ಜಪಾನ್ : ಈ ಘಟನೆ ನಡೆದಿರುವುದು ಜಪಾನ್ ನಲ್ಲಿ (Japan). ಈತನಿಗೆ 39 ವರ್ಷ. ಪಾರ್ಟ್ ಟೈಂ ಕೆಲಸ ಮಾಡುತ್ತಾ ದಿನ ಕಳೆಯುತ್ತಾನೆ. ಆದರೆ ಈತ ಮಾಡಿರುವ ಕೆಲಸ ನೋಡಿದರೆ ಎಂಥವರು ಹುಬ್ಬೇರಿಸಬೇಕು. ಈತನಿಗೆ ಇದ್ದದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 35 ಗರ್ಲ್ ಫ್ರೆಂಡ್ಸ್ (Girl friends). ಒಂದೇ ಸಮಯದಲ್ಲಿ 35 ಗರ್ಲ್ ಫ್ರೆಂಡ್ಸ್ ಅನ್ನು ಪಟಾಯಿಸಿ ಅಷ್ಟು ಹುಡುಗಿಯರಿಗೂ ಮೋಸ ಮಾಡುತ್ತಿದ್ದ. ಈತ ಹುಡುಗಿಯರೊಂದಿಗೆ ಬಹಳ ಕಾಲದಿಂದ ಸಂಬಂಧ ಇರಿಸಿಕೊಂಡಿದ್ದ. ಈತನ ಕೃತ್ಯದ ಬಗ್ಗೆ ಯಾರೊಬ್ಬರಿಗೂ ಒಂಚೂರು ಸಂದೇಹ ಬಾರದಂತೆ ಎಲ್ಲವನ್ನೂ ನಿಬಾಯಿಸಿಕೊಂಡು ಬಂದಿದ್ದ..
ಈತ ಇಷ್ಟೊಂದು ಗರ್ಲ್ ಫ್ರೆಂಡ್ಸ್ (Girl friends) ಅನ್ನು ಹೊಂದಿರುವ ಹಿಂದಿನ ಕಾರಣ ಕೇಳಿದರೆ ಆಶ್ಚರ್ಯವಾಗುತ್ತದೆ. ಈತನ ಹುಟ್ಟುಹಬ್ಬದ ದಿನದಂದು ಈತನ ಗೆಳತಿ ಇವನಿಗೆ ಉಡುಗೊರೆಯೊಂದನ್ನು (Gift) ನೀಡಿದ್ದಳಂತೆ. ಈ ಉಡುಗೊರೆ ಇವನಿಗೆ ಎಷ್ಟು ಇಷ್ಟವಾಯಿತೆಂದರೆ, ಈತನ ಮನಸ್ಸಿನಲ್ಲಿ ವಿಚಿತ್ರ ಯೋಚನೆ ಮೂಡಿತಂತೆ. ಅದೇನೆಂದರೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಗರ್ಲ್ ಫ್ರೆಂಡ್ಸ್ ಗಳನ್ನು ಮಾಡಿಕೊಳ್ಳುವುದು. ಮತ್ತು ಅವರಿಗೆ ಬೇರೆ ಬೇರೆ ಹುಟ್ಟಿದ ದಿನಾಂಕಗಳನ್ನು (Birthday) ಹೇಳಿಕೊಂಡು ಎಲ್ಲರಿಂದಲೂ ಉಡುಗೊರೆ ಪಡೆದುಕೊಳ್ಳುವುದು. ಈ ಯೋಚನೆ ಬಂದಿದ್ದೇ ತಡ, ಭೂಪ ತನ್ನ ಯೋಚನೆಯನ್ನು ಕಾರ್ಯಗತಗೊಳಿಸಿಯೇ ಬಿಟ್ಟಿದ್ದಾನೆ.. ಹೀಗೆ ಉಡುಗೊರೆಯ ಆಸೆಗಾಗಿ 35 ಗರ್ಲ್ ಫ್ರೆಂಡ್ಸ್ ಮಾಡಿಕೊಂಡಿದ್ದ..
ಇದನ್ನೂ ಓದಿ : Corona Second Wave: ಕೋವಿಡ್ ನಿರ್ವಹಣೆಗೆ Googleನಿಂದ 135 ಕೋಟಿ ರೂ. ನೆರವು
ಎಲ್ಲವೂ ಇವ ಅಂದುಕೊಂಡಿದ್ದಂತೆ ನಡೆಯುತ್ತಿತ್ತು. ಆದರೆ ಯಾವಾಗ ಈತ 36ನೇ ಗೆಳತಿಯ ಹುಡುಕಾಟ ಆರಂಭಿಸಿದನೋ ಈತನ ಗೆಳತಿಯರಲ್ಲಿ ಒಬ್ಬಳಿಗೆ ಸಂದೇಹ ಶುರುವಾಯಿತು. ಆ ಹುಡುಗಿ ಇವನ ವಿರುದ್ಧ ಪೊಲೀಸರಿಗೆ (Police) ದೂರು ನೀಡುತ್ತಾಳೆ. ಈ ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಈತನ 35 ಗರ್ಲ್ ಫ್ರೆಂಡ್ ಗಳ ಬಗ್ಗೆ ವಿಷಯ ತಿಳಿದಿದೆ. ಕೊನೆಗೂ ಈತನ ಅತಿಯಾಸೆಯ ಕಾರಣದಿಂದ ಕಂಬಿ ಎಣಿಸುವಂತಾಗಿದೆ.
ಇದನ್ನೂ ಓದಿ : Covid-19 Crisis: ಭಾರತದ ನೆರವಿಗೆ ಧಾವಿಸಿದ ಯುರೋಪಿಯನ್ ಒಕ್ಕೂಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.