ನವದೆಹಲಿ: ಪಶ್ಚಿಮ ಬಂಗಾಳ (West Bengal) ಮತ್ತು ಅಸ್ಸಾಂ (Assam) ವಿಧಾನಸಭಾ ಚುನಾವಣೆಯ (Assembly Election 2021) ಮೊದಲ ಹಂತದ ಮತದಾನ ಶನಿವಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ಈ ಸಮಯದಲ್ಲಿ, 1.54 ಕೋಟಿ ಮತದಾರರು ಎರಡೂ ರಾಜ್ಯಗಳ 77 ವಿಧಾನಸಭಾ ಸ್ಥಾನಗಳಲ್ಲಿ ಮತ ಚಲಾಯಿಸಿ ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇಂದು ತಮ್ಮ ಅದೃಷ್ಟ ಪರಿಶೀಲಿಸುತ್ತಿರುವ ನಾಯಕರು:
ಮೊದಲ ಹಂತದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಭದ್ರಕೋಟೆಯೆಂದು ಪರಿಗಣಿಸಲಾಗಿರುವ ಪುರುಲಿಯಾದ 9 ಸ್ಥಾನಗಳು, ಬಂಕುರಾದಲ್ಲಿ 4, ಜಾರ್ಗ್ರಾಮ್‌ನಲ್ಲಿ 4, ಪಶ್ಚಿಮ ಮದಿನಿಪುರದಲ್ಲಿ 6 ಸ್ಥಾನಗಳು ಮತ್ತು ಪೂರ್ವ ಮೆಡಿನಿಪುರದ 7 ಪ್ರಮುಖ ಸ್ಥಾನಗಳಲ್ಲಿ ಮತದಾನ ನಡೆಯಲಿದೆ. ಈ 30 ಸ್ಥಾನಗಳಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ 29-29 ಸ್ಥಾನಗಳನ್ನು ಕಣಕ್ಕಿಳಿಸಿದರೆ, ಎಡ-ಕಾಂಗ್ರೆಸ್-ಐಎಸ್‌ಎಫ್ ಮೈತ್ರಿ ಎಲ್ಲಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
West Bengal: Preparations underway at a polling booth inEast Midnapore, ahead of voting for the first phase of #WestBengalElections2021 today.
Visuals from Prabhat Kumar College in Contai pic.twitter.com/6af0penX1d
— ANI (@ANI) March 27, 2021
ಜಂಗಲ್ಮಹಲ್ ಕ್ಷೇತ್ರದತ್ತ ಎಲ್ಲರ ಚಿತ್ತ:
ಪಶ್ಚಿಮ ಬಂಗಾಳದಲ್ಲಿ (West Bengal) ಮೊದಲ ಹಂತದಲ್ಲಿ 30 ವಿಧಾನಸಭಾ ಸ್ಥಾನಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಪೈಕಿ ಹೆಚ್ಚಿನ ಸ್ಥಾನಗಳು ನಕ್ಸಲ್ ಪೀಡಿತ ಜಂಗ್ಲೆಮಹಲ್ ಪ್ರದೇಶದಲ್ಲಿವೆ. ಅಂತಹ ಪರಿಸ್ಥಿತಿಯಲ್ಲಿ, ಈ ಪ್ರದೇಶದಲ್ಲಿ ನಡೆಯಲಿರುವ ಮತದಾನದ ಬಗ್ಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ತಜ್ಞರ ಪ್ರಕಾರ, ಭಾರತೀಯ ಜನತಾ ಪಕ್ಷ (ಬಿಜೆಪಿ) ಜಂಗಲ್ಮಹಲ್ ಪ್ರದೇಶದಿಂದ ಉತ್ತಮ ಮತದಾನ ನಿರೀಕ್ಷಿಸುತ್ತಿದೆ. ಏಕೆಂದರೆ 2019 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಈ ಪ್ರದೇಶದ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ.
We've 509 vulnerable booths in our district. We've deployed 169 companies. We're monitoring booths with CAPF & non-CPF measures. Over 50% of polling booths have webcasting facility & CCTV, videographer. We've 800 micro-observers for phase 1: Dist Election Officer, East Midnapore pic.twitter.com/HwWLoXrY7N
— ANI (@ANI) March 27, 2021
ಇದನ್ನೂ ಓದಿ - PM Modi(Video):ಕಾಲಿಗೆ ನಮಸ್ಕರಿಸಲು ಬಂದ ಕಾರ್ಯಕರ್ತನ 'ಪಾದಕ್ಕೆ ನಮಸ್ಕರಿಸಿದ' ಪ್ರಧಾನಿ ಮೋದಿ!
