Internet ಮೇಲೆ ಅಶ್ಲೀಲ ಹುಡುಕಾಟ ನಡೆಸಿದರೆ ಹುಷಾರ್! ಬರಲಿದೆ Alert

Action Against Pornography Search On Internet - ಪ್ರಾಯೋಗಿಕ ಯೋಜನೆಯಡಿ ರಾಜ್ಯದ ಆರು ಜಿಲ್ಲೆಗಳಲ್ಲಿ ಈ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಎಡಿಜಿ (ADG) ನೀರಾ ರಾವತ್ ಹೇಳಿದ್ದಾರೆ.

Written by - Nitin Tabib | Last Updated : Feb 13, 2021, 07:07 PM IST

    Internet ಮೂಲಕ ಅಶ್ಲೀಲ ಹುಡುಕಾಟ ನಡೆಸಿದರೆ ಎಚ್ಚರ.

    ಬರಲಿದೆ ಪೋಲೀಸರ ಎಚ್ಚರಿಕೆಯ ಸಂದೇಶ.

    ಭವಿಷ್ಯದಲ್ಲಿ ಕಿರುಕುಳ, ಅತ್ಯಾಚಾರ ಪ್ರಕರಣ ನಡೆದರೆ ಈ ದತ್ತಾಂಶ ಬಳಕೆಯಾಗಲಿದೆ.

Internet ಮೇಲೆ ಅಶ್ಲೀಲ ಹುಡುಕಾಟ ನಡೆಸಿದರೆ ಹುಷಾರ್! ಬರಲಿದೆ Alert title=
Action Against Pornography Search On Internet (Representational Image)

ನವದೆಹಲಿ: Action Against Pornography Search On Internet, ಅಂತರ್ಜಾಲದಲ್ಲಿ (Internet) ಅಶ್ಲೀಲ ಚಿತ್ರಗಳನ್ನು (Pornography) ನೋಡಿದ ನಂತರ ನೀವು ನೀಚ ಕೃತ್ಯ ಎಸಗಿದರೆ,  ಸುಮ್ಮನೆ ಬಿಡಲಾಗುವುದಿಲ್ಲ. ಇದಕ್ಕಾಗಿ ಉತ್ತರ ಪ್ರದೇಶ ಪೋಲೀಸ್ (UP Police) 1090 ಸೇವೆಯ ಅಡಿ ಹೊಸ ಯೋಜನೆಯನ್ನು ಸಿದ್ಧಪಡಿಸಿದೆ. ಈಗ 1090 ರ ತಂಡವು ಇಂಟರ್ನೆಟ್‌ನಲ್ಲಿ ಅಶ್ಲೀಲತೆಯನ್ನು ನೋಡುವವರ ಮೇಲೆ ನಿಗಾವಹಿಸಲಿದೆ. ಇದನ್ನು ಮಾಡುವವರಿಗೆ ಎಚ್ಚರಿಕೆ ನೀಡಲಾಗುವುದು. ಅಂಥವರ ಮಾಹಿತಿಯನ್ನು ಕೂಡ ಕಲೆ ಹಾಕಲಾಗುವುದು ಮತ್ತು  ಭವಿಷ್ಯದಲ್ಲಿ, ಕಿರುಕುಳ ಅಥವಾ ದುಷ್ಕೃತ್ಯದಂತಹ ಘಟನೆಗಳು ನಡೆದರೆ, ಅದೇ ಡೇಟಾವನ್ನು(Cyber Crime) ಬಳಸಿ ಅಪರಾಧಿಗಳ ಹುಡುಕಾಟ ನಡೆಸಲಾಗುವದು ಎನ್ನಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಎಡಿಜಿ ನೀರಾ ರಾವತ್, ಹೆಚ್ಚುತ್ತಿರುವ ಇಂಟರ್ನೆಟ್ ಬಳಕೆಯನ್ನು ಗಮನದಲ್ಲಿಟ್ಟುಕೊಂಡು, 1090 ಕೂಡ ಇದೆ ಮಾಧ್ಯಮವನ್ನು ಬಳಸಿ ಜನರವರೆಗೆ ತಲುಪುವ ಪ್ರಯತ್ನ ನಡೆಸಿದೆ ಎಂದಿದ್ದಾರೆ. ಎಡಿಜಿಯ ಪ್ರಕಾರ, ಇಂಟರ್ನೆಟ್ ನ ಅನಾಲಿಟಿಕ್ಸ್  ಅಧ್ಯಯನ ಮಾಡಲು, oomuph ಎಂಬ ಕಂಪನಿಯನ್ನು ನೇಮಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಕಂಪನಿ ಡೇಟಾದ ಮೂಲಕ ಅಂತರ್ಜಾಲದಲ್ಲಿ ಏನನ್ನು ಹುಡುಕಲಾಗುತ್ತಿದೆ ಎಂಬುದರ ಕುರಿತು ನಿಗಾವಹಿಸಲಿದೆ. ಒಬ್ಬ ವ್ಯಕ್ತಿಯು ಅಂತರ್ಜಾಲದಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಿದರೆ, ಅದರ ಸಂಕೇತ ಈ ತಂಡಕ್ಕೆ ಸಿಗಲಿದೆ.

