Mamata Banerjee: 'ಪ್ರಧಾನಿ ಮೋದಿ ಪ್ರತಿದಿನ ಹಿಂದೂ-ಮುಸ್ಲಿಂ ಬಗ್ಗೆ ಮಾತಾಡುತ್ತಾರೆ'

ಚುನಾವಣಾ ಆಯೋಗದಿಂದ ಮಮತಾ ಬ್ಯಾನರ್ಜಿಗೆ 10 ನೋಟಿಸ್‌

Last Updated : Apr 9, 2021, 09:31 PM IST
  • ಮೋದಿ ವಿರುದ್ದ ಮಾತಿನ ದಾಳಿ ಮುಂದುವರೆಸಿದ ಮಮತಾ ಬ್ಯಾನರ್ಜಿ
  • ಚುನಾವಣಾ ಆಯೋಗದಿಂದ ಮಮತಾ ಬ್ಯಾನರ್ಜಿಗೆ 10 ನೋಟಿಸ್‌
  • ಪ್ರತಿದಿನ ಹಿಂದೂ ಮತ್ತು ಮುಸ್ಲಿಂ ಬಗ್ಗೆ ಮಾತನಾಡುವ ನರೇಂದ್ರ ಮೋದಿಯವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ?
Mamata Banerjee: 'ಪ್ರಧಾನಿ ಮೋದಿ ಪ್ರತಿದಿನ ಹಿಂದೂ-ಮುಸ್ಲಿಂ ಬಗ್ಗೆ ಮಾತಾಡುತ್ತಾರೆ' title=

ಕೋಲ್ಕತಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಮಮತಾ ಬ್ಯಾನರ್ಜಿ ಮಾತಿನ ದಾಳಿ ಮುಂದುವರೆಸಿದ್ದಾರೆ. 

ದೇಶದ ಜನರನ್ನು ಧಾರ್ಮಿಕ ದೃಷ್ಟಿಯಿಂದ ವಿಭಜಿಸಿದ್ದಾರೆ ಮತ್ತು ಮತ ಬ್ಯಾಂಕ್‌ಗಾಗಿ ಹಿಂದೂ-ಮುಸ್ಲಿಂ ಕಾರ್ಡ್ ಉಪಯೋಗಿಸುತ್ತಿದ್ದಾರೆ ಎಂದು ಮಮತಾ(Mamata Banerjee) ಆರೋಪಿಸಿದ್ದಾರೆ.

ಇದನ್ನೂ ಓದಿ :  Shopian-Tral Encounter: ಶೋಪಿಯಾನ್, ಟ್ರಾಲ್‌ನಲ್ಲಿ ಎನ್‌ಕೌಂಟರ್, 5 ಉಗ್ರರ ಹತ್ಯೆ

ಚುನಾವಣಾ ಆಯೋಗ(Election Commission)ದಿಂದ ನೋಟಿಸ್ ಪಡೆದ ಪಶ್ಚಿಮ ಬಂಗಾಳ ಸಿಎಂ, ' ನಾನು ಚುನಾವಣಾ ಪ್ರಚಾರದ ವೇಳೆ ನಾನು  ಆಯೋಗದ ನಿಯಮ ಉಲ್ಲಂಘನೆ ಮಾಡಿದ್ದೇನೆ ಎಂದು ನನ್ನ ವಿರುದ್ಧ 10 ನೋಟಿಸ್‌ಗಳನ್ನು ನೀಡಿದ್ದಾರೆ. ಇದಕ್ಕೆಲ್ಲ ನಾನು ಹೆದರೋಲ್ಲ,  ನಾನು ಎಲ್ಲರೂ ಸೇರಿ ಮತ ಚಲಾಯಿಸುವಂತೆ ಹೇಳಿದ್ದೇನೆ. ನರೇಂದ್ರ ಮೋದಿ ವಿರುದ್ಧ ಎಷ್ಟು ದೂರುಗಳು ದಾಖಲಾಗಿವೆ? ಅವರು ಪ್ರತಿದಿನ ಹಿಂದೂ-ಮುಸ್ಲಿಂ ಬಗ್ಗೆ ಮಾಡುತ್ತಾರೆ, ಏಕೆ ಅವರ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ?' ಎಂದು ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ : BSNL: 450 ರೂ.ಗಿಂತ ಕಡಿಮೆ ಬೆಲೆಯಲ್ಲಿ ಪಡೆಯಿರಿ 3300 ಜಿಬಿ ಡೇಟಾ

ಪಶ್ಚಿಮ ಬಂಗಾಳ(West Bengal)ದ ಹೂಗ್ಲಿ ಜಿಲ್ಲೆಯಲ್ಲಿ ನಡೆದ ಮತದಾನ ರ್ಯಾಲಿಯಲ್ಲಿ ಮತದಾರರಿಗೆ ತಮ್ಮ ಪಕ್ಷಕ್ಕೆ ಮತ ಚಲಾಯಿಸುವಂತೆ ಅಮಿತ್ ಶಾ ಮನವಿ ಮಾಡಿದ್ದರೆ. ಇದು ಕಾನೂನು ಉಲ್ಲಂಘನೆ ಅಲ್ಲವೇ ಎಂದು ಕೇಂದ್ರ ಗೃಹ ಸಚಿವರ ವಿರುದ್ದ ಮಮತಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : Post Office Scheme: ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ 100 ರೂ.ಗಿಂತ ಕಡಿಮೆ ಹೂಡಿಕೆಯಲ್ಲಿ ಪಡೆಯಿರಿ 14 ಲಕ್ಷ ರೂ.