ಕೇಂದ್ರ ಪಡೆಗಳ 684 ಕಂಪನಿಗಳ ನಿಯೋಜನೆ :
ಈ ಪ್ರದೇಶದಲ್ಲಿ ಮತದಾನಕ್ಕಾಗಿ ಕಠಿಣ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 10,288 ಮತಗಟ್ಟೆಗಳ ಸುರಕ್ಷತೆಯ ಹೊಣೆ ಹೊತ್ತಿರುವ ಕೇಂದ್ರ ಪಡೆಗಳ ಸುಮಾರು 684 ಕಂಪನಿಗಳನ್ನು ಚುನಾವಣಾ ಆಯೋಗ ಇಲ್ಲಿ ನಿಯೋಜಿಸುತ್ತಿದೆ. ಇದಲ್ಲದೆ ರಾಜ್ಯ ಪೊಲೀಸರನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗುವುದು ಎಂದು ಹೇಳಲಾಗಿದೆ.
ಅಸ್ಸಾಂನಲ್ಲಿ ತ್ರಿಕೋನ ಸ್ಪರ್ಧೆ :
ಅದೇ ಸಮಯದಲ್ಲಿ, ಅಸ್ಸಾಂನ (Assam) 126 ಸದಸ್ಯರ ವಿಧಾನಸಭೆಯ 47 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಈ ಹಂತದಲ್ಲಿ ಬಹುಪಾಲು ಸ್ಥಾನಗಳು ಆಡಳಿತಾರೂಢ ಬಿಜೆಪಿ-ಎಜಿಪಿ ಮೈತ್ರಿ, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಮಹಾಘಟಬಂಧನ್ ಮತ್ತು ಹೊಸದಾಗಿ ರಚನೆಯಾದ ಅಸ್ಸಾಂ ಜತಿಯ ಪರಿಷತ್ (ಎಜೆಪಿ) ನಡುವೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ.
Assam: Voters queue outside a polling station in Nagaon, ahead of the first phase of #AssamAssemblyPolls today pic.twitter.com/gTAtpOMnFa
— ANI (@ANI) March 27, 2021
Assam: Voters queue outside a polling station in Nagaon, ahead of the first phase of #AssamAssemblyPolls today pic.twitter.com/gTAtpOMnFa
— ANI (@ANI) March 27, 2021
ಶನಿವಾರ ನಡೆಯಲಿರುವ ಮತದಾನದಲ್ಲಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ವಿಧಾನಸಭಾ ಸ್ಪೀಕರ್ ಹಿರೇಂದ್ರನಾಥ ಗೋಸ್ವಾಮಿ ಮತ್ತು ಅಸ್ಸಾಂ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ರಿಪುನ್ ಬೋರಾ ಅವರು ತಮ್ಮ ಅದೃಷ್ಟ ಪರೀಕ್ಷಿಸಲಿದ್ದಾರೆ. ಇದಲ್ಲದೆ, ಆಡಳಿತಾರೂಢ ಬಿಜೆಪಿ ಮತ್ತು ಅಸೋಮ್ ಗಣ ಪರಿಷತ್‌ನ ಅನೇಕ ಮಂತ್ರಿಗಳ ಹಣೆಬರಹವನ್ನು ಮೊದಲ ಹಂತದ ಮತದಾನದೊಂದಿಗೆ ಇವಿಎಂಗಳಲ್ಲಿ ಬಂಧಿಸಲಾಗುವುದು.
ಇದನ್ನೂ ಓದಿ - VK Sasikala: ರಾಜಕೀಯಕ್ಕೆ ಗುಡ್‌ಬೈ ಹೇಳಿದ್ದ ಶಶಿಕಲಾಗೆ 'ಆಫರ್' ನೀಡಿದ ಪನ್ನೀರ್ ಸೆಲ್ವಂ!
ಮೇ 2 ರಂದು ಚುನಾವಣಾ ಫಲಿತಾಂಶ :
ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಮಾರ್ಚ್ 27 ರಂದು, ಎರಡನೇ ಹಂತದಲ್ಲಿ ಏಪ್ರಿಲ್ 1 ರಂದು ಮತ್ತು ಮೂರನೇ ಹಂತದಲ್ಲಿ ಏಪ್ರಿಲ್ 6 ರಂದು ಮತ ಚಲಾಯಿಸಲಾಗುವುದು. ಆದರೆ ಪಶ್ಚಿಮ ಬಂಗಾಳದ 294 ವಿಧಾನಸಭಾ ಸ್ಥಾನಗಳು 8 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತ - ಮಾರ್ಚ್ 27, ಎರಡನೇ ಹಂತ - 1 ಏಪ್ರಿಲ್, ಮೂರನೇ ಹಂತ - 6 ಏಪ್ರಿಲ್, ನಾಲ್ಕನೇ ಹಂತ - 10 ಏಪ್ರಿಲ್, ಐದನೇ ಹಂತ - 17 ಏಪ್ರಿಲ್, ಆರನೇ ಹಂತ - 22 ಏಪ್ರಿಲ್, ಏಳನೇ ಹಂತ - 26 ಏಪ್ರಿಲ್ ಮತ್ತು ಎಂಟನೇ ಹಂತ - ಏಪ್ರಿಲ್ 29 ರಂದು ನಡೆಯಲಿದೆ. ಚುನಾವಣಾ ಫಲಿತಾಂಶವು ಮೇ 2 ರಂದು ಹೊರಬೀಳಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.