ಆರೋಗ್ಯದಲ್ಲಿ ಏರುಪೇರು, ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ AIIMSಗೆ ದಾಖಲು
ಮನಮೋಹನ್ ಸಿಂಗ್ ಅವರು ಈ ವರ್ಷದ ಏಪ್ರಿಲ್ 19 ರಂದು ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದರು. ಆ ಸಮಯದಲ್ಲಿಯೂ ಅವರನ್ನು ಏಮ್ಸ್ ಗೆ (AIIMS) ದಾಖಲಿಸಲಾಗಿತ್ತು.
ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರ ಆರೋಗ್ಯ ಹದಗೆಟ್ಟಿದೆ. ಪ್ರಸ್ತುತ ಅವರು ಏಮ್ಸ್ ನ ಕಾರ್ಡಿಯೋ ಟವರ್ ನಲ್ಲಿ ಡಾ.ನಿತೀಶ್ ನಾಯಕ್ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಮಾಜಿ ಪ್ರಧಾನಿ, ಮನಮೋಹನ್ ಸಿಂಗ್ ಯಾವ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.
ಏಪ್ರಿಲ್‌ನಲ್ಲಿ ಕರೋನಾ ಕಾಡಿತ್ತು :
ಮನಮೋಹನ್ ಸಿಂಗ್ (Manmohan Singh) ಅವರು ಈ ವರ್ಷದ ಏಪ್ರಿಲ್ 19 ರಂದು ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದರು. ಆ ಸಮಯದಲ್ಲಿಯೂ ಅವರನ್ನು ಏಮ್ಸ್ ಗೆ (AIIMS) ದಾಖಲಿಸಲಾಗಿತ್ತು. ಚೇತರಿಸಿಕೊಂಡ ನಂತರ, ಮನಮೋಹನ್ ಸಿಂಗ್ ಅವರು ಕರೋನಾ (Coronavirus) ಲಸಿಕೆಯ ಎರಡೂ ಡೋಸ್ ಗಳನ್ನೂ ಪಡೆದುಕೊಂಡಿದ್ದಾರೆ .
ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಕಾಳಗದಲ್ಲಿ ಜೈಶ್ ಕಮಾಂಡರ್ ಶಮಾಮ್ ಸೋಫಿ ಹತ್ಯೆ
ಪ್ರಧಾನಿಯಾಗಿ ಎರಡು ಅವಧಿಗಳನ್ನು ಪೂರೈಸಿರುವ ಮನಮೋಹನ್ ಸಿಂಗ್ :
ಡಾ.ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ದೇಶದ ಪ್ರಧಾನಿಯಾಗಿದ್ದರು. ಪ್ರಸ್ತುತ ಅವರು ರಾಜಸ್ಥಾನದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅವರು ಅವಿಭಜಿತ ಭಾರತದ ಪಂಜಾಬ್ (Punjab) ಪ್ರಾಂತ್ಯದಲ್ಲಿ 26 ಸೆಪ್ಟೆಂಬರ್ 1932 ರಂದು ಜನಿಸಿದರು. ಪ್ರಧಾನಿಯಲ್ಲದೆ, ಬಹು ದೊಡ್ಡ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. 1962 ರಲ್ಲಿ, ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ನುಫೀಲ್ಡ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಡಿ.ಫಿಲ್ ಪದವಿ ಪಡೆದಿದ್ದಾರೆ. ಪ್ರಧಾನಿಯಾಗುವ ಮೊದಲು ಹಣಕಾಸು ಸಚಿವಾಲಯದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : Terrorist Arrested : ಪಾಕ್ ಭಯೋತ್ಪಾದಕನ ಹೆಡೆ ಮುರಿ ಕಟ್ಟಿದ ದೆಹಲಿ ಪೊಲೀಸರು : ಈ ಹಬ್ಬದ ಸಂದರ್ಭದಲ್ಲಿ ದಾಳಿಗೆ ಪ್ಲಾನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