ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಸದಸ್ಯರಿಗಾಗಿ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಪಿಎಫ್ ಖಾತೆದಾರರು ವಾಟ್ಸಾಪ್ ಮೂಲಕವೂ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇನ್ಮುಂದೆ ಪಿಎಫ್ ಕಚೇರಿಗೆ ಭೇಟಿ ನೀಡುವ ತೊಂದರೆ ತೆಗೆದುಕೊಳ್ಳಬೇಕಾಗಿಲ್ಲ. ವಾಟ್ಸಾಪ್‌ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.


COMMERCIAL BREAK
SCROLL TO CONTINUE READING

PF subscribers, WhatsApp, EPFO, PF WhatsApp service


ಇಪಿಎಫ್‌ಒದ ಎಲ್ಲಾ 138 ಪ್ರಾದೇಶಿಕ ಕಚೇರಿಗಳಲ್ಲಿ ವಾಟ್ಸಾಪ್ ಸಹಾಯವಾಣಿ ಸೇವೆ(WhatsApp Helpline Service)ಯನ್ನು ಪ್ರಾರಂಭಿಸಿದೆ. ಯಾವುದೇ ಇಪಿಎಫ್‌ಒ ಸದಸ್ಯರು ವಾಟ್ಸಾಪ್ ಸಂದೇಶದ ಮೂಲಕ ದೂರು ನೀಡಬಹುದು. ಖಾತೆದಾರರು ತಮ್ಮ ಪ್ರದೇಶದ ವಾಟ್ಸಾಪ್ ಸಂಖ್ಯೆಯನ್ನು ತಿಳಿಯಲು ಇಪಿಎಫ್‌ಒ https://www.epfindia.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.


COVID-19 ಪ್ರಕರಣಗಳ ಹೆಚ್ಚಳ: ಲಾಕ್ ಡೌನ್ ಪರಿಹಾರವಲ್ಲ- ದೆಹಲಿ ಆರೋಗ್ಯ ಸಚಿವ


ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವಿತ್ ಡ್ರಾ ಮಾಡುವಾಗ ಮಧ್ಯವರ್ತಿಗಳ ಹಾವಳಿ ಹೆಚ್ಚಿರುತ್ತದೆ. ಇದನ್ನು ತಪ್ಪಿಸಲು ಇಪಿಎಫ್‌ಒ(EPFO) ಈ ಸೇವೆ ಶುರು ಮಾಡಿದೆ. ಎಲ್ಲಾ ಖಾತೆದಾರರ ಸಮಸ್ಯೆಗಳನ್ನು ಆನ್‌ಲೈನ್ ಮೂಲಕ ಪರಿಹರಿಸುವುದು ಸರ್ಕಾರದ ಪ್ರಯತ್ನವಾಗಿದೆ.


PM Kisan Yojana: ಈ ದಿನದಿಂದ ನಿಮ್ಮ ಖಾತೆ ಸೇರಲಿದೆ ಪಿಎಂ-ಕಿಸಾನ್ ಸಮ್ಮನ್ ನಿಧಿಯ 8ನೇ ಕಂತು


ಉದ್ಯೋಗಿಯ ಮೂಲ ವೇತನದ ಶೇಕಡಾ 12 ರಷ್ಟು ಪಿಎಫ್ ಖಾತೆ(PF Asscount)ಗೆ ಹೋಗುತ್ತದೆ. ಇಷ್ಟೇ ಪಾಲನ್ನು ಉದ್ಯೋಗದಾತ ನೀಡುತ್ತಾನೆ. ಒಟ್ಟು ಮೊತ್ತಕ್ಕೆ ಸರ್ಕಾರ ಬಡ್ಡಿ ಪಾವತಿ ಮಾಡುತ್ತದೆ. ಸಾಮಾನ್ಯವಾಗಿ, ಪಿಎಫ್ ಖಾತೆಯ ಬಡ್ಡಿದರವು ಇತರ ಖಾತೆಯ ಬಡ್ಡಿದರಕ್ಕಿಂತ ಹೆಚ್ಚಿದೆ. 


Assembly Election 2021: ಅಸ್ಸಾಂ-ಪಶ್ಚಿಮ ಬಂಗಾಳದಲ್ಲಿ ಇಂದು ಮೊದಲ ಹಂತದ ಮತದಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.