ಮರಣೋತ್ತರ ಪರೀಕ್ಷೆಯ ವೇಳೆ ಎದ್ದು ಕುಳಿತ ಬಾಲಕಿ..! ಬೆಚ್ಚಿ ಬಿದ್ದ ವೈದ್ಯರು
ಕೆಲವೊಮ್ಮೆ, ಕೆಲವೊಂದಿಷ್ಟು ಸುದ್ದಿಗಳು ನಮಗೆ ಆಘಾತವನ್ನುಂಟು ಮಾಡುತ್ತವೆ. ಇನ್ನೂ ಕೆಲವು ಸುದ್ದಿಗಳು ನಮ್ಮ ಕಣ್ಣು ಮತ್ತು ಕಿವಿಗಳನ್ನು ನಂಬುವುದಿಲ್ಲ. ಅಂತಹುದೇ ಸುದ್ದಿಯೊಂದು ಇಲ್ಲಿದೆ.. ಸತ್ತು ಮರಣೋತ್ತರ ಪರೀಕ್ಷೆಗೆ ಹೋಗಿದ್ದ ದೇಹವೊಂದು ಎದ್ದು ಕುಳಿತ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.. ಹೆಚ್ಚಿನ ವಿವರಗಳಿಗಾಗಿ ಸಂಪೂರ್ಣ ಸುದ್ದಿ ಓದಿ..
ಉತ್ತರ ಪ್ರದೇಶ : ಸತ್ತ ಬಾಲಕಿಯನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಆಕೆಗೆ ಜೀವ ತುಂಬಿ ಮನೆಗೆ ಕಳುಹಿಸಿದ್ದಾರೆ... ಈ ತರ ನಾವು ನಿಮ್ಗೆ ಹೇಳಿದ್ರೆ ನೀವು ಸುಳ್ಳು ಅಂತ ಸುಮ್ಮನಾಗ್ತೀರಾ ಅಲ್ಲವೆ.. ಆದ್ರೆ, ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದ ಈ ಘಟನೆ ನಿಮ್ಗೆ ಶಾಕ್ ನೀಡುವುದಂತು ಖಂಡಿತ..
ಹೌದು... ಮಿರ್ಜಾಪುರದಲ್ಲಿ ಕಾಲುವೆಗೆ ಬಿದ್ದು ಬಾಲಕಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಳು. ನೀರು ನುಂಗಿದ ಬಾಲಕಿ ಸತ್ತಿದ್ದಾಳೆ ಎಂದು ಎಲ್ಲರೂ ಭಾವಿಸಿದ್ದರು. ಪೊಲೀಸರು ಕೂಡ ಆಕೆ ಸತ್ತಿದ್ದಾಳೆ ಎಂದು ತಿಳಿಸಿದ್ದರು. ಆದರೆ ಮಗುವಿನ ಪೋಷಕರು ತಮ್ಮ ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯವಂತೆ ಒತ್ತಾಯಿಸಿದರು. ಪೊಲೀಸರು ಆಕೆಯನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
ಇದನ್ನೂ ಓದಿ: ಗಾಯಕರನ್ನು ಮೀರಿಸುವಂತಿತ್ತು ಈ ಪೊಲೀಸ್ ಅಧಿಕಾರಿ ಹಾಡು; ಇಲ್ಲಿದೆ ನೋಡಿ ವಿಡಿಯೋ ..!
ಮರಣೋತ್ತರ ಪರೀಕ್ಷೆ ವೇಳೆ, ವೈದ್ಯರು ಬಾಲಕಿಯ ಹೃದಯ ಬಡಿತವನ್ನು ಪರಿಶೀಲಿಸಿದರು. ಹೃದಯ ಬಡಿತವನ್ನು ಅವರು ಗಮನಿಸಿದರು. ತಕ್ಷಣವೇ ಬಾಲಕಿ ಕಣ್ಣುರೆಪ್ಪೆಗಳನ್ನು ತೆರೆದಿದು ನೋಡಿದ್ದಾಳೆ. ಇದರಿಂದ ಒಂದು ಕ್ಷಣ ವೈದ್ಯರೇ ಶಾಕ್ ಆಗಿದ್ದರು. ನಂತರ ಬಾಲಕಿ ಸತ್ತಿಲ್ಲ ಎಂದು ತಿಳಿದ ವೈದ್ಯರು ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ದೃಢಪಡಿಸಿಕೊಂಡು, ಕೂಡಲೇ ತುರ್ತು ಚಿಕಿತ್ಸೆ ಆರಂಭಿಸಿದ್ದಾರೆ.
