Mallikarjun Kharge: 'ನನಗೆ 70ಕ್ಕಿಂತ ಹೆಚ್ಚು ವಯಸ್ಸು, 10-15 ವರ್ಷ ಬಾಕಿ ಉಳಿದಿದೆ, ಯುವಕರಿಗೆ ವ್ಯಾಕ್ಸಿನ್ ಹಾಕಿ'

Mallikarjun Kharge - ಕೊರೊನಾ ವ್ಯಾಕ್ಸಿನ್ ಮಹಾ ಅಭಿಯಾನದ (Corona Vaccination)ಎರಡನೇ ಹಂತ ಇಂದಿನಿಂದ ಆರಂಭಗೊಂಡಿದೆ. ಈ ಹಂತದಲ್ಲಿ 60ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಈಗಾಗಲೇ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಲಸಿಕೆ ಹಾಕಲಾಗುತ್ತಿದೆ. 

Written by - Nitin Tabib | Last Updated : Mar 1, 2021, 04:02 PM IST
  • ಕೊರೊನಾ ವ್ಯಾಕ್ಸಿನ್ ಮಹಾ ಅಭಿಯಾನದ (Corona Vaccination)ಎರಡನೇ ಹಂತ ಇಂದಿನಿಂದ ಆರಂಭಗೊಂಡಿದೆ.
  • ಈ ಹಂತದಲ್ಲಿ 60ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ಹಾಕಲಾಗುತ್ತಿದೆ.
  • ಇದೇ ವೇಳೆ 45 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಈಗಾಗಲೇ ಕಾಯಿಲೆಯಿಂದ ಬಳಲುತ್ತಿರುವ ಜನರಿಗೂ ಕೂಡ ಲಸಿಕೆ ಹಾಕಲಾಗುತ್ತಿದೆ.
Mallikarjun Kharge: 'ನನಗೆ 70ಕ್ಕಿಂತ ಹೆಚ್ಚು ವಯಸ್ಸು, 10-15 ವರ್ಷ ಬಾಕಿ ಉಳಿದಿದೆ, ಯುವಕರಿಗೆ ವ್ಯಾಕ್ಸಿನ್ ಹಾಕಿ' title=
Mallikarjun Kharge (File Photo)

ನವದೆಹಲಿ:  Mallikarjun Kharge - ಕೊರೊನಾ ವ್ಯಾಕ್ಸಿನ್ ಮಹಾ ಅಭಿಯಾನದ (Corona Vaccination)ಎರಡನೇ ಹಂತ ಇಂದಿನಿಂದ ಆರಂಭಗೊಂಡಿದೆ. ಈ ಹಂತದಲ್ಲಿ 60ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಈಗಾಗಲೇ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಲಸಿಕೆ ಹಾಕಲಾಗುತ್ತಿದೆ. 

ಈ ಮಧ್ಯೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ (Rajya Sabha Opposition Leader Mallikarjun Kharge) ಅವರನ್ನು ವ್ಯಾಕ್ಸಿನ್ ಕುರಿತು ಪ್ರಶ್ನಿಸಲಾಗಿ, ಅದಕ್ಕೆ ಉತ್ತರಿಸಿರುವ ಖರ್ಗೆ, 'ನನ್ನ ವಯಸ್ಸು 70 ದಾಟಿದೆ. ಇನ್ನೂ ಸುದೀರ್ಘ ಬಾಳಿ ಬದುಕಬೇಕಾಗಿರುವ ಯುವಕರಿಗೆ ನೀವು ವ್ಯಾಕ್ಸಿನ್ (Corona Vaccine)ಮೊದಲು ಹಾಕಬೇಕು. ನನ್ನ ಬಳಿ ಜೀವಿಸಲು ಕೇವಲ 10-15 ವರ್ಷ ಮಾತ್ರ ಬಾಕಿ ಉಳಿದಿದೆ' ಎಂದಿದ್ದಾರೆ.

