ನವದೆಹಲಿ:  ಸ್ವಿಡನ್ ಚಳವಳಿಗಾರ್ತಿ ಗ್ರೇಟಾ ಥಂಬರ್ಗ್ ಟೂಲ್ ಕಿಟ್  ಪ್ರಕರಣದಲ್ಲಿ (Greta Thunberg toolkit case) ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು,  ಮಹತ್ವದ ಮುನ್ನಡೆ ದಾಖಲಿಸಿದ್ದಾರೆ. ಪ್ರಕರಣದ ಬೆನ್ನತ್ತಿ ಹೊರಟಿರುವ ದೆಹಲಿ ಪೊಲೀಸರು ಬೆಂಗಳೂರಿನಲ್ಲಿ (Bengaluru) ದಿಶಾ ರವಿ (Disha Ravi) ಎಂಬ 21 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಯಾರು ಈ ದಿಶಾ ರವಿ.?
ದಿಶಾ ರವಿ ಓರ್ವ ಹವಾಮಾನ ಹೋರಾಟಗಾರ್ತಿಯಾಗಿದ್ದಾರೆ(Climate Activist). ಫ್ರೈಡೆ ಫಾರ್ ಫ್ಯೂಚರ್ (Friday for Future) ಎಂಬ ಕಂಪನಿಯ ಸ್ಥಾಪಕರಲ್ಲಿ (Founders) ಒಬ್ಬರಾಗಿದ್ದಾರೆ. ದಿಶಾ ಅವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.  ಫೆ. 4 ರಂದು ದೆಹಲಿ ಪೊಲೀಸರು (Dehli Police) ಗ್ರೇಟಾ ಥಂಬರ್ಗ್ ಟೂಲ್ ಕಿಟ್ ಪ್ರಕರಣದಲ್ಲಿ ಕೇಸ್ ದಾಖಲಿಸಿದ್ದರು. ಜೊತೆಗೆ ಟೂಲ್ ಕಿಟ್ ಎಲ್ಲಿಂದ ಅಪ್ಲೋ್ಡ್ ಆಗಿದೆ ಎಂಬ ಮಾಹಿತಿಯನ್ನು ಗೂಗಲ್ನಿಂ ದ (google) ಕೇಳಿದ್ದರು. ಬಳಿಕ ಟೂಲ್ ಕಿಟ್ ಪ್ರಕರಣದ ಆರೋಪಿಗಳ ಪತ್ತೆಗೆ ದೆಹಲಿ ಪೊಲೀಸ್ ಸೈಬರ್ ಸೆಲ್ (Cyber Cell) ಕಾರ್ಯಾಚರಣೆ ಆರಂಭಿಸಿತ್ತು


ಇದನ್ನೂ ಓದಿ : Internet ಮೇಲೆ ಅಶ್ಲೀಲ ಹುಡುಕಾಟ ನಡೆಸಿದರೆ ಹುಷಾರ್! ಬರಲಿದೆ Alert


ಏನಿದು ಗ್ರೇಟಾ ಥಂಬರ್ಗ್ ಟೂಲ್ ಕಿಟ್ ಪ್ರಕರಣ.?
ದೇಶದಲ್ಲಿ ನಡೆಯುತ್ತಿರುವ ಕೃಷಿ ಆಂದೋಲನವನ್ನು (Farmer Protest) ಬೆಂಬಲಿಸಿ ಸ್ವೀಡನ್ನಿನ ಚಳವಳಿಗಾರ್ತಿ ಗ್ರೇಟಾ ಥಂಬರ್ಗ್ ಇತೀಚೆಗೆ ಟ್ವೀಟ್ (tweet) ಮಾಡಿದ್ದರು. ಇದರ ಜೊತೆ ಇನ್ನೊಂದು ಟ್ವೀಟ್ ಮಾಡಿ ಒಂದು ಡಾಕ್ಯುಮೆಂಟ್ ರಿಲೀಸ್ ಮಾಡಿದ್ದರು. ಗ್ರೇಟ್ ಥಂಬರ್ಗ್ ಅದನ್ನು ಟೂಲ್ ಕಿಟ್ ಎಂದು ಕರೆದಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಹೇಗೆ ಚಳವಳಿ ನಡೆಸಬೇಕು ಎಂಬ ಕಾರ್ಯಯೋಜನೆ ಅದರಲ್ಲಿತ್ತು. ಆ ಟ್ವೀಟ್ ಭಾರತದಲ್ಲಿನ ಕೃಷಿ ಚಳವಳಿಯಲ್ಲಿ ವಿದೇಶಿ ಶಕ್ತಿಗಳ ಕೈವಾಡವನ್ನು ಬಯಲಿಗೆಳೆದಿದೆ ಎಂದು ಬಿಜೆಪಿ (BJP) ಆಪಾದಿಸಿತ್ತು. ಈ ಆರೋಪಗಳ ಬೆನ್ನಲ್ಲೇ ಗ್ರೇಟಾ ಥಂಬರ್ಗ್ ಟೂಲ್ ಕಿಟ್ ತನ್ನ ಟ್ವೀಟ್ನಿಂ ದ ಡಿಲೀಟ್ ಮಾಡಿದ್ದರು. ನಂತರ ಹೊಸ ಟ್ವೀಟ್ ಮಾಡಿ ಹೊಸ ಟೂಲ್ ಕಿಟ್ ಬಿಡುಗಡೆ ಮಾಡಿದ್ದರು ಗ್ರೇಟಾ ಥಂಬರ್ಗ್. ಆದರೆ ಅದರಲ್ಲಿ   ಹಲವು ವಿವಾದಾಸ್ಪದ ಅಂಶಗಳನ್ನು ಡಿಲೀಟ್ ಮಾಡಲಾಗಿತ್ತು.


ಕೆಂಪುಕೋಟೆ ಪ್ರಕರಣಕ್ಕೂ ಟೂಲ್ ಕಿಟ್ ಗೂ  ಸಂಬಂಧ..?
ಜ. 26ರಂದು ಯಾವ ರೀತಿ ಚಳವಳಿ ನಡೆಸಬೇಕೆಂಬ ಮಾಹಿತಿ ಗ್ರೇಟ್ ಥಂಬರ್ಗ್ ರಿಲೀಸ್ ಮಾಡಿದ್ದ ಹಳೆಯ ಟೂಲ್ ಕಿಟ್ ನಲ್ಲಿತ್ತು. ಹಾಗಾಗಿ, ಜ. 26ರ ಕೆಂಪುಕೋಟೆ ದಾಳಿ (Red Fort Attack) ಪ್ರಕರಣದ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿರಬಹುದು ಎಂಬ ಎಳೆಯನ್ನು ಹುಡುಕಿಕೊಂಡು ದೆಹಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.


ಇದನ್ನೂ ಓದಿ : Modi Government ಈ ಯೋಜನೆಯಿಂದ ರೈತರಿಗೆ ಸಿಗಲಿದೆ ಈ ಸೌಲಭ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.