Dog Snake Fight: ಮಾಲೀಕನ ಜೀವ ಉಳಿಸಲು ಕೊನೆ ಕ್ಷಣದವರೆಗೂ ಹಾವಿನ ಜತೆ ಕಾದಾಡಿದ ಶ್ವಾನ!

Dog Snake Fight: ನಾಯಿಗಳ ಬಗ್ಗೆ ಮಾತನಾಡುವಾಗಲೆಲ್ಲ ನಿಷ್ಠೆ ಎಂಬ ಮಾತು ಕೇಳಿಬರುತ್ತದೆ. ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎಂದರೆ ತಪ್ಪಾಗಲಾರದು. ನಾಯಿಗಳು ತಮ್ಮ ಮಾಲೀಕರಿಗೆ ತುಂಬಾ ನಿಷ್ಠರಾಗಿರುತ್ತವೆ. ಮಾಲೀಕರಿಗೆ ತೊಂದರೆಯಾದಾಗ ಸಾಕು ನಾಯಿಗಳು ಪ್ರಾಣಪಣಕ್ಕಿಟ್ಟು ಕಾಪಾಡುತ್ತವೆ. ಅದಕ್ಕೆ ಈ ಘಟನೆಯೇ ಉದಾಹರಣೆ. 

Written by - Chetana Devarmani | Last Updated : Nov 17, 2022, 10:44 AM IST
  • ನಾಯಿಗಳ ಬಗ್ಗೆ ಮಾತನಾಡುವಾಗಲೆಲ್ಲ ನಿಷ್ಠೆ ಎಂಬ ಮಾತು ಕೇಳಿಬರುತ್ತದೆ
  • ನಾಯಿಗಳು ತಮ್ಮ ಮಾಲೀಕರಿಗೆ ತುಂಬಾ ನಿಷ್ಠರಾಗಿರುತ್ತವೆ
  • ಮಾಲೀಕನ ಜೀವ ಉಳಿಸಲು ಕೊನೆ ಕ್ಷಣದವರೆಗೂ ಹಾವಿನ ಜತೆ ಕಾದಾಡಿದ ಶ್ವಾನ
Dog Snake Fight: ಮಾಲೀಕನ ಜೀವ ಉಳಿಸಲು ಕೊನೆ ಕ್ಷಣದವರೆಗೂ ಹಾವಿನ ಜತೆ ಕಾದಾಡಿದ ಶ್ವಾನ!   title=
ಗಬ್ಬರ್‌

Dog Snake Fight: ನಾಯಿಗಳ ಬಗ್ಗೆ ಮಾತನಾಡುವಾಗಲೆಲ್ಲ ನಿಷ್ಠೆ ಎಂಬ ಮಾತು ಕೇಳಿಬರುತ್ತದೆ. ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎಂದರೆ ತಪ್ಪಾಗಲಾರದು. ನಾಯಿಗಳು ತಮ್ಮ ಮಾಲೀಕರಿಗೆ ತುಂಬಾ ನಿಷ್ಠರಾಗಿರುತ್ತವೆ. ಮಾಲೀಕರಿಗೆ ತೊಂದರೆಯಾದಾಗ ಸಾಕು ನಾಯಿಗಳು ಪ್ರಾಣಪಣಕ್ಕಿಟ್ಟು ಕಾಪಾಡುತ್ತವೆ. ಅದಕ್ಕೆ ಈ ಘಟನೆಯೇ ಉದಾಹರಣೆ. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಾಯಿಯೊಂದು ತನ್ನ ಯಜಮಾನನ ಜೀವ ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಘಟನೆ ನಡೆದಿದೆ. ತನ್ನ ಮಾಲೀಕನ ಜೀವ ಉಳಿಸಲು, ಗಬ್ಬರ್ ಎಂಬ ನಾಯಿಯು ಪ್ರಪಂಚದ ಅತ್ಯಂತ ವಿಷಕಾರಿ ಹಾವು ರಸೆಲ್ ವೈಪರ್‌ನೊಂದಿಗೆ ಹೋರಾಡಿ ಸಾಯುವವರೆಗೂ ಕಚ್ಚುತ್ತಲೇ ಇತ್ತು. ಹಾವು ಕೂಡ ಗಬ್ಬರ್ ಮೇಲೆ ಹಲವು ಬಾರಿ ದಾಳಿ ಮಾಡಿದ್ದು, ಸ್ವಲ್ಪ ಸಮಯದಲ್ಲೇ ಗಬ್ಬರ್‌ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದ ಗಬ್ಬರ್ ಮಾಲೀಕ ಆಘಾತಗೊಂಡಿದ್ದಾರೆ.

