ಭಾರತವು ಚೀನಾ ನಿರ್ಮಿತ ರಾಖಿಗಳಿಗೆ ಭಾರಿ ಹೊಡೆತ ನೀಡಿದ್ದು, ಸುಮಾರು 4,000 ಕೋಟಿ ರೂ.ಚೀನಾಗೆ ನಷ್ಟವಾಗಿದೆ ಎನ್ನಲಾಗಿದೆ.ಜೂನ್ 10 ರಂದು, ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಈ ವರ್ಷ ರಾಖಿಯನ್ನು "ಹಿಂದೂಸ್ತಾನಿ ರಾಖಿ" ಎಂದು ಆಚರಿಸಲು ಕರೆ ನೀಡಿತ್ತು, ಅದು ಯಶಸ್ವಿಯಾಯಿತು.
ಜಂಟಿ ಉದ್ಯಮಗಳು ಸೇರಿದಂತೆ ಹೆದ್ದಾರಿ ಯೋಜನೆಗಳಲ್ಲಿ ಭಾಗವಹಿಸಲು ಚೀನಾ ಕಂಪನಿಗಳಿಗೆ ಭಾರತ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಚೀನಾದೊಂದಿಗಿನ ಗಡಿ ವಿವಾದದ ಮಧ್ಯೆ ಹೇಳಿದ್ದಾರೆ.
ಪಾಟ್ನಾದ ಅಪ್ರತಿಮ ಮಹಾತ್ಮ ಗಾಂಧಿ ಸೇತುಗೆ ಸಮಾನಾಂತರವಾಗಿ ಹೊಸ ಮೆಗಾ ಸೇತುವೆ ನಿರ್ಮಾಣಕ್ಕಾಗಿ ನೀಡಲಾದ ಟೆಂಡರ್ ರದ್ದುಪಡಿಸುವುದಾಗಿ ಬಿಹಾರ ಸರ್ಕಾರ ಭಾನುವಾರ ಪ್ರಕಟಿಸಿದೆ. ಈ ಯೋಜನೆಗೆ ಆಯ್ಕೆಯಾದ ನಾಲ್ಕು ಗುತ್ತಿಗೆದಾರರಲ್ಲಿ ಇಬ್ಬರು ಚೀನಾದ ಪಾಲುದಾರರನ್ನು ಹೊಂದಿರುವುದರಿಂದ ಈ ಕ್ರಮಕ್ಕೆ ಮುಂದಾಗಿರುವುದಾಗಿ ರಸ್ತೆ ನಿರ್ಮಾಣ ರಾಜ್ಯ ಸಚಿವ ನಂದ್ ಕಿಶೋರ್ ಯಾದವ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.