ನವದೆಹಲಿ: ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಮಧ್ಯೆ ಬೈಸಿಕಲ್ ತಯಾರಕ ಹೀರೋ ಸೈಕಲ್ ಸಹ ಚೀನಾದ ಕಂಪನಿಗಳೊಂದಿನ 900 ಕೋಟಿ ರೂ.ಗಳ ವ್ಯವಹಾರವನ್ನು ರದ್ದುಗೊಳಿಸಿದೆ. ಈ ಹಿಂದೆ ಕರೋನಾವನ್ನು ಎದುರಿಸಲು ಹೀರೋ ಸೈಕಲ್ 100 ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ನೀಡಿತ್ತು.


COMMERCIAL BREAK
SCROLL TO CONTINUE READING

ಲುಧಿಯಾನದಲ್ಲಿ ಅನೇಕ ದೊಡ್ಡ ಕಂಪನಿಗಳಿವೆ, ಅದರಲ್ಲಿ ಹೀರೋ ಸೈಕಲ್ಸ್ ಕೂಡ ಪ್ರಮುಖವಾಗಿದೆ. ಕರೋನಾವೈರಸ್‌ನಿಂದಾಗಿ ಪ್ರಪಂಚದಾದ್ಯಂತದ ಕಂಪನಿಗಳು ತಮ್ಮ ವ್ಯವಹಾರವನ್ನು ಉಳಿಸಲು ಪ್ರಯತ್ನಿಸುತ್ತಿದ್ದಾಗ, ಹೀರೋ ಸೈಕಲ್ ಸಹ ಆ ಸಮಯದಲ್ಲಿ ಮುಂದೆ ಸಾಗುತ್ತಿತ್ತು. ಚೀನಾವನ್ನು ಬಹಿಷ್ಕರಿಸುವ (Boycott China) ಸಲುವಾಗಿ ಹೀರೋ ಸೈಕಲ್ ಮುಂಬರುವ 3 ತಿಂಗಳಲ್ಲಿ ಚೀನಾದೊಂದಿಗೆ 900 ಕೋಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು ಇದೀಗ ಅದನ್ನು ರದ್ದುಪಡಿಸಲಾಗಿದೆ. ಲುಧಿಯಾನದಲ್ಲಿ ಅನೇಕ ಸಣ್ಣ ಕಂಪನಿಗಳು ಬೈಸಿಕಲ್ ಭಾಗಗಳನ್ನು ತಯಾರಿಸುತ್ತಿವೆ, ಅವರ ಸಹಾಯಕ್ಕಾಗಿ ಹೀರೋ ಸೈಕಲ್ ಈಗ ಮುಂದೆ ಬಂದಿದೆ. ಹೀರೋ ಸೈಕಲ್‌ಗಳ ಕಂಪನಿಯು ಈಗ ತಮ್ಮೊಂದಿಗೆ ವಿಲೀನಗೊಳ್ಳಲು ಸಣ್ಣ ಕಂಪನಿಗಳಿಗೆ ಆಫರ್ ನೀಡುತ್ತಿದೆ.


