ಕಾಂಗ್ರೆಸ್ ಪಕ್ಷವು ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್ ಸಿಎಂ ಮಾಡಿದ್ದೇಕೆ?

ಪಂಜಾಬ್ ಕಾಂಗ್ರೆಸ್ ತನ್ನ ಮುಂದಿನ ಮುಖ್ಯಮಂತ್ರಿಯಾಗಿ ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ತರಬೇತಿಯ ಮಂತ್ರಿಯಾಗಿರುವ ಚರಣ್ಜಿತ್ ಸಿಂಗ್ ಚನ್ನಿ (58) ಅವರನ್ನು ನೇಮಕ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ.ಈಗ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ ರಾಜ್ಯದ ಮೊದಲು ಸಿಎಂ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

Written by - Zee Kannada News Desk | Last Updated : Sep 20, 2021, 05:02 PM IST
  • ಪಂಜಾಬ್ ಕಾಂಗ್ರೆಸ್ ತನ್ನ ಮುಂದಿನ ಮುಖ್ಯಮಂತ್ರಿಯಾಗಿ ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ತರಬೇತಿಯ ಮಂತ್ರಿಯಾಗಿರುವ ಚರಣ್ಜಿತ್ ಸಿಂಗ್ ಚನ್ನಿ (58) ಅವರನ್ನು ನೇಮಕ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ.
  • ಈಗ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ ರಾಜ್ಯದ ಮೊದಲು ಸಿಎಂ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಕಾಂಗ್ರೆಸ್ ಪಕ್ಷವು ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್ ಸಿಎಂ ಮಾಡಿದ್ದೇಕೆ? title=
file photo

ನವದೆಹಲಿ: ಪಂಜಾಬ್ ಕಾಂಗ್ರೆಸ್ ತನ್ನ ಮುಂದಿನ ಮುಖ್ಯಮಂತ್ರಿಯಾಗಿ ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ತರಬೇತಿಯ ಮಂತ್ರಿಯಾಗಿರುವ ಚರಣ್ಜಿತ್ ಸಿಂಗ್ ಚನ್ನಿ (58) ಅವರನ್ನು ನೇಮಕ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ.ಈಗ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ ರಾಜ್ಯದ ಮೊದಲು ಸಿಎಂ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಹಾಗಾದರೆ ಚನ್ನಿ (Charanjit Singh Channi) ಅವರನ್ನು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಉತ್ತರಾಧಿಕಾರಿಯಾಗಿ ಕಾಂಗ್ರೆಸ್ ಪಕ್ಷವು ಆಯ್ಕೆ ಮಾಡಿರುವ ಕಾರಣಗಳನ್ನು ನಾವು ನಿಮ್ಮ ಮುಂದೆ ಪಟ್ಟಿ ಮಾಡುತ್ತೇವೆ.

ಇದನ್ನೂ ಓದಿ: Pujnab New CM - ಪಂಜಾಬ್ ನೂತನ ಮುಖ್ಯಮಂತ್ರಿಯ ಮೇಲೆ Me Too ಆರೋಪ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ: NCW ಅಧ್ಯಕ್ಷೆ

ದಲಿತ ಮತ ಬ್ಯಾಂಕ್ ಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ 

ಪಂಜಾಬ್ ರಾಜ್ಯವು ದೇಶದಲ್ಲಿಯೇ 32 ರಷ್ಟು ಅತಿ ಹೆಚ್ಚು ದಲಿತ ಜನಸಂಖ್ಯೆಯನ್ನು ಹೊಂದಿದೆ. ಇತ್ತೀಚಿನ ಜನಗಣತಿಯ ಫಲಿತಾಂಶಗಳು ಹೊರಬಿದ್ದ ನಂತರ ಈ ಸಂಖ್ಯೆಯು ಶೇ 38 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕೆಲವು ಸಂಶೋಧಕರು ಹೇಳುತ್ತಾರೆ.ಜಾಟ್ ಸಿಖ್ಖರು ಕೇವಲ ಶೇಕಡ 25 ರಷ್ಟು ಜನಸಂಖ್ಯೆ ಹೊಂದಿದ್ದರೂ, ಅವರು ಸಾಂಪ್ರದಾಯಿಕವಾಗಿ ರಾಜ್ಯದಲ್ಲಿ ರಾಜಕೀಯ ಅಧಿಕಾರದ ಏಕಸ್ವಾಮ್ಯವನ್ನು ಹೊಂದಿದ್ದಾರೆ ಕಾಂಗ್ರೆಸ್ 20 ದಲಿತ ಶಾಸಕರನ್ನು ಹೊಂದಿದ್ದರೂ-117 ಸದಸ್ಯರ ವಿಧಾನಸಭೆಯು 36 ಮೀಸಲು ಕ್ಷೇತ್ರಗಳನ್ನು ಹೊಂದಿದೆ-ಅವರಲ್ಲಿ ಮೂವರನ್ನು ಮಾತ್ರ ಸಂಪುಟದಲ್ಲಿ ಸೇರಿಸಲಾಗಿದೆ.

ನವಜೋತ್ ಸಿಂಗ್ ಸಿಧುನಲ್ಲಿ ಪಿಸಿಸಿ ಮುಖ್ಯಸ್ಥರಾಗಿ ಜಾಟ್ ಸಿಖ್ ಮತ್ತು ದಲಿತ ವ್ಯಕ್ತಿ ಸಿಎಂ ಆಗಿದ್ದರಿಂದ, ಕಾಂಗ್ರೆಸ್ ಪಕ್ಷವು ಸುದೀರ್ಘವಾದ ಸುಧಾರಣೆಯನ್ನು ಮಾಡಿದೆ ಮತ್ತು ಅಧಿಕಾರವನ್ನು ಹೆಚ್ಚು ನ್ಯಾಯಯುತವಾಗಿ ವಿತರಿಸಲು ಪ್ರಯತ್ನಿಸಿದೆ.

