ರಾಜಸ್ಥಾನ : ಪ್ರೀತಿಗಾಗಿ ಏನೆಲ್ಲಾ ಕೆಲಸಗಳನ್ನು ಮಾಡಿದವರು ನಮ್ಮ ನಡುವೆ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ತಾವು ಪ್ರೀತಿಸುವವರು ಕಂಡ ಕನಸನ್ನು ಹೇಗಾದರೂ ಮಾಡಿ ಈಡೇರಿಸಲೇ ಬೇಕು ಎಂದು  ಸರ್ವ ಪ್ರಯತ್ನಗಳನ್ನು ಮಾಡುವವರನ್ನೂ ನಾವು ನೋಡಿದ್ದೇವೆ. ಇಲ್ಲೊಬ್ಬ ಮಹಾಶಯ ಮಾಡಿರುವ ಕೆಲಸ ಕೂಡಾ ಅದೇ . ತನ್ನ ಭಾವೀ ಪತ್ನಿ ತಾನು ಗಂಡನ ಮನೆಗೆ ಹೀಗೇ ಹೋಗಬೇಕೆಂದು ಕನಸು ಕಂಡಿರುವುದಾಗಿ ವರನಲ್ಲಿ ಹೇಳಿಕೊಂಡಿದ್ದಾಳೆ. ತನ್ನ ಬಾವಿ ಪತ್ನಿಯ ಆಸೆಯನ್ನು ಈಡೇರಿಸಲೇ ಬೇಕು ಎಂದು ವರ ,ಮಹಾಶಯ ಪ್ರತಿಜ್ಞೆ ಮಾಡಿಯೇ ಬಿಟ್ಟ. 


COMMERCIAL BREAK
SCROLL TO CONTINUE READING

ಈ ಘಟನೆ ನಡೆದದ್ದು ರಾಜಸ್ಥಾನದ (Rajastan) ಭರತ್ ಪುರದಲ್ಲಿ. ಇಲ್ಲಿಯ ರೈತನ ಪುತ್ರ  ಸಿಯಾರಾಮ್ ಗುರ್ಜರ್ ವಿವಾಹ ಅದೇ ಗ್ರಾಮದ ರಮಾ ಜೊತೆ ವಿವಾಹ ನಿಶ್ಚಯವಾಗಿತ್ತು.  ರಮಾ ತನ್ನ ಮನದ ಸೆಯ ಬಗ್ಗೆ ಸಿಯಾರಾಮ್ ಗುರ್ಜರ್ ಬಳಿ  ಹೇಳಿಕೊಂಡಿದ್ದಾಳೆ. ಇಷ್ಟಕ್ಕೂ ರಮಾ ಆಸೆ ಏನಂದರೆ ತಾನು ಮದುವೆಯಾಗಿ ಗಂಡನ ಮನೆಗೆ ಹೆಲಿಕ್ಯಾಪ್ಟರ್ ನಲ್ಲಿ (helicopter) ಬರಬೇಕು ಎನ್ನುವುದು. ತನ್ನ ಬಾವಿ ಪತ್ನಿ ಮನಸ್ಸಿನ ಆಸೆಯ ಬಗ್ಗೆ ಹೇಳಿಕೊಂಡಾಗ ಸಿಯಾರಾಮ್ ಈ ಆಸೆ ಈಡೇರಿಸುವುದಾಹಗಿ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾನೆ. ಏನೆ ಆದರೂ ರಮಾನನ್ನು ಹೆಲಿಕ್ಯಾಪ್ಟರ್ ಮೂಲಕವೇ ತನ್ನ ಮನೆಗೆ ಕರೆದೊಯ್ಯುವ ನಿರ್ಧಾರ ಮಾಡಿಯೇ ಬಿಡುತ್ತಾನೆ .


ಇದನ್ನೂ ಓದಿ : 35 ಗರ್ಲ್ ಫ್ರೆಂಡ್ಸ್ ಗಳ ಜೊತೆ ಆಟವಾಡುತ್ತಿದ್ದ ಭೂಪ, ಒಂದೇ ತಪ್ಪಿನಿಂದ ಹೀಗೆ ಸಿಕ್ಕಿ ಬಿದ್ದ..!


