ಒಂದು ಕಾರಿನ FASTag ಅನ್ನು ಇನ್ನೊಂದು ಕಾರಿನಲ್ಲಿ ಹಾಕಬಹುದೇ?

Fastag Mandatory: ನೀವು ಈಗ ರಾಷ್ಟ್ರೀಯ ಹೆದ್ದಾರಿಯ ಮೂಲಕ ಪ್ರಯಾಣಿಸಬೇಕಾದರೆ, ನಿಮ್ಮ ಕಾರಿನಲ್ಲಿ ಫಾಸ್ಟ್‌ಟ್ಯಾಗ್ (FASTag) ಇರುವುದು ಕಡ್ಡಾಯವಾಗಿದೆ, ಇಲ್ಲದಿದ್ದರೆ ಎರಡು ಪಟ್ಟು ಟೋಲ್ ಪಾವತಿಸಬೇಕಾಗುತ್ತದೆ.

Written by - Yashaswini V | Last Updated : Feb 16, 2021, 11:35 AM IST
  • ಕಾರಿನಲ್ಲಿ ಒಂದಕ್ಕಿಂತ ಹೆಚ್ಚು ಫಾಸ್ಟ್‌ಟ್ಯಾಗ್ ಬಳಸಬಹುದೇ?
  • ಪ್ರತಿ ವಾಹನಕ್ಕೂ ವಿಭಿನ್ನ ಫಾಸ್ಟ್‌ಟ್ಯಾಗ್ ತೆಗೆದುಕೊಳ್ಳುವುದು ಅಗತ್ಯವೇ?
  • ಈ ರೀತಿಯ ಹಲವು ಪ್ರಮುಖ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಒಂದು ಕಾರಿನ FASTag ಅನ್ನು ಇನ್ನೊಂದು ಕಾರಿನಲ್ಲಿ ಹಾಕಬಹುದೇ? title=
FASTag

ನವದೆಹಲಿ: Fastag Mandatory: ನೀವು ಈಗ ರಾಷ್ಟ್ರೀಯ ಹೆದ್ದಾರಿಯ ಮೂಲಕ ಪ್ರಯಾಣಿಸಬೇಕಾದರೆ, ನಿಮ್ಮ ಕಾರಿನಲ್ಲಿ ಫಾಸ್ಟ್ಯಾಗ್ ಇರುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಎರಡು ಪಟ್ಟು ಟೋಲ್ ಪಾವತಿಸಬೇಕಾಗುತ್ತದೆ. ಫೆಬ್ರವರಿ 15 ರಿಂದ ದೇಶದಾದ್ಯಂತದ ಎಲ್ಲಾ ನಾಲ್ಕು ಚಕ್ರ ವಾಹನಗಳಿಗೆ ಫಾಸ್ಟ್ಯಾಗ್ ಅಗತ್ಯವಾಗಿದೆ. ನಿಮ್ಮ ವಾಹನದಲ್ಲಿ ನೀವು ಇನ್ನೂ ಫಾಸ್ಟ್ಯಾಗ್ ಅನ್ನು ಹಾಕಿಸದಿದ್ದರೆ, ಅದನ್ನು ಈ ಕೂಡಲೇ ಸ್ಥಾಪಿಸಿ. ಫಾಸ್ಟ್ಯಾಗ್ ಬಗ್ಗೆ ಅನೇಕ ರೀತಿಯ ಪ್ರಶ್ನೆಗಳು ಇನ್ನೂ ಜನರ ಮನಸ್ಸಿನಲ್ಲಿ ಹರಿದಾಡುತ್ತಿವೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇಂತಹ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ (FAQ ಗಳು) ಉತ್ತರಗಳನ್ನು ನೀಡಿದೆ.

