ನವದೆಹಲಿ : ವ್ಯವಸ್ಥೆಯನ್ನು ಸರಿಪಡಿಸಲು ಸರ್ಕಾರ ನಿಯಮ ಮಾಡಿದ ಕೂಡಲೇ, ಮೋಸದ ಜಾಲ ಬೀಸಿ ಲಾಭ ಪಡೆಯುವವರೂ ಉದ್ಭವವಾಗಿ ಬಿಡುತ್ತಾರೆ. ಹೌದು, ಫೆಬ್ರವರಿ 15 ರ ಮಧ್ಯರಾತ್ರಿಯಿಂದ, ಇಡೀ ದೇಶದಲ್ಲಿ ಫಾಸ್ಟ್ಯಾಗ್ (Fastag) ಅನ್ನು ಕಡ್ಡಾಯಗೊಳಿಸಿದೆ.  ನಿಯಮದ ಪ್ರಕಾರ, ಫಾಸ್ಟ್ಯಾಗ್ ಇಲ್ಲದೆ ವಾಹನಗಳು ಟೋಲ್ ಗೇಟ್ (Toll gate) ದಾಟಲು ಅವಕಾಶವಿಲ್ಲ. ಈ ಮೊದಲು ಟೋಲ್ ಪ್ಲಾಜಾದಲ್ಲಿ ಲೈನ್ ಕ್ಯಾಶ್ ಕೌಂಟರ್ ಇತ್ತು.  ಅದನ್ನು ನಿನ್ನೆ ಮಧ್ಯರಾತ್ರಿಯಿಂದ ತೆಗೆದುಹಾಕಲಾಗಿದೆ. ಅಂದರೆ  ಫಾಸ್ಟ್‌ಟ್ಯಾಗ್ ಇಲ್ಲದೆ ಬೆಳೆಸುವ ಪ್ರಯಾಣವು ಇನ್ನು ತುಂಬಾ ದುಬಾರಿಯಾಗಿ ಪರಿಣಮಿಸಲಿದೆ.  ಈ ನಡುವೆ ನೀವು ಖರೀದಿಸಿರುವ ಫಾಸ್ಟ್ಯಾಗ್ ಅಸಲಿಯೋ ನಕಲಿಯೋ ಎಂಬ ಬಗ್ಗೆ ಚೆಕ್ ಮಾಡಿಕೊಳ್ಳಿ. ನಕಲಿ ಫಾಸ್ಟ್ಯಾಗ್ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜನರಿಗೆ ಎಚ್ಚರಿಕೆ ನೀಡಿದೆ.


COMMERCIAL BREAK
SCROLL TO CONTINUE READING

ನಕಲಿ ಫಾಸ್ಟ್ಯಾಗ್ ಮಾರಾಟವಾಗುತ್ತಿದೆ ಎಚ್ಚರ..! :  
ನಕಲಿ ಫಾಸ್ಟ್ಯಾಗ್ (FasTag)ಅನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೋಸದ ಜಾಲ ಕಾರ್ಯ ನಿರ್ವಹಿಸುತ್ತಿದೆ. ಈ ಬಗ್ಗೆ ಎನ್‌ಎಚ್‌ಎಐ ಜನರಿಗೆ ಎಚ್ಚರಿಕೆ ನೀಡಿದೆ. ನಕಲಿ ಫಾಸ್ಟ್ಯಾಗ್ ಕೂಡಾ ಮೇಲ್ನೊಟಕ್ಕೆ  NHAI / IHMCLನ  ಫಾಸ್ಟ್ಯಾಗ್ ನಂತೆಯೇ ಕಾಣುತ್ತದೆ. ಆದರೆ ಟೋಲ್ ಪ್ಲಾಜಾಗಳಲ್ಲಿ ಮಾತ್ರ ಇದು ಕಾರ್ಯನಿರ್ವಹಿಸುವುದಿಲ್ಲ. ಇದರರ್ಥ ನಿಮ್ಮಲ್ಲಿರುವ ಫಾಸ್ಟ್ಯಾಗ್ ನಕಲಿಯಾಗಿದ್ದರೆ ಟೋಲ್ ದಾಟಲು ಅವಕಾಶವಿರುವುದಿಲ್ಲ. 


