Gujarat Election Result 2022 : ಗುಜರಾತ್‌ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. 33 ಜಿಲ್ಲೆಗಳ 182 ವಿಧಾನಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಇಂದು ಬಹು ನಿರೀಕ್ಷಿತ ಫಲಿತಾಂಶ ಹೊರಬೀಳಲಿದ್ದು, ಪ್ರತಿನಿಧಿಗಳ ಭವಿಷ್ಯ ಬಯಲಾಗಲಿದೆ. ಈಗಾಗಲೇ 5 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ ಬಿಜೆಪಿ 4 ಸ್ಥಾನಗಳಲ್ಲಿ ಜಯ ಸಾಧಿಸಿದ್ದರೆ, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಜಯಭೇರಿ ಬಾರಿಸಿದೆ. 


COMMERCIAL BREAK
SCROLL TO CONTINUE READING

ಹೌದು.. ಬಿಜೆಪಿ ಭದ್ರಕೋಟೆಯಾಗಿರುವ ಗುಜರಾತ್‌ನಲ್ಲಿ ಈ ಬಾರಿಯೂ ಕಮಲ ಅರಳಿದೆ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೆ, ಅದರಂತೆ ಮತ ಎಣಿಕೆಯ ಆರಂಭದಲ್ಲಿಯೇ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ. ಇದರ ಬೆನ್ನಲ್ಲೆ ಟ್ಟಿಟರ್‌ನಲ್ಲಿ ʼಇವಿಎಮ್‌ ಬ್ಯಾನ್‌ʼ ಎಂಬ ಮಾತುಗಳು ಕೇಳಿಬರುತ್ತಿವೆ. ಗುಜರಾತ್‌ನಲ್ಲಿಯೂ ಇವಿಎಮ್‌ ಪ್ರಭಾವದಿಂದ ಬಿಜೆಪಿ ಗೆಲ್ಲಲಿದೆ ಎಂದು ನಟ್ಟಿಗರು ಟ್ಟೀಟ್‌ ಮಾಡುವ ಮೂಲಕ ದೂರುತ್ತಿದ್ದಾರೆ.́


ಇದನ್ನೂ ಓದಿ: Video: ಹೌದೋ ಹುಲಿಯಾ! ಕಿಕ್ಕಿರಿದ ಬಸ್‌ ಅನ್ನು ಈ ಹುಡುಗಿ ಹತ್ತಿದ ರೀತಿ ಕಂಡು ಬೆಚ್ಚಿಬಿದ್ದ ಜನ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.