ಈ ರಾಜ್ಯದಲ್ಲಿ ಮಾಸ್ಕ್ ಧರಿಸದೇ ಮನೆಯಿಂದ ಹೊರಬಂದರೆ ಬೀಳುತ್ತೆ ಭಾರೀ ದಂಡ
ಗುಜರಾತ್‌ನಲ್ಲಿ ಈಗ ಮಾಸ್ಕ್‌ಗಳಿಲ್ಲದೆ ಮನೆಯಿಂದ ಹೊರಬಂದು ಅಲ್ಲಿ-ಇಲ್ಲಿ ಪಾನ್ ಮಸಾಲಾ ಉಗುಳುವವರಿಗೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ.
ಸೂರತ್: ದೇಶದ ಇತರ ರಾಜ್ಯಗಳಂತೆ ಗುಜರಾತ್‌ನಲ್ಲಿಯೂ ಕೊರೊನಾವೈರಸ್ (Coronavirus) ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸೋಂಕಿನ ಅಪಾಯವನ್ನು ತಪ್ಪಿಸಲು ಜನರಿಗೆ ಎಚ್ಚರದಿಂದಿರುವಂತೆ ಸೂಚಿಸಲಾಗುತ್ತಿದೆ. ಜೊತೆಗೆ ವಿವಿಧ ಸೂಚನೆಗಳನ್ನು ಅನುಸರಿಸಲು ಕೇಳಲಾಗುತ್ತಿದೆ, ಇದರಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಇದರ ಹೊರತಾಗಿಯೂ ಹೆಚ್ಚಿನ ಜನರು ಮಾಸ್ಕ್ ಧರಿಸದೆ ತಮ್ಮ ಮನೆಗಳಿಂದ ಹೊರಗೆ ಹೋಗುತ್ತಾರೆ, ಆದ್ದರಿಂದ ಮಾಸ್ಕ್ (Mask) ಧರಿಸದವರಲ್ಲಿ ಜಾಗೃತಿ ಮೂಡಿಸಲು ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ.
ಈಗ ಮಾಸ್ಕ್‌ಗಳಿಲ್ಲದೆ ಮನೆಯಿಂದ ಹೊರಬರುವವರು ಹಾಗೂ ಅಲ್ಲಿ-ಇಲ್ಲಿ ಪಾನ್ ಮಸಾಲಾ ಉಗುಳುವವರಿಗೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ಹೌದು ಮಾಸ್ಕ್‌ಗಳನ್ನು ಧರಿಸದೇ ರಸ್ತೆಯಲ್ಲಿ ಕಾಣಿಸಿಕೊಳ್ಳುವವರು ಹಾಗೂ ಉಗುಳುವವರಿಗೆ 500 ರೂಪಾಯಿಗಳ ದಂಡ ವಿಧಿಸಲಾಗುತ್ತದೆ. ಈ ಮೊದಲು ಈ ದಂಡ 200 ರೂಪಾಯಿ ಆಗಿತ್ತು. ಗುಜರಾತ್ ಹೈಕೋರ್ಟ್ ಆದೇಶದ ನಂತರ ರಾಜ್ಯ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಭಾರತದಲ್ಲಿ ತಯಾರಾಗುತ್ತಿರುವ ಕರೋನಾ ಲಸಿಕೆ ಬಗ್ಗೆ ಇಲ್ಲಿದೆ ಗುಡ್ ನ್ಯೂಸ್
ಇದರೊಂದಿಗೆ ಮಾಸ್ಕ್ ಎಲ್ಲರಿಗೂ ಲಭ್ಯವಿರುತ್ತದೆ, ಅಮುಲ್ ಹಾಲಿನ ಕೌಂಟರ್‌ನಲ್ಲಿಯೂ 2 ರೂಪಾಯಿಗೆ ಮಾಸ್ಕ್ ಲಭ್ಯವಿರುತ್ತದೆ.
ಗುಜರಾತ್‌ನಲ್ಲಿ (Gujarat) ಕರೋನಾ ಸೋಂಕಿನ ಹೊಸ ಪ್ರಕರಣಗಳು ನಿರಂತರವಾಗಿ ಹೊರಬರುತ್ತಿವೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು ಕರೋನಾ ಪ್ರಕರಣಗಳು 55,822 ಆಗಿದ್ದು 2,326 ಜನರು ಸಾವನ್ನಪ್ಪಿದ್ದಾರೆ.
ಮೋದಿ ಸರ್ಕಾರದ ದೊಡ್ಡ ಗಿಫ್ಟ್: ನಿವೃತ್ತಿ ಹೊಂದುವ ನೌಕರರ ಚಿಂತೆಯಾಗಲಿದೆ ದೂರ
ಈ ಹಿಂದೆ ಜಾರ್ಖಂಡ್ ಸರ್ಕಾರ ಕರೋನಾವೈರಸ್ ಬಗ್ಗೆ ಮಾಡಿದ ನಿಯಮಗಳನ್ನು ನಿರ್ಲಕ್ಷಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದೆ. ನಿಯಮಗಳನ್ನು ನಿರ್ಲಕ್ಷಿಸಿ ಮಾಸ್ಕ್ ಧರಿಸದವರಿಗೆ ಒಂದು ಲಕ್ಷ ರೂಪಾಯಿ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂದು ಸರ್ಕಾರ ಹೇಳಿದೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಸರ್ಕಾರ ಈ ಸುಗ್ರೀವಾಜ್ಞೆಯನ್ನು ಅಂಗೀಕರಿಸಿತು.
ಜಾರ್ಖಂಡ್ ಕ್ಯಾಬಿನೆಟ್ ಗುರುವಾರ 'ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ 2020' ಅನ್ನು ಅಂಗೀಕರಿಸಿತು. ಇದರಲ್ಲಿ ರಾಜ್ಯದೊಳಗಿನ ಭದ್ರತಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಮಾಸ್ಕ್‌ಗಳನ್ನು ಧರಿಸದಿದ್ದರೆ ಒಂದು ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.