Video: ಹೌದೋ ಹುಲಿಯಾ! ಕಿಕ್ಕಿರಿದ ಬಸ್‌ ಅನ್ನು ಈ ಹುಡುಗಿ ಹತ್ತಿದ ರೀತಿ ಕಂಡು ಬೆಚ್ಚಿಬಿದ್ದ ಜನ!

Viral Video: ಕೆಲವು ವಿಡಿಯೋಗಳು ನಿಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಹೀಗೂ ಮಾಡಬಹುದಾ ಎಂದು ಅಚ್ಚರಿ ಮೂಡಿಸುವಂತಹ ವಿಡಿಯೋವೊಂದು ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ಹುಡುಗಿ ನೋಡ ನೋಡುತ್ತಲೇ ಜಿಗಿದು ಕಿಟಕಿಗೆ ಅಳವಡಿಸಿದ್ದ ಕಬ್ಬಿಣದ ಕಂಬಿ ಹಿಡಿದು ಬಸ್‌ ಅನ್ನು ಹತ್ತುತ್ತಾಳೆ.

Written by - Chetana Devarmani | Last Updated : Dec 8, 2022, 11:32 AM IST
  • ಕಿಕ್ಕಿರಿದ ಬಸ್ಸಿನಲ್ಲೂ ಹತ್ತಿದ ಹುಡುಗಿ
  • ಬಸ್‌ ಅನ್ನು ಹತ್ತಿದ ರೀತಿ ಕಂಡು ಬೆಚ್ಚಿಬಿದ್ದ ಜನ!
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Video: ಹೌದೋ ಹುಲಿಯಾ! ಕಿಕ್ಕಿರಿದ ಬಸ್‌ ಅನ್ನು ಈ ಹುಡುಗಿ ಹತ್ತಿದ ರೀತಿ ಕಂಡು ಬೆಚ್ಚಿಬಿದ್ದ ಜನ! title=
ಕಿಕ್ಕಿರಿದ ಬಸ್ ಹತ್ತಿದ ಹುಡುಗಿ

Viral Video: ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಡಿಯೋಗಲು ವೈರಲ್‌ ಆಗುತ್ತವೆ. ಅದರಲ್ಲೂ ಕೆಲವಂತೂ ನಮ್ಮ ಕಣ್ಣನ್ನೇ ನಂಬಲು ಅಸಾಧ್ಯ ಎನ್ನುವಂತಿರುತ್ತವೆ. ಬೈಕ್‌ ಸ್ಟಂಟ್‌, ಹಾವು, ಪ್ರಾಣಿಗಳ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ನಿಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಹೀಗೂ ಮಾಡಬಹುದಾ ಎಂದು ಅಚ್ಚರಿ ಮೂಡಿಸುವಂತಹ ವಿಡಿಯೋವೊಂದು ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಬಸ್ಸಿನಲ್ಲಿ ಹತ್ತಲು ಜಾಗ ಸಿಗದಿದ್ದಾಗ ಈ ಹುಡುಗಿ ಪ್ರಯೋಗಿಸಿದ ಅಸ್ತ್ರ ಕಂಡು ನೆಟ್ಟಿಗರು ದಂಗಾಗಿದ್ದಾರೆ.  

ಇದನ್ನೂ ಓದಿ :  Viral Video : ಅಡುಗೆ ಮನೆಯ ಸಿಲೆಂಡರ್‌ ಬಳಿಯಿತ್ತು ದೈತ್ಯ ಕಾಳಿಂಗ ಸರ್ಪ!

ಈ ವೈರಲ್ ವಿಡಿಯೋದಲ್ಲಿ, ಅನೇಕ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ ಬಸ್ ಅಲ್ಲಿಗೆ ಬರುತ್ತದೆ ಮತ್ತು ಎಲ್ಲರೂ ಅದನ್ನು ಹತ್ತಲು ಪ್ರಾರಂಭಿಸುತ್ತಾರೆ. ಬಸ್ ಈಗಾಗಲೇ ತುಂಬಿದೆ. ಕಿಕ್ಕಿರಿದು ಜನ ನಿಂತಿದ್ದಾರೆ. ಕೆಲವರಂತೂ ಬಸ್‌ ಬಾಗಿಲಿಗೆ ಜೋತು ಬಿದ್ದಿದ್ದಾರೆ. ಆದರೆ ಎಲ್ಲರ ಗಮನ ಸೆಳೆದಿದ್ದು ಒಬ್ಬ ಹುಡುಗಿ. ಜನಜಂಗುಳಿಯಿಂದ ಬಸ್ ಹತ್ತಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ಹುಡುಗಿ ನೋಡ ನೋಡುತ್ತಲೇ ಜಿಗಿದು ಕಿಟಕಿಗೆ ಅಳವಡಿಸಿದ್ದ ಕಬ್ಬಿಣದ ಕಂಬಿ ಹಿಡಿದು ಬಸ್‌ ಅನ್ನು ಹತ್ತುತ್ತಾಳೆ.

 

 
 
 
 

 
 
 
 
 
 
 
 
 
 
 

A post shared by memes comedy (@ghantaa)

 

ಈಕೆ ಬಸ್‌ ಹತ್ತಲು ಮಾಡಿದ ಈ ಅಪಾಯಕಾರಿ ಸಾಹಸದ ದೃಶ್ಯವನ್ನು ಕಂಡು ಸ್ಥಳದಲ್ಲಿದ್ದವರಿಗೆ ತಮ್ಮ ಕಣ್ಣುಗಳನ್ನು ನಂಬಲಾಗಲಿಲ್ಲ. ಹುಡುಗಿಯ ಈ ವಿಡಿಯೋವನ್ನು ಘಂಟಾ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ನೆಟಿಜನ್‌ಗಳು ಕೂಡ ವಿಡಿಯೋಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ :  Viral Video : ಹಾವಿನ ಜೊತೆ ಹುಚ್ಚಾಟ ತಲೆಕೆಟ್ಟು ಸರ್ಪ ಕಚ್ಚಿದ್ದೆಲ್ಲಿ ನೋಡಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News