ಟ್ರೇಡ್ ವಾರ್: ಚೀನಾದಿಂದ ಹೊರಬರಲು ಅನೇಕ ವಿದೇಶಿ ಕಂಪನಿಗಳ ಸಿದ್ಧತೆ


ನಮ್ಮ ಅಂಗಸಂಸ್ಥೆ ಚಾನೆಲ್ ಝೀ ಪಂಜಾಬ್ ಜೊತೆ ಮಾತನಾಡಿದ ಹೀರೋ ಸೈಕಲ್ಸ್ ಎಂಡಿ ಮತ್ತು ನಿರ್ದೇಶಕ ಪಂಕಜ್ ಮುಂಜಾಲ್ ಚೀನಾವನ್ನು ಬಹಿಷ್ಕರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈಗ ಕಂಪನಿಯು ಚೀನಾದೊಂದಿಗಿನ ಎಲ್ಲಾ ರೀತಿಯ ವ್ಯಾಪಾರವನ್ನು ಮುಚ್ಚಿದೆ. ಜರ್ಮನಿಯು ಮಹತ್ವದ್ದಾಗಿರುವ ವಿಶ್ವದ ಇತರ ದೇಶಗಳಲ್ಲಿ ಕಂಪನಿಯು ಈಗ ಭವಿಷ್ಯವನ್ನು ಅನ್ವೇಷಿಸುತ್ತಿದೆ ಎಂದವರು ತಿಳಿಸಿದ್ದಾರೆ.


ಜರ್ಮನಿಯಲ್ಲಿ ಒಂದು ಪ್ಲಾಂಟ್ ಪ್ರಾರಂಭಿಸುವ ನಿಟ್ಟಿನಲ್ಲಿ ಹೀರೋ:
ಹೀರೋ ಸೈಕಲ್ ಈಗ ತನ್ನ ಪ್ಲಾಂಟ್ ಅನ್ನು ಜರ್ಮನಿಯಲ್ಲಿ ಸ್ಥಾಪಿಸಲಿದೆ ಎಂದು ಮುಂಜಾಲ್ ಹೇಳಿದ್ದಾರೆ. ಈ ಸ್ಥಾವರದಿಂದ ಹೀರೋನ ಸೈಕಲ್‌ಗಳನ್ನು ಯುರೋಪಿನಾದ್ಯಂತ ಸರಬರಾಜು ಮಾಡಲಾಗುತ್ತದೆ. ಈ ಹಿಂದೆ ಬೈಸಿಕಲ್ ಬೇಡಿಕೆ ಹೆಚ್ಚಾಗಿದೆ ಮತ್ತು ಹೀರೋ ಸೈಕಲ್‌ನಿಂದ ಅದರ ಸಾಮರ್ಥ್ಯವನ್ನು ಕೂಡ ಹೆಚ್ಚಿಸಲಾಗಿದೆ ಎಂದು ಪಂಕಜ್ ಮುಂಜಾಲ್ ಹೇಳಿದ್ದಾರೆ. ಈ ಅವಧಿಯಲ್ಲಿ ಸಣ್ಣ ಕಂಪನಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದರೂ, ಹೀರೋ ಸೈಕಲ್ ಅದನ್ನು ನಿಭಾಯಿಸಲು ಸಿದ್ಧವಾಗಿದೆ. ಲುಧಿಯಾನದಲ್ಲಿ ನಿರ್ಮಿಸಲಿರುವ ಸೈಕಲ್ ಕಣಿವೆಯೊಂದಿಗೆ ಹೀರೋ ಸೈಕಲ್ಸ್ ಜಾಗತಿಕ ಲೀಡರ್ಶಿಪ್ ಪಡೆಯಬಹುದು  ಎಂದು ಅವರು ಹೇಳಿದರು.


ಇದರೊಂದಿಗೆ ದೇಶಾದ್ಯಂತ ಚೀನಾ ವಸ್ತುಗಳನ್ನು ಇದೇ ರೀತಿ ಬೈಕಾಟ್ ಮಾಡಬಹುದು. ಏಕೆಂದರೆ ಭಾರತದಲ್ಲಿ ಕಂಪ್ಯೂಟರ್‌ಗಳನ್ನು ಮಾಡಲು ಸಾಧ್ಯವಾದರೆ, ಏಕೆ ಬೈಸಿಕಲ್ ಮಾಡಬಾರದು. ಸರ್ಕಾರ ತನ್ನೊಂದಿಗಿದೆ ಮತ್ತು ಭಾರತದಲ್ಲಿ ಎಲ್ಲಾ ರೀತಿಯ ಸೈಕಲ್‌ಗಳನ್ನು ತಯಾರಿಸಲು ಸಾಧ್ಯವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.