ಇದನ್ನು ಓದಿ- ಅಶ್ಲೀಲ ಚಿತ್ರ ವೀಕ್ಷಣೆ ರಾಷ್ಟ್ರ ವಿರೋಧಿ ಕಾರ್ಯ ಅಲ್ಲ: ಸಚಿವ ಮಾಧುಸ್ವಾಮಿ ಹೇಳಿಕೆ

ಬಳಿಕ oomuph ತಂಡ 1090ಕ್ಕೆ ಈ ಕುರಿತು ಮಾಹಿತಿ ನೀಡಲಿದೆ. ನಂತರ ಈ ವಿಷಯಗಳ ಬಗ್ಗೆ ಅರಿವು ಮೂಡಿಸಲು 1090 ತಂಡವು ವ್ಯಕ್ತಿಗೆ ಅಲರ್ಟ್ ಸಂದೇಶಗಳನ್ನು ಕಳುಹಿಸುತ್ತದೆ. ಇದನ್ನು ಮಾಡುವುದರಿಂದ, ಅಪರಾಧದ ಪ್ರಾರಂಭವನ್ನು ನಿಲ್ಲಿಸುವ ನಿರೀಕ್ಷೆ ಹೊಂದಲಾಗಿದೆ. ಮಹಿಳೆಯರಿಗೆ ಇನ್ನೂ ಕಿರುಕುಳ ನೀಡಿದರೆ, 1090 ಕ್ರಮ ತೆಗೆದುಕೊಳ್ಳುತ್ತದೆ. ಪ್ರಾಯೋಗಿಕ ಯೋಜನೆಯಡಿ ರಾಜ್ಯದ ಆರು ಜಿಲ್ಲೆಗಳಲ್ಲಿ ಈ ವ್ಯವಸ್ಥೆಯನ್ನು ಆರಂಭಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನೀರಾ ರಾವತ್ ಹೇಳಿದ್ದಾರೆ.

ಇದನ್ನು ಓದಿ- ಮಕ್ಕಳ ಅಶ್ಲೀಲ ಫೋಟೋ ಮತ್ತು ವೀಡಿಯೋ ಸಂಗ್ರಹಿಸಿಟ್ಟಿದ್ದ ಭಾರತೀಯ ಮೂಲದ ವ್ಯಕ್ತಿ ಅಮೇರಿಕಾದಲ್ಲಿ ಬಂಧನ

11.6 ಕೋಟಿ ಇಂಟರ್ನೆಟ್ ಬಳಕೆದಾರರು
ಈಗ ಈ ವ್ಯವಸ್ಥೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಯಲಿದೆ. ರಾಜ್ಯದಲ್ಲಿ ಪ್ರಸ್ತುತ ಸುಮಾರು 11.6 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದಾರೆ. ಆ ಜನರೆಲ್ಲರೂ ಮುಖ್ಯವಾಗಿ 1090 ರ ಗುರಿಯಲ್ಲಿದ್ದಾರೆ. ಮತ್ತೊಂದೆಡೆ, ಮಹಿಳಾ ಸುರಕ್ಷತೆಗಾಗಿ (Crime Against Women) ಸಿಎಂ ಯೋಗಿ ಆದಿತ್ಯನಾಥ್ (Yogi Government)ಅವರು ಪ್ರಾರಂಭಿಸಿದ ಮಿಷನ್ ಶಕ್ತಿ ಯೋಜನೆ ವುಮೆನ್ ಪಾವರ್ ಲೈನ್ (1090) ಹೆಚ್ಚು ಶಕ್ತಿಯುತವಾಗಿಸುತ್ತದೆ. ಇದಕ್ಕಾಗಿ 1090 ತಂಡ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಚಕ್ರವ್ಯೂಹವನ್ನು ಸಿದ್ಧಪಡಿಸಿದೆ. ಇದು ಅಪರಾಧಿಗಳನ್ನು ಸುತ್ತುವರೆದು ಅವರನ್ನು ಬಂಧಿಸಲಿದೆ.

ಇದನ್ನು ಓದಿ- Porn Video Shoot ಆರೋಪದ ಮೇಲೆ 'ಗಂಧಿ ಬಾತ್' ನಟಿ ಗಹನಾ ವಸಿಷ್ಠ ಬಂಧನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News