ಭುವನೇಶ್ವರ: ಕರೋನವೈರಸ್ ವಿರುದ್ಧ ಹೋರಾಟದಲ್ಲಿ ದೇಶದಲ್ಲಿ ಲಸಿಕೆ ತಯಾರಿಸಲು ಸಂಬಂಧಿಸಿದಂತೆ ಒಂದು ಒಳ್ಳೆಯ ಸುದ್ದಿ ಒಡಿಶಾದಿಂದ ಬರುತ್ತಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ಭಾರತ್ ಬಯೋಟೆಕ್ನ ಸಾಮಾನ್ಯ ಕಾರ್ಯಕ್ರಮದಡಿಯಲ್ಲಿ ಕೋವಾಕ್ಸೈನ್ (Covaxin) ಮಾನವರ ಮೇಲೆ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಲಾಗಿದೆ. ಇನ್ನೂ ಉತ್ತಮವಾದ ವಿಷಯವೆಂದರೆ ವ್ಯಾಕ್ಸಿನೇಷನ್ ನಂತರ ಯಾವುದೇ ಅಡ್ಡಪರಿಣಾಮಗಳು ವರದಿಯಾಗಿಲ್ಲ.


COMMERCIAL BREAK
SCROLL TO CONTINUE READING

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಆಯ್ಕೆ ಮಾಡಿದ 12 ಕೇಂದ್ರಗಳಲ್ಲಿ ಒಂದಾದ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಎಸ್‌ಯುಎಂ ಆಸ್ಪತ್ರೆಯಲ್ಲಿ ಬಹುನಿರೀಕ್ಷಿತ ಬಿಬಿವಿ 152 ಕೋವಿಡ್ -19  (BBV152 Covid-19) ಲಸಿಕೆ ಅಥವಾ ಕೊವಾಕ್ಸಿನ್ ಕ್ಲಿನಿಕಲ್ ಟ್ರಯಲ್ ಪ್ರಾರಂಭವಾಗಿವೆ. ಮೊದಲ ಮತ್ತು ಎರಡನೇ ಹಂತದ ಪ್ರಕ್ರಿಯೆಗೆ ಈ 12 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಈ ಮಹತ್ವದ ಪರೀಕ್ಷೆಯ ಭಾಗವಾಗಲು ಮುಂದೆ ಬಂದ ಆಯ್ದ ಕೆಲವರಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಾಕ್ಸಿನ್ ಅನ್ನು ನೀಡಲಾಗಿದೆ ಎಂದು ಪರೀಕ್ಷಾ ಪ್ರಕ್ರಿಯೆಯ ಪ್ರಧಾನ ಸಂಶೋಧಕ ಡಾ.ಇ.ವೆಂಕಟ ರಾವ್ ಹೇಳಿದ್ದಾರೆ. ಲಸಿಕೆ ಹಾಕಿದ ಎಲ್ಲರನ್ನು ವೀಕ್ಷಣೆಗೆ ಒಳಪಡಿಸಲಾಗಿದೆ ಮತ್ತು ಅವರೆಲ್ಲರ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡಿದೆ ಎಂದು ಹೇಳಿದರು.


ಲಸಿಕೆ ಪಡೆಯಲು ಮುಂದೆ ಬಂದ ಸ್ವಯಂಸೇವಕರು ಕಠಿಣ ತಪಾಸಣೆ ಪ್ರಕ್ರಿಯೆಯ ಮೂಲಕ ಸಾಗಬೇಕಾಗಿತ್ತು ಮತ್ತು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ನಿಗದಿಪಡಿಸಿದ ಪ್ರೋಟೋಕಾಲ್ ಅನುಸರಿಸಿ ಈ ಲಸಿಕೆಗಳನ್ನು ನೀಡಲಾಗಿದೆ ಎಂದು ರಾವ್ ಹೇಳಿದರು. ಆಯ್ಕೆಯಾದ ಸ್ವಯಂಸೇವಕರಿಗೆ 14 ದಿನಗಳ ಅವಧಿಯಲ್ಲಿ ಎರಡು ಪ್ರಮಾಣವನ್ನು ನೀಡಲಾಗುವುದು ಎಂದವರು ವಿವರಿಸಿದರು.


ಆಸ್ಪತ್ರೆಯ ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕ ರಾವ್ ಮಾತನಾಡಿ ಪರೀಕ್ಷೆಗೆ ಬಂದ ಜನರಲ್ಲಿ ಸಾಕಷ್ಟು ಉತ್ಸಾಹವಿದೆ. ಜನರಿಂದ ಬಹಳ ಉತ್ತೇಜನಕಾರಿಯಾದ ಪ್ರತಿಕ್ರಿಯೆ ಬರುತ್ತಿದೆ. ಈಗಲೂ ಸಹ ಅನೇಕ ಜನರು ಪರೀಕ್ಷೆಯ ಭಾಗವಾಗಲು ಮುಂದೆ ಬರುತ್ತಿದ್ದಾರೆ ಎಂದವರು ತಿಳಿಸಿದರು.