ಇದನ್ನೂ ಓದಿ- Corona Latest Guidelines: ಇಂದಿನಿಂದ ಮಾರ್ಚ್ 31ರವರೆಗೆ ಹೊಸ ಕರೋನಾ ಮಾರ್ಗಸೂಚಿ ಅನ್ವಯ

ಎರಡನೇ ಹಂತದ ಲಸೀಕಾಕರಣದ ಕುರಿತು ಈಗಾಗಲೇ ಮಾಹಿತಿ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್, ಮಾರ್ಚ್ 1 ರಿಂದ ದೇಶದ ಸುಮಾರು 10 ಸಾವಿರ ಸರ್ಕಾರಿ ಮತ್ತು 20 ಸಾವಿರ ಖಾಸಗಿ ಕೇಂದ್ರಗಳಲ್ಲಿ ಎರಡನೇ ಹಂತದ ಕೊರೊನಾ (Corona)ಲಸಿಕಾಕರಣ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದರು. ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು(Vaccine) ಉಚಿತವಾಗಿ ನೀಡಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಜನರು ಹಣ ಪಾವತಿಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಇದಲ್ಲದೆ ಖಾಸಗಿ ಆಸ್ಪತ್ರೆಗಳು ಹಾಗೂ ಲಸಿಕೆ ತಯಾರಕ ಕಂಪನಿಗಳ ಜೊತೆಗೆ ಚರ್ಚೆ ನಡೆಸಿ ಲಸಿಕೆಯ ಮೊತ್ತದ ಬಗ್ಗೆ ಮುಂದಿನ 2-3 ದಿನಗಳಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ನಿರ್ಣಯ ಕೈಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಮ್ಮ ಬಹುತೇಕ ಸಹೋದ್ಯೋಗಿ ಸಚಿವರು ಲಸಿಕೆಗಾಗಿ (Covid-19 Vaccine) ಹಣ ಪಾವತಿಸುವ ಭರವಸೆಯನ್ನು ನೀಡಿದ್ದರು.

ಇದನ್ನೂ ಓದಿ-Digital Gold: ಡಿಜಿಟಲ್ ಚಿನ್ನ ಖರೀದಿಸುವ ಮೊದಲು ಈ ಸಂಗತಿ ತಿಳಿದುಕೊಳ್ಳಿ, ಸಿಗುತ್ತೆ ಉತ್ತಮ ಆದಾಯ

ದೇಶಾದ್ಯಂತ ಜನವರಿ 16 ರಿಂದ ಕೊರೊನಾ ವ್ಯಾಕ್ಸಿನೇಷನ್ ಮಹಾ ಅಭಿಯಾನ ನಡೆಯುತ್ತಿದೆ. ಜನವರಿ 16 ರಿಂದ ಇದುವರೆಗೆ ಸುಮಾರು 1.20ಕೋಟಿಗೂ ಅಧಿಕ ಜನರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಈ ಹಂತದಲ್ಲಿ ಆರೋಗ್ಯ ರಕ್ಷಕರಿಗೆ, ನಂತರ ಫೆಬ್ರವರಿಯಿಂದ ಫ್ರಂಟ್ ಲೈನ್ ವರ್ಕರ್ಸ್ ಗಳಿಗೆ ವ್ಯಾಕ್ಸಿನ್ ನೀಡಲಾಗಿದೆ. ಎಲ್ಲ ಆರೋಗ್ಯ ರಕ್ಷಕರಿಗೆ ಲಸಿಕೆಯ ಮೊದಲ ಡೋಸ್ ನೀಡಲು ಸರ್ಕಾರ ಫೆಬ್ರವರಿ 20ರವರೆಗೆ ಕಾಲಾವಕಾಶ ನೀಡಿತ್ತು. ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು, ಮೊದಲ ಹಂತದಲ್ಲಿ 8 ರಾಜ್ಯಗಳ ಒಟ್ಟು ಶೇ.75ರಷ್ಟು ಆರೋಗ್ಯ ರಕ್ಷಕರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ.

ಇದನ್ನೂ ಓದಿ- H Vishwanath: 'ಅವಕಾಶ ಸಿಕ್ಕರೆ ಖಂಡಿತಾ 'ಬಿಗ್​ ಬಾಸ್' ಮನೆಗೆ ಹೋಗುತ್ತೇನೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News