ಇದನ್ನೂ ಓದಿ: Charanjit Singh Channi: ಯಾರು ಈ ಚರಣಜಿತ್ ಸಿಂಗ್ ಚನ್ನಿ ?

ವಿರೋಧ ಪಕ್ಷಕ್ಕೆ ತಿರುಗೇಟು

ಬಹುಜನ ಸಮಾಜ ಪಕ್ಷದೊಂದಿಗೆ ಕೈಜೋಡಿಸಿರುವ ಶಿರೋಮಣಿ ಅಕಾಲಿ ದಳ ಮತ್ತು ದಲಿತ ಶಾಸಕರ ಪ್ರಾಬಲ್ಯವಿರುವ ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಬಂದರೆ ದಲಿತ ಉಪ ಮುಖ್ಯಮಂತ್ರಿಯ ಭರವಸೆ ನೀಡುತ್ತಾ ಬಂದಿವೆ.ಈಗ ದಲಿತ ವ್ಯಕ್ತಿಯನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಈಗ ಕಾಂಗ್ರೆಸ್ ಪಕ್ಷವು ಉಳಿದ ಪಕ್ಷಗಳಿಗಿಂತ ಒಂದು ಕೈ ಮೇಲೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಸಿಖ್ ರನ್ನು ಓಲೈಸುವ ಯತ್ನ

ಚನ್ನಿ ಅವರು ದಲಿತ ಮಾತ್ರವಲ್ಲ ಸಿಖ್ ಕೂಡ ಆಗಿದ್ದಾರೆ.ಹಿರಿಯ ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿ ಈ ಹಿಂದೆ ಪಿಪಿಸಿಸಿ ಮಾಜಿ ಮುಖ್ಯಸ್ಥ ಸುನೀಲ್ ಕುಮಾರ್ ಜಖರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಪ್ರಸ್ತಾಪವನ್ನು ತಿರಸ್ಕರಿಸಿದ್ದರು, ಪಂಜಾಬಿ ಸುಬಾ (ರಾಜ್ಯ) ಹಿಂದೂ ಸಿಎಂ ಹೊಂದಲು ಸಾಧ್ಯವಿಲ್ಲ ಎಂದು ಹೇಳಿದರು.ಇನ್ನೊಂದೆಡೆಗೆ ಸಚಿವ ಸುಖ್ವಿಂದರ್ ಸಿಂಗ್ ರಾಂಧವ ಕೂಡ, ಅವರು ಸಿಖ್ ಅಲ್ಲದವರು ಸಿಎಂ ಆಗಲು ಅವಕಾಶ ನೀಡಿದರೆ ಅದಕ್ಕೆ ತಮ್ಮ ಸಮ್ಮತಿ ಇಲ್ಲ ಎಂದು ಹೇಳಿ ಸೋನಿ ಅವರ ಉಮೇದುವಾರಿಕೆಯನ್ನು ವಿರೋಧಿಸಿದ್ದರು.

ಇದನ್ನೂ ಓದಿ: ಚರಣಜಿತ್ ಸಿಂಗ್ ಚನ್ನಿ ಪಂಜಾಬ್ ನ ನೂತನ ಮುಖ್ಯಮಂತ್ರಿ

ಭಿನ್ನಮತದ ಪಕ್ಷದಲ್ಲಿ ಸ್ವೀಕಾರಾರ್ಹತೆ

ರಾಜಕೀಯ ಚಾಣಾಕ್ಷತೆಗೆ ಹೆಸರುವಾಸಿಯಾದ ಚನ್ನಿ,ಪಕ್ಷದಲ್ಲಿನ ವಿವಿಧ ಬಣಗಳ ಜೊತೆಗೆ ಮಾತುಕತೆ ನಡೆಸಲು ಸಾಧ್ಯವಾಗುತ್ತದೆ.ಖರಾರ್‌ನ ಸಣ್ಣ ಹಳ್ಳಿಯ ತಳಮಟ್ಟದ ರಾಜಕಾರಣಿಯಾಗಿರುವ ಚನ್ನಿ ಅವರು, ವಿದ್ಯಾರ್ಥಿ ನಾಯಕನಾಗಿ ರಾಜಕೀಯದಲ್ಲಿ ಬೆಳೆದಿದ್ದಾರೆ, ತಳಮಟ್ಟದ ರಾಜಕೀಯದಲ್ಲಿಯೂ ಅವರು ಪರಿಣಿತಿಯನ್ನು ಸಾಧಿಸಿದ್ದಾರೆ.

ತಾಂತ್ರಿಕ ಶಿಕ್ಷಣದ ಮಂತ್ರಿಯಾಗಿ, ಅವರು ಉದ್ಯೋಗ ಮೇಳಗಳು ಮತ್ತು ಹೊಸ ಕಾಲೇಜುಗಳು ಮತ್ತು ಕೌಶಲ್ಯ ಕೇಂದ್ರಗಳನ್ನು ತೆರೆಯುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯುವಕರ ವಲಸೆಯನ್ನು ಕಾಣುತ್ತಿರುವ ರಾಜ್ಯದಲ್ಲಿ ಅವರು ಉದ್ಯೋಗ ಮತ್ತು ಶಿಕ್ಷಣಕ್ಕೆ ಅಗತ್ಯವಾದ ಉತ್ತೇಜನವನ್ನು ನೀಡಲು ಸಾಧ್ಯವಾಗುತ್ತದೆ ಎಂದು ಪಕ್ಷವು ಆಶಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News