ಹದಿನೈದು ವರ್ಷ ಕೆಲಸಕ್ಕೆ ಚಕ್ಕರ್, ಆದರೂ ತಿಂಗಳ ಕೊನೆಗೆ ಬರುತ್ತಿತ್ತು ಸ್ಯಾಲರಿ

 ಈ ವಂಚನೆ ಪ್ರಕರಣ ಬಹಿರಂಗವಾದ ಮೇಲೆ ಇಟಾಲಿಯನ್  ಅಧಿಕಾರಿಗಳು ಶಾಕ್ ನಲ್ಲಿದ್ದಾರೆ. 66 ವರ್ಷದ ಈ ನೌಕರನ ಮೇಲೆ ಈಗ ವಂಚನೆ, ಸುಲಿಗೆ ಮತ್ತು ಕಚೇರಿಯ ದುರುಪಯೋಗ ಮುಂತಾದ ಆರೋಪ ಹೊರಿಸಲಾಗಿದೆ.

Written by - Ranjitha R K | Last Updated : Apr 23, 2021, 09:07 AM IST
  • ಬಯಲಾಯಿತು ರೋಮ್ ನಲ್ಲೊಂದು ವಿಚಿತ್ರ ವಂಚನೆ ಪ್ರಕರಣ
  • 15 ವರ್ಷ ಕೆಲಸಕ್ಕೆ ಬರಲೇ ಇಲ್ಲ ಆ ಮಹಾಶಯ
  • ಆದರೂ ತಿಂಗಳ ಕೊನೆಗೆ ಎಣಿಸುತ್ತಿದ್ದ ಕೈತುಂಬಾ ಸಂಬಳ
ಹದಿನೈದು ವರ್ಷ ಕೆಲಸಕ್ಕೆ ಚಕ್ಕರ್, ಆದರೂ ತಿಂಗಳ ಕೊನೆಗೆ ಬರುತ್ತಿತ್ತು ಸ್ಯಾಲರಿ title=
ಬಯಲಾಯಿತು ರೋಮ್ ನಲ್ಲೊಂದು ವಿಚಿತ್ರ ವಂಚನೆ ಪ್ರಕರಣ (File photo Getty images)

ರೋಮ್ : ಇಟಲಿಯ ರೋಮ್ ನಲ್ಲಿ (Rome) ವಿಚಿತ್ರ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ.  ಇಲ್ಲಿ, ಆಸ್ಪತ್ರೆಯ ಸಿಬ್ಬಂದಿಯೊಬ್ಬ ಬರೋಬ್ಬರಿ 15 ವರ್ಷ ಕೆಲಸಕ್ಕೆ ಗೈರುಹಾಜರಾಗಿದ್ದ. 2005ರಲ್ಲಿ ಆತ ಕೆಲಸಕ್ಕೆ ಬರುವುದನ್ನೇ ನಿಲ್ಲಿಸಿಬಿಟ್ಟ. ವಿಚಿತ್ರ ಅಂದರೆ, ಈ 15 ವರ್ಷಗಳಲ್ಲೂ ಆತನಿಗೆ ಸರಿಯಾದ ಸಮಯಕ್ಕೆ ಸಂಬಳ (Salary) ಪಾವತಿ ಆಗುತ್ತಿತ್ತು. ಈ 15 ವರ್ಷಗಳ ಅವಧಿಯಲ್ಲಿ ಈ ಮಹಾಶಯ ಬರೊಬ್ಬರಿ 4.8 ಕೋಟಿ ರೂಪಾಯಿ ಸಂಬಳ ಪೀಕಿ ಬಿಟ್ಟಿದ್ದಾನೆ. ಅದು ಕೂಡಾ ಏನೂ ಒಂದು ಕೆಲಸವನ್ನೂ ಮಾಡದೆ.  

