Aadhar card must for Tirupati darshan : ತಿರುಪತಿ ದೇವಸ್ಥಾನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ತಿರುಮಲಕ್ಕೆ ಬರುವ ಭಕ್ತರಿಗೆ ಮುಂಗಡವಾಗಿ ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯವೂ ಇದೆ. ಅಲ್ಲದೆ, ಭಕ್ತರು ನೇರವಾಗಿ ಬಂದು ಉಚಿತವಾಗಿ ಗೋವಿಂದನ ದರ್ಶನ ಪಡೆಯಬಹುದು. ಆದರೆ ಇದು ಸ್ವಲ್ಪ ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತದೆ. ತಿರುಪತಿ ದೇವಸ್ಥಾನದ ಅಧಿಕೃತ ವೆಬ್ಸೈಟ್ಗೆ ಹೋಗಿ ಯಾವುದೇ ಗುರುತಿನ ಚೀಟಿ ಸಲ್ಲಿಸಿ ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸುವ ನಿಯಮ ಜಾರಿಯಲ್ಲಿತ್ತು.
ಆದರೆ ಈಗ ಈ ಪದ್ಧತಿಯನ್ನು ರದ್ದುಪಡಿಸಲಾಗಿದೆ. ಆಧಾರ್ ಇದ್ದರೆ ಮಾತ್ರ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ. ಈ ಹಿಂದೆ ಆಧಾರ್ ಇಲ್ಲದ ಭಕ್ತರು ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಡ್ರೈವಿಂಗ್ ಲೈಸೆನ್ಸ್ ಬಳಸಿ ದರ್ಶನ ಟಿಕೆಟ್ ಪಡೆಯುತ್ತಿದ್ದರು. ಈಗ ಅದನ್ನು ರದ್ದುಗೊಳಿಸಲಾಗಿದೆ. ಗುರುತಿನ ಏಕೈಕ ರೂಪವಾಗಿ ಆಧಾರ್ ಅನ್ನು ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ: Rahul Gandhi Praises PM Modi : ಕೇಂಬ್ರಿಡ್ಜ್ನಲ್ಲಿ ಮೋದಿ ಸರ್ಕಾರವನ್ನು ಹಾಡಿಹೊಗಳಿದ ರಾಹುಲ್ ಗಾಂಧಿ!
ಈ ಕುರಿತು ತಿರುಮಲದಲ್ಲಿ ಮಾಧ್ಯಮದವರನ್ನು ಭೇಟಿ ಮಾಡಿದ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಧರ್ಮಾ ರೆಡ್ಡಿ ಮಾತನಾಡಿ, ಭಕ್ತರು ಇನ್ನು ಮುಂದೆ ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿಯನ್ನು ಸೇರಿದಂತೆ ಇತರೆ ಯಾವುದೇ ದಾಖಲಾತಿಗಳನ್ನು ನೀಡಿ ತಿರುಮಲ ಒಡೆಯನ ದರ್ಶನದ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ. ತಿರುಪತಿಯಿಂದ ತಿರುಮಲಕ್ಕೆ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ನೀಡಲಾಗುತ್ತಿದ್ದ ದಿವ್ಯ ದರ್ಶನ ಟೋಕನ್ ಅನ್ನು ಸ್ಥಗಿತಗೊಳಿಸಲಾಗಿದೆ. ಶೀಘ್ರದಲ್ಲೇ ಮತ್ತೆ ಆರಂಭಿಸಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ.
300 ರೂಪಾಯಿ ದರ್ಶನ ಟಿಕೆಟ್, ಉಚಿತ ದರ್ಶನ ಟೋಕನ್ ಸೇರಿದಂತೆ ಯಾವುದೇ ದರ್ಶನ ಟಿಕೆಟ್ ಖರೀದಿಸಿದ ಭಕ್ತರು ನಡೆದುಕೊಂಡು ಬೆಟ್ಟ ಹತ್ತುವಾಗ ಅಲ್ಲಿ ನೀಡಿದ ದರ್ಶನ ಟೋಕನ್ ಅನ್ನು ಸಹ ಖರೀದಿಸುತ್ತಿದ್ದಾರೆ. ಹೀಗೆ ಒಂದೇ ದಿನದಲ್ಲಿ ಒಂದೇ ಭಕ್ತನಿಗೆ ಎರಡು ರೀತಿಯ ದರ್ಶನ ಅವಕಾಶಗಳು ಸಿಗುತ್ತವೆ. ಆಡಳಿತಾತ್ಮಕ ಮಟ್ಟದಲ್ಲಿ ಇದು ವಿವಿಧ ಅಡಚಣೆಗಳನ್ನು ಉಂಟುಮಾಡುತ್ತದೆ. ಇದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡ ನಂತರ ದಿವ್ಯ ದರ್ಶನ ಟೋಕನ್ಗಳನ್ನು ಭಕ್ತರಿಗೆ ಹಿಂತಿರುಗಿಸಲಾಗುವುದು ಎಂದರು ಧರ್ಮಾರೆಡ್ಡಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.