ಚುನಾವಣಾ ನೀತಿ ಸಂಹಿತೆ(Model Code of Conduct )ಯನ್ನು ಉಲ್ಲಂಘಿಸಿದ್ದಕ್ಕಾಗಿ ಮತದಾನ ಸಮಿತಿ ಬುಧವಾರ ಬ್ಯಾನರ್ಜಿಗೆ ನೋಟಿಸ್ ನೀಡಿತ್ತು, ಟಿಎಂಸಿಗೆ ಸಾಮೂಹಿಕವಾಗಿ ಮತ ಚಲಾಯಿಸುವಂತೆ ಮುಸ್ಲಿಂ ಸಮುದಾಯವನ್ನು ಒತ್ತಾಯಿಸಲಾಗಿದೆ ಎಂದು ಆರೋಪ ಕೇಳಿ ಬಂದಿದೆ. 

ಇದನ್ನೂ ಓದಿ : Coronavirus: ಈ ರಾಜ್ಯದ ನಿರುದ್ಯೋಗಿ ಶಿಕ್ಷಕರಿಗೆ ಸರ್ಕಾರದಿಂದ ಸಿಗಲಿದೆ 2000 ರೂ, ಹಣ, 25 ಕೆಜಿ ಅಕ್ಕಿ

ಮಾರ್ಚ್ 28 ರಂದು ಕೇಂದ್ರ ಪಡೆಗಳ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಮಮತಾಗೆ ಚುನಾವಣಾ ಆಯೋಗವು ನೋಟಿಸು ಜರಿ ಮಾಡಿತ್ತು. ಅದಕ್ಕೆ ಸಂಬಧಿಸಿದಂತೆ ಏಪ್ರಿಲ್ 7 ರಂದು ಮತ್ತೆ ಎರಡನೇ ನೋಟಿಸ್ ನೀಡಿ  ಏಪ್ರಿಲ್ 10 ರೊಳಗೆ ಉತ್ತರಿಸುವಂತೆ ತ್ಲಿಸಿಸಲಾಗಿದೆ.  

ಇದನ್ನೂ ಓದಿ : ಬೆಂಗಳೂರು ಸೇರಿ ರಾಜ್ಯದ 6 ನಗರಗಳಲ್ಲಿ ರಾತ್ರಿ ಕರ್ಪ್ಯೂ ಜಾರಿ

ಡೊಮ್ಜೂರ್ ವಿಧಾನಸಭಾ ಕ್ಷೇತ್ರದಲ್ಲಿ  ತಮ್ಮ ಬಿಜೆಪಿ(BJP) ಅಭ್ಯರ್ಥಿ ಪರ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏಕೆ ಯಾವುದೇ ದೂರು ದಾಖಲಾಗಿಲ್ಲ. ಅಲ್ಲಿ ಭಾಷಣ ಮಾಡುವಾಗ ಅವರು ಹಿಂದೂ ಮತ್ತು ಮುಸ್ಲಿಂ ಮತ ಬ್ಯಾಂಕುಗಳ ಬಗ್ಗೆ ಉಲ್ಲೇಖ ಮಾಡಿದ್ದರೆ ಎಂದು ಮಮತಾ ಆರೋಪಿಸಿದ್ದಾರೆ.

ಇದನ್ನೂ ಓದಿ : ಕೊರೊನಾ ನಿಯಂತ್ರಣಕ್ಕೆ ರಾಜ್ಯಗಳಿಗೆ ಪಂಚಸೂತ್ರವನ್ನಿತ್ತ ಪ್ರಧಾನಿ ಮೋದಿ

"ಪ್ರತಿದಿನ ಹಿಂದೂ ಮತ್ತು ಮುಸ್ಲಿಂ ಬಗ್ಗೆ ಮಾತನಾಡುವ ನರೇಂದ್ರ ಮೋದಿ(Narendra Modi)ಯವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ? ನಂದಿಗ್ರಾಮ್ ಅಭಿಯಾನದ ಸಂದರ್ಭದಲ್ಲಿ 'ಮಿನಿ ಪಾಕಿಸ್ತಾನ್' ಎಂಬ ಪದವನ್ನು ಉಚ್ಚರಿಸಿದವರ ವಿರುದ್ಧ ಎಷ್ಟು ದೂರುಗಳು ದಾಖಲಾಗಿವೆ?" ಎಂದು ಮಮತಾ ಪ್ರಶ್ನಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News