ಸಿಯಾರಾಮ್ ಹೇಳಿ ಕೆಳಿ ರೈತನ ಮಗ. ಹೆಲಿಕ್ಯಾಪ್ಟರ್ ಹೊಂದಿರುವಷ್ಟು ಸಿರಿವಂತನೇನಲ್ಲ. ಆದರೆ ತನ್ನ ಮನದನ್ನೇಯ ಆಸೆ ಈಡೇರಿಸುವ ಸಲುವಾಗಿ ಬರೋಬ್ಬರಿ 7 ಲಕ್ಷ ರೂಪಾಯಿ ಬಾಡಿಗೆ ಪಾವತಿಸಿ ಒಂದು ದಿನದ ಮಟ್ಟಿಗೆ ಹೆಲಿಕ್ಯಾಪ್ಟರ್ ತರುತ್ತಾನೆ. ರಮಾ ಆಸೆಯಂತೆ ಮದುವೆಯ (Marraige) ಬಳಿಕ ಹೆಲಿಕ್ಯಾಪ್ಟರ್  ಮೂಲಕವೇ ತನ್ನ ಗ್ರಾಮಕ್ಕೆ ಕರೆದುಕೊಂಡು ಬರುತ್ತಾನೆ. ಪತಿ ತನ್ನ ಆಸೆ ಈಡೇರಿಸಿರುವ ಬಗ್ಗೆ ಪತ್ನಿ ರಮಾಗೂ ಅತೀವ ಸಂತೋಷ ಜೊತೆಗೆ ಪತಿಯ ಬಗ್ಗೆ ಹೆಮ್ಮೆ. 


ಕೋವಿಡ್ (COVID-19) ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಮೊದಲಿಗೆ ಜಿಲ್ಲಾಧಿಕಾರಿ ಸಿಯಾರಾಮ್ ಸಲ್ಲಿಸಿದ್ದ ಬಾಡಿಗೆ ಹೆಲಿಕ್ಯಾಪ್ಟರ್ ಅರ್ಜಿಯನ್ನು ತಿರಸ್ಕರಿಸಿದ್ದರು. ಪುಟ್ಟ ಗ್ರಾಮಕ್ಕೆ ಹೆಲಿಕ್ಯಾಪ್ಟರ್ ಬಂದರೆ ಹೆಲಿಕ್ಯಾಪ್ಟರ್ ನೋಡಲೆಂದೇ ಜನ ಸೇರಿ ಬಿಡುತ್ತಾರೆ ಎಂಬ ಭಯ ಜಿಲ್ಲಾಡಳಿತದ್ದಾಗಿತ್ತು. ನಂತರ ಯಾವುದೇ ಕಾರಣಕ್ಕೂ ಕೋವಿಡ್ ನಿಯಮ (COVID Guidelines) ಉಲ್ಲಂಘಿಸುವುದಿಲ್ಲ ಎಂದು ಸಿಯಾರಾಮ್ ಮನದಟ್ಟು ಮಾಡಿದ ಬಳಿಕ ಅನುಮತಿ ನೀಡಲಾಗಿದೆ. 


ಇದನ್ನೂ ಓದಿ : ಹದಿನೈದು ವರ್ಷ ಕೆಲಸಕ್ಕೆ ಚಕ್ಕರ್, ಆದರೂ ತಿಂಗಳ ಕೊನೆಗೆ ಬರುತ್ತಿತ್ತು ಸ್ಯಾಲರಿ


ಅಂತೂ ಇಂತೂ ಸಿಯಾರಾಮನ ಮನದನ್ನೆ ರಮಾ ಹೆಲಿಕ್ಯಾಪ್ಟರ್ ನಲ್ಲಿ ಕೂತು ತನ್ನ ಗಂಡನ ಮನೆಗೆ ಬರುವ ಕನಸು ಈಡೇರಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.