂಬ ವಾಟ್ಸ್ ಆಪ್ ಸಂದೇಶ ಭಾರಿ ವೈರಲ್ ಆಗುತ್ತಿದೆ. ಒಂದು ವೇಳೆ ನಿಮಗೂ ಕೂಡ ನಿಮ್ಮ ವಾಟ್ಸ್ ಆಪ್ ಖಾತೆಯಲ್ಲಿ ಈ ಸಂದೇಶ ಬಂದಿದ್ದರೆ, ಈಗಲೇ ಎಚ್ಚೆತ್ತುಕೊಳ್ಳಿ.
ನವದೆಹಲಿ: Fact Check - ಕೇಂದ್ರ ಸರ್ಕಾರ ' ಪ್ರಧಾನ ಮಂತ್ರಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಯೋಜನೆಯ ಅಡಿ ಎಲ್ಲ ನಾಗರಿಕರ ಖಾತೆಗೆ 1 ಲಕ್ಷ ರೂ. ಧನರಾಶಿ ವರ್ಗಾಯಿಸಲಿದೆ ಎಂಬ ವಾಟ್ಸ್ ಆಪ್ ಸಂದೇಶ ಭಾರಿ ವೈರಲ್ ಆಗುತ್ತಿದೆ. ಒಂದು ವೇಳೆ ನಿಮಗೂ ಕೂಡ ನಿಮ್ಮ ವಾಟ್ಸ್ ಆಪ್ ಖಾತೆಯಲ್ಲಿ ಈ ಸಂದೇಶ ಬಂದಿದ್ದರೆ, ಈಗಲೇ ಎಚ್ಚೆತ್ತುಕೊಳ್ಳಿ. ಇದಕ್ಕೆ ಸಂಬಂಧಿಸಿದ ಲಿಂಕ್ ತೆರೆದು ಆಧಾರ್, ಪ್ಯಾನ್, ಬ್ಯಾಂಕ್ ಖಾತೆ, OTP ಗಳಂತಹ ಯಾವುದೇ ಮಾಹಿತಿಯನ್ನು ಹಂಚಿಕೊಲ್ಲಬೇಡಿ. ಇದೊಂದು ಫೇಕ್ ಮೆಸೇಜ್ ಆಗಿದೆ. PIB Fact Check ನಡೆಸಿರುವ ತಪಾಸಣೆಯಲ್ಲಿ ಇದೊಂದು ಸುಳ್ಳು ಸುದ್ದಿ ಎಂದು ಹೇಳಲಾಗಿದೆ. ಖುದ್ದು PIB Fact Check ತಂಡ ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದೆ.
ಇದನ್ನು ಓದಿ- ಪ್ರತಿ ವಾರ ಬದಲಾಗಲಿದೆಯೇ LPG ಬೆಲೆ! ಇದರ ಸತ್ಯಾಸತ್ಯತೆ ಏನು?
ಭಾರತ ಸರ್ಕಾರದ ನೀತಿಗಳು, ಕಾರ್ಯಕ್ರಮಗಳ ಆರಂಭ ಹಾಗೂ ಸರ್ಕಾರದ ಸಾಧನೆಗಳ ಬಗ್ಗೆ ವೃತ್ತಪತ್ರಿಕೆಗಳಿಗೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸೂಚನೆ ನೀಡುವ ಪ್ರಮುಖ ಏಜೆನ್ಸಿ PIB ಆಗಿದೆ. ಹೀಗಾಗಿ PIB ಈ ಕುರಿತಾದ ವದಂತಿಗಳನ್ನು ಅಲ್ಲಗಳೆದಿದೆ ಮತ್ತು ಕೇಂದ್ರ ಸರ್ಕಾರ ಈ ರೀತಿಯ ಯಾವುದೇ ಯೋಜನೆಯನ್ನು ಘೋಷಿಸಿಲ್ಲ.
ಮೋದಿ ಸರ್ಕಾರದಿಂದ ಪ್ರತಿ ಕುಟುಂಬಕ್ಕೂ ಸಿಗಲಿದೆಯೇ 10 ಸಾವಿರ ರೂ.? ಇದರ ಹಿಂದಿನ ಸತ್ಯವನ್ನು ತಿಳಿಯಿರಿ
ಈ ರೀತಿಯ ಭ್ರಮೆ ಹುಟ್ಟಿಸುವ ವರದಿಗಳ ಕುರಿತು ಇಲ್ಲಿ ದೂರು ನೀಡಿ
ಸರ್ಕಾರದ (Modi Government) ಕುರಿತು ಹೇಳಲಾಗುತ್ತಿರುವ ಯಾವುದೇ ಮಾಹಿತಿ ಸರಿಯಾಗಿದೆ ಅಥವಾ ತಪ್ಪಾಗಿದೆ ಎಂಬುದನ್ನು ತಿಳಿದುಕೊಳ್ಳಲು PIB FACT CHECK ಸಹಾಯ ಪಡೆದುಕೊಳ್ಳಬಹುದು. ಸಂದೆಹಾತ್ಮಕ ವರದಿಗಳ ಸ್ಕ್ರೀನ್ ಶಾಟ್, ಟ್ವೀಟ್, ಫೇಸ್ ಬುಕ್ ಪೋಸ್ಟ್ ಅಥವಾ URL ಅನ್ನು ನೀವು ವಾಟ್ಸ್ ಆಪ್ ಸಂಖ್ಯೆಯಾಗಿರುವ 918799711259ಗೆ ನೀವು ಕಳುಹಿಸಬಹುದು ಅಥವಾ pibfactcheck@gmail.com ಗೆ ಮೇಲ್ ಕೂಡ ಮಾಡಬಹುದು.
ಇದನ್ನು ಓದಿ- Modi Govt ವಿದ್ಯಾರ್ಥಿಗಳಿಗೆ Free Laptop & Smartphone ಗಳನ್ನು ವಿತರಿಸುತ್ತಿದೆಯಂತೆ ! ನಿಜಾನಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.