ಇಂದಿನಿಂದ ಟೀಕಾ ಉತ್ಸವ ; ಅಧಿಕ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಪ್ರಧಾನಿ ಮನವಿ
ಏಪ್ರಿಲ್ 11 ರಿಂದ ಏಪ್ರಿಲ್ 14 ರವರೆಗೆ ದೇಶದಲ್ಲಿ ನಡೆಯಲಿದೆ ಟೀಕಾ ಉತ್ಸವ . ಜನರನ್ನು ಲಸಿಕೆ ಹಾಕಿಸಲು ಉತ್ತೇಜಿಸುವ ನಿಟ್ಟಿನಲ್ಲಿ `ಟೀಕಾ ಉತ್ಸವ` ವನ್ನು ಹಮ್ಮಿಕೊಳ್ಳಲಾಗಿದೆ.
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ (Narendra Modi) ನಿರ್ದೇಶನದ ಮೇರೆಗೆ ಏಪ್ರಿಲ್ 11 ರಿಂದ ಏಪ್ರಿಲ್ 14 ರವರೆಗೆ ದೇಶದಲ್ಲಿ 'ಟೀಕಾ ಉತ್ಸವ' (Teeka Utsav)ವನ್ನು ಆಯೋಜಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಲಸಿಕೆ ಹಾಕಿಸಲು ಉತ್ತೇಜಿಸುವ ನಿಟ್ಟಿನಲ್ಲಿ 'ಟೀಕಾ ಉತ್ಸವ' ವನ್ನು ಹಮ್ಮಿಕೊಳ್ಳಲಾಗಿದೆ.
ವ್ಯಾಕ್ಸಿನೇಷನ್‌ನಲ್ಲಿ ಭಾರತಕ್ಕೆ ಅಗ್ರ ಸ್ಥಾನ :
ಭಾರತದಲ್ಲಿ 85 ದಿನಗಳಲ್ಲಿ 100 ಮಿಲಿಯನ್ ಜನರಿಗೆ ಲಸಿಕೆಗಳನ್ನು (Vaccination) ಹಾಕಲಾಗಿದೆ. ವಿಶ್ವದಲ್ಲೇ ಅತಿ ವೇಗದ ಲಸಿಕಾ ಅಭಿಯಾನ ಇದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. ಯುಎಸ್ (US) 10 ಮಿಲಿಯನ್ ಡೋಸ್ ಲಸಿಕೆ ನೀಡಲು 89 ದಿನಗಳನ್ನು ತೆಗೆದುಕೊಂಡರೆ, ಚೀನಾ (China) ಈ ಸಂಖ್ಯೆಯನ್ನು ತಲುಪಲು 102 ದಿನಗಳನ್ನು ತೆಗೆದುಕೊಂಡಿದೆ. ಲಸಿಕೆ ಹಾಕಿರುವ ಅಂಕಿ ಅಂಶಗಳನ್ನು ತೋರಿಸುವ ಚಾರ್ಟನ್ನು ಪ್ರಧಾನ ಮಂತ್ರಿಗಳ ಕಚೇರಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ : ಕೊರೊನಾ ಪ್ರಕರಣ ಹೆಚ್ಚಳ ಹಿನ್ನಲೆಯಲ್ಲಿ ಕಠಿಣ ನಿರ್ಬ೦ಧನೆಗಳನ್ನು ವಿಧಿಸಿದ ದೆಹಲಿ ಸರ್ಕಾರ
ಪರಿಶೀಲನಾ ಸಭೆಯಲ್ಲಿ ಪ್ರಧಾನಮಂತ್ರಿ ನಿರ್ದೇಶನ:
ಕೋವಿಡ್ -19 (COVID-19) ಮತ್ತು ಕೋವಿಡ್ -19 ವ್ಯಾಕ್ಸಿನೇಷನ್ (Corona Vaccine) ಅಭಿಯಾನದ ಕುರಿತು ಗುರುವಾರ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ, 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಬಗ್ಗೆ ಗಮನಹರಿಸಬೇಕೆಂದು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಇದು ಪರಿಸ್ಥಿತಿ ಬದಲಾಯಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ (PM Modi)ಹೇಳಿದ್ದಾರೆ. ಏಪ್ರಿಲ್ 11 ಜ್ಯೋತಿಬಾ ಫುಲೆ ಜನ್ಮದಿನಾಚರಣೆಯಿಂದ ಏಪ್ರಿಲ್ 14 ರಂದು ಬಾಬಾ ಸಾಹೇಬ ಜನ್ಮದಿನದವರೆಗೆ 'ಟೀಕಾ ಉತ್ಸವ'ವನ್ನು ಆಯೋಜಿಸುವ ಬಗ್ಗೆ ಮೋದಿ ಪ್ರಸ್ತಾಪಿಸಿದ್ದರು.
'ರಾಜ್ಯಗಳ ಆರೋಪಕ್ಕೆ ಉತ್ತರ'
ಹೆಚ್ಚು ಅರ್ಹ ಫಲಾನುಭವಿಗಳಿಗೆ ವಿಶೇಷ ಅಭಿಯಾನದ ಮೂಲಕ ಲಸಿಕೆ (Vaccine)ಹಾಕಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ. 'ಟೀಕಾ ಉತ್ಸವ'ದ ಸಮಯದಲ್ಲಿ ಯಾವುದೇ ಕಾರಣಕ್ಕೂ ಸಮಯ ವ್ಯರ್ಥ ಮಾಡದಂತೆ ಪ್ರಧಾನಿ ಮನವಿ ಮಾಡಿದ್ದಾರೆ. ಇದೇ ವೇಳೆ ಎಲ್ಲಾ ರಾಜ್ಯಗಳಿಗೂ ಅಗತ್ಯವಿರುವಷ್ಟು ಲಸಿಕೆಯನ್ನು ಪೂರೈಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಲಸಿಕೆ ಕೊರತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಸಂಪೂರ್ಣ ಲಾಕ್ ಡೌನ್ ಪರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಒಲವು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.