Sexual Assault in India: ಇಂದೆಥಾ ನೀಚ ಕೃತ್ಯ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ತಂದೆ, ಚಿಕ್ಕಪ್ಪ, ಅಜ್ಜ!
Sexual Assault in India: ಸದ್ಯ ಈ ಘಟನೆಯ ಕುರಿತು ಪುಣೆ ಪೊಲೀಸ್ ಠಾಣೆಯಲ್ಲಿ ಬಾಲಕಿ ದೂರು ನೀಡಿದ್ದಾಳೆ. ಈ ದೂರಿನಲ್ಲಿ ತಂದೆ, ಚಿಕ್ಕಪ್ಪ ಅತ್ಯಾಚಾರ ನಡೆಸಿದ್ದು, ಅಜ್ಜ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬರೆದಿದ್ದಾಳೆ.
Sexual Assault in India: ದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಇದೆಂಥಾ ನೀಚ ಕೃತ್ಯವಯ್ಯಾ? ಎಂಬ ಅಸಹ್ಯ ಪ್ರಶ್ನೆ ಮೂಡಿಸುವಂತಿದೆ. ಸಂಬಂಧಗಳನ್ನೂ ಸಹ ಮರೆತು ಉತ್ತರ ಪ್ರದೇಶ ಮೂಲದ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ತಂದೆ, ಚಿಕ್ಕಪ್ಪ ಮತ್ತು ಅಜ್ಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಈ ಘಟನೆಯ ಕುರಿತು ಪುಣೆ ಪೊಲೀಸ್ ಠಾಣೆಯಲ್ಲಿ ಬಾಲಕಿ ದೂರು ನೀಡಿದ್ದಾಳೆ. ಈ ದೂರಿನಲ್ಲಿ ತಂದೆ, ಚಿಕ್ಕಪ್ಪ ಅತ್ಯಾಚಾರ ನಡೆಸಿದ್ದು, ಅಜ್ಜ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬರೆದಿದ್ದಾಳೆ.
ಇದನ್ನೂ ಓದಿ: Dog Snake Fight: ಮಾಲೀಕನ ಜೀವ ಉಳಿಸಲು ಕೊನೆ ಕ್ಷಣದವರೆಗೂ ಹಾವಿನ ಜತೆ ಕಾದಾಡಿದ ಶ್ವಾನ!
ದೇಶದಲ್ಲಿ ಪ್ರತೀ ದಿನ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿದ್ದು, ಇವೆಲ್ಲದಕ್ಕೂ ಮುಕ್ತಿ ಎಂದು ಎಂಬ ಪ್ರಶ್ನೆ ಕಾಡುತ್ತಿದೆ. ಸದ್ಯ ಬಾಲಕಿಯು ಲೈಂಗಿಕ ಕಿರುಕುಳದ ಕುರಿತು ಕಾಲೇಜಿನ ವಿಶಾಖ ಸಮಿತಿಗೆ ತಿಳಿಸಿದ್ದಳು. ಇದಾದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ತಂದೆಯನ್ನು ಬಂಧಿಸಲಾಗಿದೆ. ಐಪಿಸಿ ಹಾಗೂ ಪೋಕ್ಸೊ ಕಾಯ್ದೆಯಡಿಯಲ್ಲಿ ಮೂವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ತನಿಖೆ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: Shraddha Murder Case : ಗರ್ಭಿಣಿಯಾಗಿದ್ದಳಾ ಶ್ರದ್ಧಾ!? ಬಗೆದಷ್ಟು ಹೊರಬರುತ್ತಿದೆ ಈ ʻಪೀಸ್ʼವಾಲಾನ ಕುಕೃತ್ಯ!
2016 ರಿಂದ 2018ರವರೆಗೆ ಮನೆಯಲ್ಲಿದ್ದಾಗ ಈಕೆಯ ಮೇಲೆ ಚಿಕ್ಕಪ್ಪ ಅತ್ಯಾಚಾರ ನಡೆಸಿದ್ದನು. ಅಷ್ಟೇ ಅಲ್ಲದೆ ಅಜ್ಜ ಕೂಡ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ತಂದೆಯ ಬಳಿಕ ಹೇಳಿಕೊಂಡಿದ್ದ ಬಾಲಕಿ ಆತನೇ ದುರುಳ ಎಂಬುದು ತಿಳಿದಿರಲಿಲ್ಲ ಅನಿಸುತ್ತದೆ. ಒಂದು ದಿನ ಮನೆಯಲ್ಲಿ ತಾಯಿ ಇಲ್ಲದಿದ್ದಾಗ ತಂದೆ ಕೂಡ ಅತ್ಯಾಚಾರ ಎಸಗಿದ್ದಾನೆ. ಘಟನೆಯಿಂದ ತೀವ್ರ ನೋವು ಅನುಭವಿಸಿದ ಬಾಲಕಿ ತನ್ನ ಕಾಲೇಜಿನಲ್ಲಿರುವ ವಿಶಾಖ ಸಮಿತಿಯ ಅಧಿಕಾರಿಗಳಿಗೆ ಹೇಳಿದ್ದಾಳೆ. ಬಳಿಕ ದೂರಿನ ಅನ್ವಯ ಪೊಲೀಸರಿಗೆ ಕಂಪ್ಲೇಟ್ ನೀಡಲಾಗಿದೆ ಎಂದು ತಿಳಿದುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.