ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಕಾಳಗದಲ್ಲಿ ಜೈಶ್ ಕಮಾಂಡರ್ ಶಮಾಮ್ ಸೋಫಿ ಹತ್ಯೆ

ಖಚಿತ ಮಾಹಿತಿಯನ್ನು ಆಧರಿಸಿ, ಭದ್ರತಾ ಪಡೆಗಳು ಅಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   

Written by - Ranjitha R K | Last Updated : Oct 13, 2021, 04:29 PM IST
  • ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗ
  • ಜೈಶ್ ಕಮಾಂಡರ್ ಶಮಾಮ್ ಸೋಫಿ ಎನ್‌ಕೌಂಟರ್‌ನಲ್ಲಿ ಹತ್ಯೆ
  • ಭಯೋತ್ಪಾದಕರು ಅಡಗಿರುವ ಸ್ಥಳದ ಮಾಹಿತಿ ಪಡೆದ ಬಗ್ಗೆ ಭದ್ರತಾ ಅಧಿಕಾರಿಗಳು
ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಕಾಳಗದಲ್ಲಿ  ಜೈಶ್ ಕಮಾಂಡರ್ ಶಮಾಮ್ ಸೋಫಿ ಹತ್ಯೆ title=
ಜೈಶ್ ಕಮಾಂಡರ್ ಶಮಾಮ್ ಸೋಫಿ ಎನ್‌ಕೌಂಟರ್‌ನಲ್ಲಿ ಹತ್ಯೆ (file photo)

ಶ್ರೀನಗರ : ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ (Pulwama) ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ (Terrorist) ಮಧ್ಯೆ ಸಂಘರ್ಷ ನಡೆದಿದೆ.  ಈ ಕಾಳಗದಲ್ಲಿ ಕಾಶ್ಮೀರದ ಜೈಶ್ ಕಮಾಂಡರ್ ಶಮಾಮ್ ಸೋಫಿ (Shamam Sofi encounter)  ಹತ್ಯೆಯಾಗಿದೆ. ಈ ವಿಷಯವನ್ನು IGP ಕಾಶ್ಮೀರ ವಿಜಯ್ ಕುಮಾರ್ ತಿಳಿಸಿದ್ದಾರೆ. ಈ ಮೂಲಕ ಭದ್ರತಾ ಪಡೆಗಳು ದೊಡ್ಡ ಮಟ್ಟದ ಯಶಸ್ಸನ್ನೇ ಪಡೆದಿವೆ. 

ಪ್ರತೀಕಾರವಾಗಿ ನಡೆದಂಥಹ ಎನ್ಕೌಂಟರ್ :  
ದಕ್ಷಿಣ ಕಾಶ್ಮೀರದ ಪುಲ್ವಾಮಾ (Pulwama) ಜಿಲ್ಲೆಯ ಅವಂತಿಪೋರಾದ ತ್ರಾಲ್ ಪ್ರದೇಶದ ತಿಲ್ವಾನಿ ಮೊಹಲ್ಲಾ ವಗ್ಗದ್ ನಲ್ಲಿ ಭಯೋತ್ಪಾದಕರು (terror attack) ಇರುವ ಬಗ್ಗೆ ಭದ್ರತಾ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಖಚಿತ ಮಾಹಿತಿಯನ್ನು ಆಧರಿಸಿ, ಭದ್ರತಾ ಪಡೆಗಳು ಅಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇದನ್ನೂ ಓದಿ:  PM Awas Yojana: ಪಿಎಂ ಅವಾಜ್ ಯೋಜನೆಯಲ್ಲಿನ ಹೊಸ ಬದಲಾವಣೆಯನ್ನು ತಿಳಿದುಕೊಳ್ಳಿ, ಇಲ್ಲವಾದರೆ ಸಿಗುವುದಿಲ್ಲ ಮನೆ

ಇದಾದ ನಂತರ ಭಯೋತ್ಪಾದಕರು (terrorist) ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತ್ಯುತ್ತರವಾಗಿ, ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದವು. ಹೀಗೆ ಆರಂಭವಾದ ಎನ್ ಕೌಂಟರ್ ನಲ್ಲಿ  ಜೈಶ್-ಎ-ಮೊಹಮ್ಮದ್ ನ (jaish e mohammad) ಟಾಪ್ ಭಯೋತ್ಪಾದಕ ಕಮಾಂಡರ್ ಶಾಮ್ ಸೋಫಿಯನ್ನು ಹತ್ಯೆಗೈಯ್ಯಲಾಗಿದೆ.  

 

ಅಧಿಕಾರಿಗಳ ಪ್ರಕಾರ, ಸ್ಥಲದಲ್ಲಿ ಎನ್ಕೌಂಟರ್ ಇನ್ನೂ ಮುಂದುವರಿದಿದೆ ಮತ್ತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

ಇದನ್ನೂ ಓದಿ:  FD :ನೀವು ಎಫ್‌ಡಿಗಳಲ್ಲಿ ಹೂಡಿಕೆ ಮಾಡಿದ್ದೀರಾ? ಹಾಗಿದ್ರೆ ನಿಮಗಿಲ್ಲಿದೆ ಬ್ಯಾಡ ನ್ಯೂಸ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News