1. ಪ್ರಶ್ನೆ- ಫಾಸ್ಟ್‌ಟ್ಯಾಗ್ ಪಾವತಿಗೆ ರಿಯಾಯಿತಿ ಸಿಗುತ್ತದೆಯೇ?
ಉತ್ತರ-
ಫಾಸ್ಟ್ಯಾಗ್ ಮೂಲಕ ಟೋಲ್ ಪ್ಲಾಜಾದಲ್ಲಿ ಪಾವತಿಸುವ ಪ್ರತಿಯೊಬ್ಬ ಗ್ರಾಹಕರು 10% ಹಣವನ್ನು ಹಿಂತಿರುಗಿಸುತ್ತಾರೆ. ಈ ಕ್ಯಾಶ್‌ಬ್ಯಾಕ್ ಮೊತ್ತವನ್ನು ಒಂದು ವಾರದೊಳಗೆ ಅವರ ಫಾಸ್ಟ್‌ಟ್ಯಾಗ್ ಖಾತೆಗೆ ಸೇರಿಸಲಾಗುತ್ತದೆ.

2. ಪ್ರಶ್ನೆ- ಪ್ರತಿ ವಾಹನಕ್ಕೂ ವಿಭಿನ್ನ ಫಾಸ್ಟ್‌ಟ್ಯಾಗ್ ತೆಗೆದುಕೊಳ್ಳುವುದು ಅಗತ್ಯವೇ?
ಉತ್ತರ-
ಹೌದು, ನೀವು ಪ್ರತಿ ವಾಹನಕ್ಕೂ ವಿಭಿನ್ನ ಫಾಸ್ಟ್‌ಟ್ಯಾಗ್ ತೆಗೆದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ - FASTag App New Feature:ಇನ್ಮುಂದೆ ಆಪ್ ನಲ್ಲಿ ಬ್ಯಾಲೆನ್ಸ್ ಸ್ಟೇಟಸ್ ಕಾಣಿಸಲಿದೆ

3. ಪ್ರಶ್ನೆ- ಒಂದು ವಾಹನದ ಫಾಸ್ಟ್‌ಟ್ಯಾಗ್ ಅನ್ನು ಮತ್ತೊಂದು ವಾಹನದಲ್ಲಿ ಬಳಸಬಹುದೇ?
ಉತ್ತರ-
ಇಲ್ಲ, ಪ್ರತಿ ವಾಹನಕ್ಕೂ ಕೆವೈಸಿ ದಾಖಲೆಗಳನ್ನು ಸಲ್ಲಿಸಿದ ನಂತರವಷ್ಟೇ ಫಾಸ್ಟ್‌ಟ್ಯಾಗ್ (FASTag) ನೀಡಲಾಗುತ್ತದೆ. ಒಂದು ಫಾಸ್ಟ್‌ಟ್ಯಾಗ್ ಅನ್ನು ಕಾರಿಗೆ ಖರೀದಿಸಲಾಗಿದೆ ಮತ್ತು ಟ್ರಕ್‌ನಲ್ಲಿ ಬಳಸಲಾಗಿದೆ ಎಂದು ಭಾವಿಸೋಣ, ನಂತರ ಅಂತಹ ಫಾಸ್ಟ್‌ಟ್ಯಾಗ್ ಅನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಇದನ್ನು ಮಾಡದಂತೆ ಬಳಕೆದಾರರಿಗೆ ಸೂಚನೆ ನೀಡಲಾಗುತ್ತದೆ.

4. ಪ್ರಶ್ನೆ- ನನ್ನ ಫಾಸ್ಟ್‌ಟ್ಯಾಗ್ ಅನ್ನು ನಾನು ಕಳೆದುಕೊಂಡಿದ್ದರೆ, ಅದರಲ್ಲಿ ಬಿದ್ದಿರುವ ಖಾತೆಯ ಬಾಕಿ ಏನಾಗುತ್ತದೆ ?
ಉತ್ತರ-
ಫಾಸ್ಟ್ಯಾಗ್ ನೀಡುವ ಕಂಪನಿಯ ಗ್ರಾಹಕ ಆರೈಕೆಗೆ ನೀವು ತಕ್ಷಣ ಕರೆ ಮಾಡಿ ಅದನ್ನು ನಿರ್ಬಂಧಿಸಬೇಕು. ನೀವು ಹೊಸ ಖಾತೆಯನ್ನು ತೆಗೆದುಕೊಂಡಾಗ, ಕಂಪನಿಯು ನಿಮ್ಮ ಬಾಕಿ ಮೊತ್ತವನ್ನು ಹೊಸ ಖಾತೆಗೆ ವರ್ಗಾಯಿಸುತ್ತದೆ, ಅಂದರೆ ನಿಮ್ಮ ಮೊತ್ತವು ಸುರಕ್ಷಿತವಾಗಿರುತ್ತದೆ.

