Cat Viral Video: ಸಾಕು ಪ್ರಾಣಿಗಳು ಎಂದೊಡನೆ ಮೊದಲು ನೆನಪಾಗುವುದು ನಾಯಿ, ಬೆಕ್ಕು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಧ ವಿಧವಾದ ಸಾಕು ಪ್ರಾಣಿಗಳ ವಿಡಿಯೋವನ್ನು ನೀವು ನೋಡಿರಬಹುದು. ಸಾಕುಪ್ರಾಣಿಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ಇಂಟರ್ನೆಟ್ ಜಗತ್ತಿನಲ್ಲಿ ಹೆಚ್ಚು ವೀಕ್ಷಿಸಲಾಗುತ್ತದೆ. ಅನೇಕರು ತಮ್ಮ ತಮಾಷೆಯ ಚೇಷ್ಟೆಗಳಿಂದ ಕೂಡಿದ ವಿಡೀಯೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ವೇಳೆ ಇಂತಹದೊಂದು ಬೆಕ್ಕಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದರೆ ನಕ್ಕು ನಕ್ಕು ನಿಮ್ಮ ಹೊಟ್ಟೆ ಹುಣ್ಣಾಗುತ್ತದೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಕೆಲವರಿಗೆ ನಾಯಿ, ಬೆಕ್ಕು ಸೇರಿದಂತೆ ಕೆಲವು ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದು ಎಂದರೆ ಅಚ್ಚುಮೆಚ್ಚು. ಆದರೆ ಇನ್ನೂ ಕೆಲವರಿಗೆ ಪ್ರಾಣಿಗಳು ಮನೆಯಲ್ಲಿ ಏನಾದರೂ ಹಾನಿ ಮಾಡಿದರೆ ಎಂಬ ಚಿಂತೆ. ಹಾಗಾಗಿ ಮನೆಯಿಂದ ಎಲ್ಲಾದರೂ ಹೊರಹೋಗುವಾಗ, ಮನೆ ಒಳಗೆ ಬೆಕ್ಕು ಬರದಿರಲಿ ಎಂದು ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದೇವೋ ? ಇಲ್ಲವೋ ಎಂಬುದನ್ನು ಎರೆಡೆರಡು ಬಾರಿ ಚೆಕ್ ಮಾಡ್ತೀವಿ. ಆದರೂ ಬೆಕ್ಕು ಯಾವಾಗ ಮನೆಯಲ್ಲಿ ಏನು ಅವಾಂತರ ಮಾಡಬಹುದು ಎಂದು ಊಹಿಸಲೂ ಸಾಧ್ಯವಿಲ್ಲ.


ಇದನ್ನೂ ಓದಿ- Birds Amazing Viral Video: ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವ, ಸೆಲ್ಫಿ ತೆಗೆದುಕೊಳ್ಳುವ ಪಕ್ಷಿಗಳನ್ನು ನೋಡಿದ್ದೀರಾ... ಇಲ್ಲಿದೆ ತಮಾಷೆಯ ವಿಡಿಯೋ


ಆದರೆ, ನೀವು ಮನೆಯಲ್ಲಿಯೇ ಸಾಕಿರುವ ನಿಮ್ಮ ಪ್ರೀತಿಯ ಬೆಕ್ಕು ನೀವು ಮನೆಯಲ್ಲಿ ಇಲ್ಲದಿದ್ದಾಗ ಹೇಗೆ ಕಾಲ ಕಳೆಯಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಅದು ಹಾಲು ಕುಡಿಯಬಹುದು. ಇಲ್ಲವೇ ಯಾವುದಾದರೂ ವಸ್ತುಗಳೊಂದಿಗೆ ಆಟವಾಡಬಹುದು. ಆದರೆ ಬೆಕ್ಕಿಗೂ ವಾಷಿಂಗ್  ಮೆಷಿನ್‌ಗೂ ಏನು ಸಂಬಂಧ! ವಾಷಿಂಗ್ ಮೆಷಿನ್‌ನಲ್ಲಿ ಬೆಕ್ಕು ಏನು ಮಾಡಬಹುದು ಎಂಬ ಕಲ್ಪನೆ ಸಹಜವಾಗಿ ಯಾರಿಗೂ ಇರುವುದಿಲ್ಲ. ಸದ್ಯ ಸೋಶಿಯಲ್ ಮಿಡಿಯಾದಲ್ಲಿ  (Social Media) ವೈರಲ್ ಆಗಿರುವ ವಿಡಿಯೋವನ್ನು ನೋಡಿದರೆ ನಿಮಗೊಂದು ಅಂದಾಜು ಸಿಗಬಹುದು.