ಆಸ್ಪತ್ರೆಯ ವ್ಯವಸ್ಥಾಪಕರ ಮೇಲೆ ಅನುಮಾನ :
ಬಿಬಿಸಿ ವರದಿಯ ಪ್ರಕಾರ, ಈ ವಂಚನೆ ಪ್ರಕರಣ ಬಹಿರಂಗವಾದ ಮೇಲೆ ಇಟಾಲಿಯನ್ (Italy) ಅಧಿಕಾರಿಗಳು ಶಾಕ್ ನಲ್ಲಿದ್ದಾರೆ. 66 ವರ್ಷದ ಈ ನೌಕರನ ಮೇಲೆ ಈಗ ವಂಚನೆ, ಸುಲಿಗೆ ಮತ್ತು ಕಚೇರಿಯ ದುರುಪಯೋಗ ಮುಂತಾದ ಆರೋಪ ಹೊರಿಸಲಾಗಿದೆ. ಇವೆಲ್ಲಾ ಪ್ರಕರಣದ ನಡೆದಿದ್ದು, ಇಟೆಲಿಯ ಕ್ಯಾಟಂಜಾರೊ ನಗರದ ಸಿಯಾಸಿಯೊ ಆಸ್ಪತ್ರೆಯಲ್ಲಿ(Hospital). ಅಧಿಕಾರಿಗಳಿಗೆ  ಆಸ್ಪತ್ರೆಯ ಆರು ವ್ಯವಸ್ಥಾಪಕರ ವಿರುದ್ಧವೂ  ಅನುಮಾನ ಬಂದಿದೆ. ಅವರ ವಿರುದ್ಧವೂ ತನಿಖೆ (Investigation)ನಡೆಯುತ್ತಿದೆ. 

ಇದನ್ನೂ ಓದಿ : ಅತ್ತೆ ಬಟ್ಟೆ ಮೇಲೆ ಬಿತ್ತು ಊಟ.! ಸೊಸೆ ಪರಮಾನಂದ, ವೇಟರ್ ಸಿಕ್ಕಿದ ಬಹುಮಾನವೇನು ಗೊತ್ತಾ.?

ವಂಚನೆ ಬಯಲಾಗಿದ್ದು ಹೇಗೆ.?
ಪೊಲೀಸರು (Police) ವಂಚನೆಯ ಇನ್ನೊಂದು ಪ್ರಕರಣದ ತನಿಖೆ ನಡೆಸುತ್ತಿದ್ದಾಗ  ಈ ಪ್ರಕರಣ ಬಯಲಾಗಿದೆ.  ಇಟೆಲಿಯಲ್ಲಿ ಇಂಥಾ ಚೀಟಿಂಗ್ (Cheating) ಪ್ರಕರಣಗಳು ಸಾಮಾನ್ಯವಂತೆ.  ಆಸ್ಪತ್ರೆಯ ಉದ್ಯೋಗಿ ಸತತ ಗೈರು ಹಾಜರಾಗಿದ್ದರೂ, ಮಾನವ ಸಂಪನ್ಮೂಲ ಇಲಾಖೆ (Human resource department)ಯಾವುದೇ ಕ್ರಮ ಕೈಗೊಂಡಿರಲಿಲ್ಲ.  ಅಷ್ಟೇ ಅಲ್ಲ, ಆತನ ಸಂಬಳ ಕ್ರಮಬದ್ದ ವಾಗಿ ಆತನಿಗೆ ಸೇರುತ್ತಿತ್ತು. ಈ ಪ್ರಕರಣದಲ್ಲಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳ ಕೈವಾಡವಿರಬಹುದೆಂಬ ಅನುಮಾನ ಪೊಲೀಸರಲ್ಲಿ ದಟ್ಟವಾಗಿದೆ. ಹಾಗಾಗಿ, ತನಿಖೆ ಆ ಹಾದಿಯಲ್ಲೂ ನಡೆದಿದೆ. 

ಇದನ್ನೂ ಓದಿ : ಭಾರತದಿಂದ ಕೊರೊನಾ ಅಪಾಯ ತಪ್ಪಿಸಲು ವಿಮಾನ ಸೇವೆ ಕಡಿತಗೊಳಿಸಿದ ಈ ದೇಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News