5. ಪ್ರಶ್ನೆ- ಸರಿಯಾದ ಹಣವನ್ನು ನನ್ನ ಖಾತೆಯಿಂದ ಕಡಿತಗೊಳಿಸಲಾಗಿದೆ ಎಂದು ನನಗೆ ಹೇಗೆ ತಿಳಿಯುತ್ತದೆ?
ಉತ್ತರ- ನಿಮ್ಮ ಫಾಸ್ಟ್‌ಟ್ಯಾಗ್ ಖಾತೆಯಿಂದ ಹಣವನ್ನು ಕಡಿತಗೊಳಿಸಿದಾಗಲೆಲ್ಲಾ, ನಿಮ್ಮ ಮೊಬೈಲ್‌ನಲ್ಲಿ ಒಂದು SMS ಬರುತ್ತದೆ. ಇದಲ್ಲದೆ, ಯಾವ ಪ್ಲಾಜಾದಲ್ಲಿ ಶುಲ್ಕ ಕಡಿತ ಮಾಡಲಾಗಿದೆ ಎಂದೂ ಕೂಡ ಅದರಲ್ಲಿ ಮಾಹಿತಿ ಲಭ್ಯವಾಗಲಿದೆ. ಇದಲ್ಲದೆ ಟೂಲ್‌ ಪ್ಲಾಜಾದಲ್ಲಿ ಡಿಸ್ಪೇ ಕೂಡ ಹಾಕಲಾಗುತ್ತದೆ, ಅದರ ಮೇಲೆ ಟೋಲ್ ಶುಲ್ಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬರೆಯಲಾಗುತ್ತದೆ.

6. ಪ್ರಶ್ನೆ- ನಾನು ಟೋಲ್ ಪ್ಲಾಜಾದ 10 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದೇನೆ, ನಾನು ಫಾಸ್ಟ್‌ಟ್ಯಾಗ್ ತೆಗೆದುಕೊಳ್ಳುವ ಅಗತ್ಯವಿದೆಯೇ?
ಉತ್ತರ- ಹೌದು, ನೀವು ಫಾಸ್ಟ್ಯಾಗ್ ತೆಗೆದುಕೊಳ್ಳಬೇಕಾಗುತ್ತದೆ, ನೀವು ಫಾಸ್ಟ್ಯಾಗ್ ಲೇನ್ ಅನ್ನು ಬಳಸಲು ಬಯಸಿದರೆ ಮತ್ತು ಕ್ಯಾಶ್ಬ್ಯಾಕ್ ಬಯಸಿದರೆ ನೀವು ಫಾಸ್ಟ್ಯಾಗ್ ಪಡೆಯಲೇಬೇಕು.