ಮನೆಯಲ್ಲಿ ಕುಟುಂಬ ಸದಸ್ಯರು ಇಲ್ಲದ ಸಮಯದಲ್ಲಿ ವಾಷಿಂಗ್ ಮೆಷಿನ್‌ನಲ್ಲಿ ಬೆಕ್ಕು ಏನು ಮಾಡಬಹುದು. ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದುವರೆಗೂ ಇದನ್ನೂ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಸುಮಾರು ನಾಲ್ಕು ಸಾವಿರ ಮಂದಿ ಇದಕ್ಕೆ ಲೈಕ್ ಕೂಡ ಮಾಡಿದ್ದಾರೆ. ಈ ವೈರಲ್ ವಿಡಿಯೋದಲ್ಲಿ (Viral Video) ವಾಷಿಂಗ್ ಮಿಷನ್ ಬಳಿ ಎರಡು ಬೆಕ್ಕುಗಳನ್ನು ಕಾಣಬಹುದು. ಅದರಲ್ಲಿ ಒಂದು ಬೆಕ್ಕು ಸದ್ದಿಲ್ಲದೆ ವಾಷಿಂಗ್ ಮೆಷಿನ್ ಬಾಗಿಲು ತೆರೆದು ಒಳಗೆ ಪ್ರವೇಶಿಸಿದೆ.  


ಇದನ್ನೂ ಓದಿ- Cobra Viral Video: ಅಪಾಯಕಾರಿ ನಾಗರಹಾವು ಮನೆಯ ಕಾಂಪೌಂಡಿಗೆ ಬಂದಾಗ, ಮುಂದೇನಾಯ್ತು ನೀವೇ ನೋಡಿ...


ಯಂತ್ರದೊಳಗೆ ಕುಳಿತ ಬೆಕ್ಕು ಇದ್ದಕ್ಕಿದ್ದಂತೆ ಮೋಜಿನ ಮೂಡ್‌ಗೆ ಬಂದು ಒಳಗೆ ಓಡಲು ಪ್ರಾರಂಭಿಸುವುದನ್ನು ಕಾಣಬಹುದು. ಈ ಸಮಯದಲ್ಲಿ, ಹೊರಗೆ ನಿಂತಿರುವ ಬೆಕ್ಕು ಅಲ್ಲಿ ಇಲ್ಲಿ ಓಡುವುದನ್ನು ಕಾಣಬಹುದು. ಸಾಕಷ್ಟು ಮೋಜು ಮಸ್ತಿ ಮಾಡಿ ಬೆಕ್ಕಿನ ಯಂತ್ರದಿಂದ ಹೊರಬಂದಿರುವುದನ್ನು ಕಾಣಬಹುದು. 


 

 

 

 



 

 

 

 

 

 

 

 

 

 

 

A post shared by hepgul5 (@hepgul5)


ಬೆಕ್ಕುಗಳ ಈ ತಮಾಷೆಯ ವೀಡಿಯೊವನ್ನು hepgul5 ಎಂಬ ಬಳಕೆದಾರರಿಂದ Instagram ನಲ್ಲಿ ಹಂಚಿಕೊಂಡಿದ್ದಾರೆ. ಈ ತಮಾಷೆಯ ವಿಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