ಹೊಟ್ಟೆಯನ್ನು ಒತ್ತಿ ನುಂಗಿದ ನೀರನ್ನು ಹೊರತೆಗೆದು ಚಿಕಿತ್ಸೆ ನೀಡಿದ್ದಾರೆ. ಸ್ವಲ್ಪ ಸಮಯದಲ್ಲೇ ಪೂರ್ಣ ಪ್ರಜ್ಞೆ ಬಂದ ಬಾಲಕಿಯ ಮಾನಸಿಕ ಸ್ಥಿತಿಯನ್ನೂ ವೈದ್ಯರು ಪರೀಕ್ಷಿಸಿದ್ದಾರೆ. ತನ್ನ ಹೆಸರು, ತಂದೆಯ ಹೆಸರು, ಊರಿನ ಹೆಸರು... ಹೀಗೆ ವೈದ್ಯರು ಕೇಳಿದ ಪ್ರಶ್ನೆಗಳಿಗೆಲ್ಲ ಸರಿಯಾದ ಉತ್ತರ ನೀಡಿ ತಾನು ಸಂಪೂರ್ಣ ಆರೋಗ್ಯವಾಗಿದ್ದೇನೆ ಎಂದು ವೈದ್ಯರಿಗೆ ಸಾಬೀತುಪಡಿಸಿದಳು. ಮಿರ್ಜಾಪುರದಲ್ಲಿ ನಡೆದ ಈ ಘಟನೆ ಸ್ಥಳೀಯರನ್ನಷ್ಟೇ ಅಲ್ಲ ಈ ಬಗ್ಗೆ ತಿಳಿದವರನ್ನೆಲ್ಲ ಬೆಚ್ಚಿ ಬೀಳಿಸಿದೆ.
ಇದನ್ನೂ ಓದಿ: ಭೀಕರ ಬಿಸಿಲು ಹಿನ್ನೆಲೆ 'ಡೆತ್ ಜೋನ್' ಆಗಿ ಮಾರ್ಪಟ್ಟ ಯುಪಿ ಜಿಲ್ಲೆ, ಕೆಲವೇ ಗಂಟೆಗಳಲ್ಲಿ 10 ಜನರ ಸಾವು!
ಸತ್ತು ಹೋಗಿದೆ ಎಂದು ಎಲ್ಲರೂ ಭಾವಿಸಿದ್ದ ತಮ್ಮ ಮಗು ಮತ್ತೆ ಜೀವಂತವಾಗಿ ಬಂದಿರುವುದನ್ನು ಕಂಡು ಪಾಲಕರು ಹರ್ಷ ವ್ಯಕ್ತಪಡಿಸಿದರು. ತಮ್ಮ ಮಗು ಸತ್ತಿಲ್ಲ, ಬದುಕಿದ್ದಾಳೆ, ವೈದ್ಯಕೀಯ ಸಹಾಯಕ್ಕಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಎಷ್ಟು ಹೇಳಿದರೂ ಪೊಲೀಸರು ಕಿವಿಗೊಡಲಿಲ್ಲ ಎಂದು ಬಾಲಕಿಯ ಪೋಷಕರು ತಿಳಿಸಿದ್ದಾರೆ. ಪೊಲೀಸರು ಮಾಡಿದ ತಪ್ಪಿಗೆ ಸ್ಥಳೀಯರು ಕೂಡ ಅಸಮಾಧಾನ ವ್ಯಕ್ತಪಡಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.