ಭಾರತ ಸರ್ಕಾರದಿಂದ ಸಿದ್ದವಾಗುತ್ತಿದೆ ವಿಶೇಷ 'Digital Crime Unit'

ಅನಗತ್ಯ ಕರೆಗಳ ಸಮಸ್ಯೆಯನ್ನು ನಿಗ್ರಹಿಸಲು ಟೆಲಿಕಾಂ ಸಚಿವಾಲಯ ಗುಪ್ತಚರ ಘಟಕ ಮತ್ತು ಗ್ರಾಹಕ ಸಂರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಲಿದೆ. ಅಲ್ಲದೆ, ಟೆಲಿಕಾಂ ಸಂಪನ್ಮೂಲಗಳನ್ನು ಬಳಸುವುದರಿಂದ ಹಣಕಾಸಿನ ವಂಚನೆಯ ವಿರುದ್ಧ ಬಲವಾದ ಕ್ರಮ ತೆಗೆದುಕೊಳ್ಳುತ್ತದೆ.  

Written by - Zee Kannada News Desk | Last Updated : Feb 16, 2021, 08:05 AM IST
  • ಗುಪ್ತಚರ ಘಟಕ ಮತ್ತು ಗ್ರಾಹಕ ಸಂರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಲಿರುವ ಟೆಲಿಕಾಂ ಸಚಿವಾಲಯ
  • ಆರ್ಥಿಕ ವಂಚನೆ ವಿರುದ್ಧ ವಿಶೇಷ ಘಟಕ ಕಠಿಣ ಕ್ರಮ ಕೈಗೊಳ್ಳಲಿದೆ
  • ಟೆಲಿಕಾಂ ಸಂಪನ್ಮೂಲಗಳನ್ನು ಆರ್ಥಿಕ ವಂಚನೆಗಾಗಿ ಮತ್ತು ಸಾಮಾನ್ಯ ಜನರನ್ನು ಬೆದರಿಸಲು ಬಳಸಲಾಗುತ್ತಿದೆ- ಸಚಿವ ರವಿಶಂಕರ್ ಪ್ರಸಾದ್ ಬೇಸರ
ಭಾರತ ಸರ್ಕಾರದಿಂದ ಸಿದ್ದವಾಗುತ್ತಿದೆ ವಿಶೇಷ 'Digital Crime Unit' title=
File Image

ನವದೆಹಲಿ: ಟೆಲಿಕಾಂ ಸಚಿವಾಲಯವು ಅನಗತ್ಯ ಕರೆಗಳ ಸಮಸ್ಯೆಯನ್ನು ಪರಿಶೀಲಿಸಲು ಗುಪ್ತಚರ ಘಟಕ ಮತ್ತು ಗ್ರಾಹಕ ಸಂರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಲು ಮುಂದಾಗಿದೆ. ಅಲ್ಲದೆ, ಟೆಲಿಕಾಂ ಸಂಪನ್ಮೂಲಗಳನ್ನು ಬಳಸುವುದರಿಂದ ಹಣಕಾಸಿನ ವಂಚನೆಯ ವಿರುದ್ಧ ಬಲವಾದ ಕ್ರಮ ತೆಗೆದುಕೊಳ್ಳುತ್ತದೆ. ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರ ಸೂಚನೆಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಉನ್ನತ ಮಟ್ಟದ ಸಭೆಯಲ್ಲಿ ವಿಷಯ ಪ್ರಸ್ತಾಪ :
ಮೊಬೈಲ್ ಫೋನ್‌ಗಳಲ್ಲಿ ಬರುವ ಅನಗತ್ಯ ಮತ್ತು ಗೊಂದಲದ ಸಂದೇಶಗಳ ಬಗ್ಗೆ ಗ್ರಾಹಕರಲ್ಲಿ ಹೆಚ್ಚುತ್ತಿರುವ ಕಾಳಜಿಯನ್ನು ಎದುರಿಸುವ ಮಾರ್ಗಗಳನ್ನು ಪರಿಶೀಲಿಸುವಂತೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ರವಿಶಂಕರ್ ಪ್ರಸಾದ್ (Ravishankar Prasad) ಅಧಿಕಾರಿಗಳಿಗೆ ಈ ರೀತಿಯ ನಿರ್ದೇಶನ ನೀಡಿದರು. 

ಇದನ್ನೂ ಓದಿ - WhatsApp ಮೇಲೆ ಬಂದ ಈ ಲಿಂಕ್ ಮೇಲೆ ಕ್ಲಿಕ್ಕಿಸಬೇಡಿ, ಸರ್ಕಾರ ಜಾರಿಗೊಳಿಸಿದೆ ಈ Alert...!

ಸೋಮವಾರ ಬಿಡುಗಡೆಯಾದ ಅಧಿಕೃತ ಹೇಳಿಕೆಯ ಪ್ರಕಾರ, "ಸಭೆಯಲ್ಲಿ, ಟೆಲಿಕಾಂ ಮತ್ತು ಮಾರ್ಕೆಟಿಂಗ್ ಕಂಪನಿಗಳು ಗ್ರಾಹಕರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಟೆಲಿಕಾಂ ಸಂಪನ್ಮೂಲಗಳನ್ನು ಆರ್ಥಿಕ ವಂಚನೆಗಾಗಿ ಮತ್ತು ಸಾಮಾನ್ಯ ಜನರನ್ನು ಬೆದರಿಸಲು ಬಳಸಲಾಗುತ್ತಿದೆ ಎಂಬ ವಿಷಯ ಗಮನಕ್ಕೆ ಬಂದಿದ್ದು ಇದು ನಿಜಕ್ಕೂ ಆತಂಕಕಾರಿ ವಿಷಯ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ - QR Code Scan ಮೂಲಕ ಭಾರಿ ವಂಚನೆ, ಹಣ ಪಾವತಿಸುವಾಗ ಎಚ್ಚರ!

TRAI ಈಗಾಗಲೇ ನಿಯಮಗಳನ್ನು ರೂಪಿಸಿದೆ :
ಹೇಳಿಕೆಯ ಪ್ರಕಾರ, "ಇಂತಹ ಚಟುವಟಿಕೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ." ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಈಗಾಗಲೇ ಅನಗತ್ಯ ಕರೆಗಳನ್ನು ತಡೆಯಲು ನಿಯಮಗಳನ್ನು ರೂಪಿಸಿದೆ. ಆದಾಗ್ಯೂ, ಫೋನ್‌ಗಳನ್ನು ಬಳಸುವ ಅನೇಕ ನೋಂದಾಯಿಸದ ಮಾರ್ಕೆಟಿಂಗ್ ಕಂಪನಿಗಳು ಜನರಿಗೆ ಅನಗತ್ಯ ಕರೆ ಮಾಡಿ ತೊಂದರೆ ನೀಡುತ್ತಿರುವುದಲ್ಲದೇ ಹಲವು ಬಾರಿ ಗ್ರಾಹಕರು ವಂಚನೆಯ ಸುಳಿಯಲ್ಲಿ ಸಿಲುಕುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News