ಇದನ್ನೂ ಓದಿ : ಗರ್ಭಿಣಿಯಾಗಿದ್ದಳಾ ಶ್ರದ್ಧಾ!? ಬಗೆದಷ್ಟು ಹೊರಬರುತ್ತಿದೆ ಈ ʻಪೀಸ್‌ʼವಾಲಾನ ಕುಕೃತ್ಯ!

ಮಾಧ್ಯಮ ವರದಿಗಳ ಪ್ರಕಾರ, ಮಧ್ಯಪ್ರದೇಶದ ಪ್ರತಾಪುರದ ನಿವಾಸಿ, ಜಿಲ್ಲಾ ಪಂಚಾಯತ್ ಸದಸ್ಯ ಅಮಿತ್ ರೈ ಅವರು ಅನೇಕ ಸಾಕು ನಾಯಿಗಳನ್ನು ಹೊಂದಿದ್ದಾರೆ. ಗಬ್ಬರ್ ಅವುಗಳಲ್ಲಿ ಅತ್ಯಂತ ವಿಶೇಷ ಮತ್ತು ಮಾಲೀಕರ ಜೊತೆ ನಿಕಟವಾಗಿತ್ತು. ಐದು ವರ್ಷಗಳ ಹಿಂದೆ ಮಾಲೀಕರು ಆತನನ್ನು ಮನೆಗೆ ಕರೆತಂದಿದ್ದರು. ಅವರು ತಮ್ಮ ಸಾಕು ನಾಯಿ ಗಬ್ಬರ್‌ನೊಂದಿಗೆ ತಮ್ಮ ತೋಟದ ಮನೆಯಲ್ಲಿ ಓಡಾಡುತ್ತಿದ್ದಾಗ ರಸೆಲ್ ವೈಪರ್ ಹಾವು ಅವರ ಪಾದದಡಿಗೆ ಬಂದಿತು. ಇದಾದ ಮೇಲೆ ಹಾವು ಅವರ ಮೇಲೆ ದಾಳಿ ಮಾಡಿತು.‌ ಇದನ್ನು ಕಂಡ ಗಬ್ಬರ್ ಹಾವಿನ ಜತೆ ಕಾದಾಟಕ್ಕಿಳಿದಿದೆ. ನಾಯಿ ಮತ್ತು ಹಾವಿನ ನಡುವೆ ಬಿಗ್‌ ಫೈಟ್‌ ನಡೆದಿದೆ. ಹಾವನ್ನು ಕೊಂದ ನಂತರ ಗಬ್ಬರ್ ನೆಲದ ಮೇಲೆ ಬಿದ್ದಿದ್ದಾನೆ. ಈ ಹೋರಾಟದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

ನಾಯಿಯ ಮಾಲೀಕ ಅಮಿತ್ ಅವರು ಗಬ್ಬರ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿಯೇ ಆತ ಕೊನೆಯುಸಿರೆಳೆದಿದ್ದ. ಅವನ ಸಾವಿನ ನಂತರ, ನಾಯಿಯ ಮಾಲೀಕರು ತುಂಬಾ ಭಾವುಕರಾದರು ಮತ್ತು ಗಬ್ಬರ್ ಅನ್ನು ನೋಡಿ ಅಳುತ್ತಿದ್ದರು. ಕಳೆದ ಐದು ವರ್ಷಗಳಿಂದ ಗಬ್ಬರ್ ಜೊತೆಗಿದ್ದ. ಅಮಿತ್ ಅವರು ತಮ್ಮ ಮಡಿಲಲ್ಲಿ ಕುಳಿತು ಗಬ್ಬರ್ ಊಟ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದು, ಅದು ಸಾಕಷ್ಟು ವೈರಲ್ ಆಗುತ್ತಿದೆ. ಅಮಿತ್ ತನ್ನ ಮನೆಯಲ್ಲಿ ಅನೇಕ ಸಾಕುಪ್ರಾಣಿಗಳನ್ನು ಹೊಂದಿದ್ದಾರೆ. 

ಇದನ್ನೂ ಓದಿ : ವಿಜಯ್‌ ದೇವರಕೊಂಡ ಮಾಡಿದ ಕೆಲಸಕ್ಕೆ ಗ್ರೇಟ್‌ ಎಂದ ಫ್ಯಾನ್ಸ್‌..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News