ಇದನ್ನೂ ಓದಿ - FASTag ಕಡ್ಡಾಯ, ಅದನ್ನು ಎಲ್ಲಿ? ಹೇಗೆ ಪಡೆಯಬೇಕೆಂದು ತಿಳಿಯಿರಿ

7. ಪ್ರಶ್ನೆ- ನಾನು ಬೇರೆ ನಗರಕ್ಕೆ ಸ್ಥಳಾಂತರಗೊಂಡರೆ ಏನು ಮಟಡಬೇಕು?
ಉತ್ತರ- ಫಾಸ್ಟ್ಯಾಗ್ ಇಡೀ ದೇಶದ ಪ್ರತಿ ಟೋಲ್ ಪ್ಲಾಜಾದಲ್ಲಿ ಚಲಿಸುತ್ತದೆ, ನೀವು ನಗರವನ್ನು ಬದಲಾಯಿಸಿದಾಗ, ನೀವು ಫಾಸ್ಟ್ಯಾಗ್ ನೀಡುವ ಕಂಪನಿಯ ಗ್ರಾಹಕ ಆರೈಕೆಗೆ ಕರೆ ಮಾಡಿ ಮತ್ತು ನಿಮ್ಮ ವಿಳಾಸವನ್ನು ನವೀಕರಿಸಬೇಕು.

8. ಪ್ರಶ್ನೆ- ಕಾರಿನಲ್ಲಿ ಒಂದಕ್ಕಿಂತ ಹೆಚ್ಚು ಫಾಸ್ಟ್‌ಟ್ಯಾಗ್ ಬಳಸಬಹುದೇ?
ಉತ್ತರ - ನೀವು ಇದನ್ನು ಮಾಡಲು ಸಾಧ್ಯವಿಲ್ಲ, ಅದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಾಹನದಲ್ಲಿ ಒಂದಕ್ಕಿಂತ ಹೆಚ್ಚು ಫಾಸ್ಟ್‌ಟ್ಯಾಗ್ ಬಳಸಿದರೆ, ಬಳಕೆದಾರರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

9. ಪ್ರಶ್ನೆ- ನಾನು ನನ್ನ ಕಾರನ್ನು ಮಾರಾಟ ಮಾಡಿದರೆ ಅಥವಾ ವರ್ಗಾಯಿಸಿದರೆ ಫಾಸ್ಟ್‌ಟ್ಯಾಗ್ ಏನಾಗುತ್ತದೆ?
ಉತ್ತರ- ನಿಮ್ಮ ಕಾರನ್ನು ನೀವು ಮಾರಾಟ ಮಾಡಿದರೆ ಅಥವಾ ಅದನ್ನು ಯಾರಿಗಾದರೂ ವರ್ಗಾಯಿಸಿದರೆ, ಫಾಸ್ಟ್ಯಾಗ್ ನೀಡುವ ಕಂಪನಿಗೆ ಈ ಬಗ್ಗೆ ಮಾಹಿತಿ ತಿಳಿಸಬೇಕಾಗುತ್ತದೆ.

ಇದನ್ನೂ ಓದಿ - FASTag ಬಗೆಗಿನ ದೊಡ್ಡ ಚಿಂತನೆಯಿಂದ ಮುಕ್ತಿ, ಅಪ್ಲಿಕೇಶನ್ ಸ್ವತಃ ನೀಡಲಿದೆ ಈ ಮಾಹಿತಿ

10. ಪ್ರಶ್ನೆ- ರಾಷ್ಟ್ರೀಯ ಹೆದ್ದಾರಿಯನ್ನು ಹೊರತುಪಡಿಸಿ ಬೇರೆಲ್ಲಿಯಾದರೂ ಫಾಸ್ಟ್‌ಟ್ಯಾಗ್ ಅನ್ನು ಬಳಸಬಹುದೇ?
ಉತ್ತರ: ಫಾಸ್ಟ್ಯಾಗ್ ಅನ್ನು ರಾಜ್ಯ ಸರ್ಕಾರದ ಹೆದ್ದಾರಿಗೆ ವಿಸ್ತರಿಸುವ ಯೋಜನೆ ಇದೆ, ಜೊತೆಗೆ ಫಾಸ್ಟ್ಯಾಗ್ ಮೂಲಕ ಪಾರ್ಕಿಂಗ್ ಶುಲ್ಕ ಮತ್ತು ಇತರ ರಸ್ತೆಬದಿಯ ಸೌಲಭ್ಯಗಳಿಗೆ ಅದರ ಬಳಕೆಯನ್ನು ಹೆಚ್ಚಿಸುವ ಯೋಜನೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News