ದೆಹಲಿ: ಕೇಂದ್ರ ಸರ್ಕಾರ ಇಷ್ಟು ದಿವಸ  ಅಡುಗೆ ಸಿಲಿಂಡರ್ ದರ ಏರಿಸಿ ಮಧ್ಯಮ ವರ್ಗದವರನ್ನು  ಸಂಕಷ್ಟ ಸಿಲುಕಿಸಿತ್ತು . ಏರಿ‌ಕೆ ಬೆನ್ನಲ್ಲೇ  ಇದೀಗ ಮತ್ತೊಂದು ಶಾಕ್‌ ನೀಡಿದೆ.ದುನಿಯಾ ಮತ್ತಷ್ಟು ದುಬಾರಿಯಾಗೋ ಮುನ್ಸೂಚನೆ ನೀಡಿದೆ. 


COMMERCIAL BREAK
SCROLL TO CONTINUE READING

ಹೋಟೆಲ್ ಊಟ, ತಿಂಡಿ ದರ ಶೀಘ್ರದಲ್ಲೇ ಹೆಚ್ಚಾಗಲಿದೆ.ತಿಂಗಳೊಳಗೆ ಹೋಟೆಲ್ ಗಳಲ್ಲಿ ತಿಂಡಿ, ಊಟ ಪರಿಷ್ಕರಣೆ ಮಾಡಲಾಗುವುದು. ಈ ಬಗ್ಗೆ ಮಾತಾನಾಡಿರುವ ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ , ಅಡುಗೆ ಎಣ್ಣೆ, ತರಕಾರಿ, ದಿನಸಿ ಸೇರಿದಂತೆ ಎಲ್ಲ ದಿನಬಳಕೆಯ ವಸ್ತುಗಳ ಬೆಲೆ ಆಕಾಶಕ್ಕೆ ಏರಿದೆ. ಇದರ ನಡುವೆ ಜೀವನ ಮಾಡೋದೆ ಕಷ್ಟ ಎನ್ನಿಸುತ್ತಿದೆ.


ಇದನ್ನೂ ಓದಿ: ಬಲ ಪಂಥೀಯ ಸರ್ಕಾರ ಬರಬಾರದು,ಕಾಫೀರರನ್ನು ಕೊಲ್ಲಬೇಕು: ಬಯಲಾಯ್ತು ಪ್ರವೀಣ್ ನೆಟ್ಟಾರೂ ಹಂತಕರ ಪ್ಲ್ಯಾನ್


ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ದರ ಇಳಿಸಿತ್ತು . ಇದರಿಂದಾಗಿ ಉದ್ಯಮಿಗಳಲ್ಲಿ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಆದ್ರೆ ಇದೀಗ ಕೇಂದ್ರ ಸರ್ಕಾರ ಅಗತ್ಯ ವಸ್ತುಹಾಗೂ  ಗೃಹ ಬಳಕೆ ಗಳ  ಮತ್ತೆ ಬೆಲೆ ಏರಿಸಿದೆ. ಈ ನಡುವೆ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ಹೆಚ್ಚಳ ಮಾಡಿದೆ.


ಇದನ್ನೂ ಓದಿ: Viral Video: ದೇವರೇ.. ವಿದ್ಯೆ ಕಲಿಯಿರಿ ಅಂದ್ರೆ ದಾರಿ ಮಧ್ಯೆ ವಿದ್ಯಾರ್ಥಿಗಳು ಇಂಥಾ ಅಸಹ್ಯ ಕೆಲಸ ಮಾಡೋದಾ!!


ಚುನಾವಣೆ ಮುನ್ನವೇ ಬೆಲೆ ಏರಿಕೆ ಅಚ್ಚರಿ ಮೂಡಿಸಿದೆ ಎಂದು  ಹೋಟೆಲ್ ಮಾಲೀಕರು ಪ್ರತಿಕ್ರೀಯಿಸಿದ್ದಾರೆ. ಮಾರ್ಚ್ 16 ರಂದು ಕೇಂದ್ರ ಪೆಟ್ರೋಲಿಯಂ ಸಚಿವರನ್ನ ಭೇಟಿ ಮಾಡುತ್ತೇವೆ. ಮನವಿಗೆ ಸ್ವಂದಿಸದೇ ಹೋದರೆ ಹೋಟೆಲ್ ಗಳಲ್ಲಿ ಊಟ ತಿಂಡಿ ದರ ಪರಿಷ್ಕರಣೆ ಅನಿವಾರ್ಯ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್  ಹೇಳಿಕೆ ನೀಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