ಇದನ್ನೂ ಓದಿ : PM Fasal Bima Yojana: ರೈತರಿಗೆ ಸಿಗಲಿದೆ ಬೆಳೆ ವಿಮೆಯ ಗರಿಷ್ಠ ಲಾಭ


ಫಾಸ್ಟ್ಯಾಗ್ ಎಲ್ಲಿಂದ ಖರೀದಿಸಬೇಕು ? :
ಮೋಸಗಾರರ ಜಾಲಕ್ಕೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಸಿಲುಕಬಾರದು.  ಫಾಸ್ಟ್ಯಾಗ್ ಖರೀದಿಸಲು www.ihmcl.co.in ಗೆ ಹೋಗಿ ಅಥವಾ MyFastag App ಅಪ್ಲಿಕೇಶನ್ ಬಳಸಿ. ಇದಲ್ಲದೆ, ಪಟ್ಟಿಮಾಡಿದ ಬ್ಯಾಂಕುಗಳು ಮತ್ತು ಅಧಿಕೃತ ಪಿಒಎಸ್  ಏಜೆಂಟರಿಂದ ಫಾಸ್ಟ್ಯಾಗ್ ಖರೀದಿಸಬಹುದು.  ಬ್ಯಾಂಕುಗಳ ವೆಬ್‌ಸೈಟ್‌ಗಳಿಂದಲೂ ಖರೀದಿಸಬಹುದು. ಈ ಮಾಹಿತಿಯನ್ನು  IHMCL ವೆಬ್‌ಸೈಟ್‌ನಲ್ಲಿ (website) ನೀಡಲಾಗಿದೆ.


ನಕಲಿ ಫಾಸ್ಟ್ಯಾಗ್ ಬಗ್ಗೆ ದೂರು ನೀಡಿ : 
ಒಂದು ವೇಳೆ ನಕಲಿ ಫಾಸ್ಟ್ಯಾಗ್ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಕೂಡಲೇ ಎನ್ಎಚ್ಎಐನ ಸಹಾಯವಾಣಿ (helpline) ಸಂಖ್ಯೆ 1033 ಗೆ ಕರೆ ಮಾಡಿ ದೂರು ಸಲ್ಲಿಸಬಹುದು.  ಅಥವಾ etc.nodal@ihmcl.comಗೆ ದೂರು ಸಲ್ಲಿಸಬಹುದು. 


ಫಾಸ್ಟ್ಯಾಗ್ ತೆಗೆದುಕೊಳ್ಳಲು ಹಲವು ಮಾರ್ಗಗಳಿವೆ. ಫಾಸ್ಟ್ಯಾಗ್ ಅನ್ನು 23 ಅಧಿಕೃತ ಬ್ಯಾಂಕುಗಳು (Bank) ಮತ್ತು ಇಡೀ ದೇಶದ 30 ಸಾವಿರಕ್ಕೂ ಹೆಚ್ಚು ಪಿಒಎಸ್ ಯಂತ್ರಗಳ ಮೂಲಕ ಖರೀದಿಸಬಹುದು. ಈ ಕೆಲಸವನ್ನು ಆನ್‌ಲೈನ್‌ನಲ್ಲಿಯೂ (Online) ಮಾಡಬಹುದು. ಯಾವುದೇ ಅಧಿಕೃತ ಬ್ಯಾಂಕಿನ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಫಾಸ್ಟಾಗ್‌ಗೆ ಸಂಬಂಧಿಸಿದ ಅರ್ಜಿ ನಮೂನೆಯಲ್ಲಿ ಕೇಳಿದ ಮಾಹಿತಿಯನ್ನು ನೀಡಿ. ಹಣ ಪಾವತಿ ಮಾಡಿದ ನಂತರ ನಿಮ್ಮ ವಿಳಾಸಕ್ಕೆ ಕಳುಹಿಸಿಕೊಡಲಾಗುತ್ತದೆ. ಇದಕ್ಕಾಗಿ, ಕೆವೈಸಿಗೆ ನೋಂದಣಿ ಪ್ರಮಾಣಪತ್ರ ಮತ್ತು ಆಧಾರ್ ಕಾರ್ಡ್ (Aadhaar) ಮತ್ತು ಪ್ಯಾನ್ ಕಾರ್ಡ್‌ನಂತಹ ಕೆಲವು ದಾಖಲೆಗಳನ್ನು ಒದಗಿಸಬೇಕು. 


ಇದನ್ನೂ ಓದಿ : ಭಾರತ ಸರ್ಕಾರದಿಂದ ಸಿದ್ದವಾಗುತ್ತಿದೆ ವಿಶೇಷ 'Digital Crime Unit'


ಈ ಬ್ಯಾಂಕುಗಳಿಂದ ಫಾಸ್ಟ್ಯಾಗ್ ಖರೀದಿಸಿ : 
 


ಐಸಿಐಸಿಐ ಬ್ಯಾಂಕ್ (customer care 1800 210 0104)
ಆಕ್ಸಿಸ್ ಬ್ಯಾಂಕ್ (customer care 1800 419 8585)
ಐಡಿಎಫ್‌ಸಿ ಬ್ಯಾಂಕ್ (customer care 1800 266 9970)
ಎಸ್‌ಬಿಐ ಬ್ಯಾಂಕ್ (customer care 1800 110 018)
ಪಂಜಾಬ್ ನ್ಯಾಷನಲ್ ಬ್ಯಾಂಕ್
ಸಿಂಡಿಕೇಟ್ ಬ್ಯಾಂಕ್
Paytm
ಕರೂರು ವೈಶ್ಯ ಬ್ಯಾಂಕ್
ಎಚ್‌ಡಿಎಫ್‌ಸಿ ಬ್ಯಾಂಕ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.