ಕೋಲ್ಕತಾ: ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ (West Bengal) ಇಂದು ತಮ್ಮ ಮೊದಲ ವರ್ಚುವಲ್ ರ್ಯಾಲಿಯನ್ನು ನಡೆಸಲಿದ್ದಾರೆ. ಬಿಜೆಪಿ ಕಾರ್ಯಕರ್ತನಿಂದ ಹಿಡಿದು ಸಾರ್ವಜನಿಕರವರೆಗೆ ಈ ರ್ಯಾಲಿ ಎಲ್ಲರನ್ನೂ ತಲುಪಲಿದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಐಟಿ ಕೋಶದ ವರ್ಚಸ್ಸಿನಿಂದಾಗಿ ಈ ಸಭೆಯನ್ನು ಜನರ ಮನೆಗಳಿಗೆ ತಲುಪಲಿದೆ. ಪಶ್ಚಿಮ ಬಂಗಾಳದ ಸುಮಾರು ಒಂದು ಕೋಟಿ ಜನರು ಆನ್‌ಲೈನ್ ವಿಡಿಯೋ ಮೂಲಕ ವೀಕ್ಷಿಸಲು ಸಾಧ್ಯವಾಗುತ್ತದೆ. ಅಮಿತ್ ಶಾ (Amit Shah) ಅವರ ಸಭೆ ಪಶ್ಚಿಮ ಬಂಗಾಳದ 78000 ಬೂತ್‌ಗಳಲ್ಲಿ ಪ್ರಸಾರವಾಗಲಿದೆ. ಈ ಸಭೆಯನ್ನು ಬಿಜೆಪಿಯ ಅಧಿಕೃತ ವೆಬ್‌ಸೈಟ್ 'ಬಿಜೆಪಿ ಫಾರ್ ಬಂಗಾಳ' ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತೋರಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


ಈ ಸಭೆಯನ್ನು ಮೂರು ಭಾಗಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಮೊದಲನೆಯದಾಗಿ, ರಾಜ್ಯಾದ್ಯಂತ ಪ್ರಮುಖ ಸ್ಥಾನಗಳಲ್ಲಿ ನೇಮಕಗೊಂಡಿರುವ ಸುಮಾರು 1000 ಬಿಜೆಪಿ ಸಿಬ್ಬಂದಿ ಜೊತೆಗೆ ಆನ್‌ಲೈನ್ ಮೂಲಕ ವೀಡಿಯೊ ಕಾನ್ಫರೆನ್ಸಿಂಗ್ ಮಾಡಲಾಗುವುದು, ಇದನ್ನು ನೇರ ಪ್ರಸಾರ ಮಾಡಲಾಗುತ್ತದೆ.


ಎರಡನೆಯದಾಗಿ, ಸಭೆ ಕೋಲ್ಕತ್ತಾದಲ್ಲಿ ಪ್ರಾರಂಭವಾಗಲಿದ್ದು, ಬಿಜೆಪಿ ಅಧ್ಯಕ್ಷ ಮತ್ತು ಬಿಜೆಪಿ (BJP)ಸಂಸದ ದಿಲೀಪ್ ಘೋಷ್ ಅವರು ಮುರಳೀಧರ್ ಸೇನ್ ಲೇನ್‌ನಲ್ಲಿರುವ ಬಿಜೆಪಿಯ ರಾಜ್ಯ ಪಕ್ಷದ ಕಚೇರಿಯಿಂದ ಸಭೆಯನ್ನು ಪ್ರಾರಂಭಿಸಲಿದ್ದು, ಸಭೆಯ ಮೂಲ ಮಾಹಿತಿ ನೀಡಿದ ನಂತರ ದೆಹಲಿಯಿಂದ ನೇರ ಪ್ರಸಾರವಾಗಲಿದೆ. ಗೃಹ ಸಚಿವ ಅಮಿತ್ ಶಾ ದೆಹಲಿಯಿಂದ ಈ ಭಾಷಣ ಮಾಡಲಿದ್ದಾರೆ.


ಮೂರನೆಯದಾಗಿ, ಕೊನೆಯಲ್ಲಿ 1000 ಬಿಜೆಪಿ ಕಾರ್ಯಕರ್ತರಲ್ಲಿ ಕೆಲವರು ಅಮಿತ್ ಶಾ ಅವರಿಗೆ ನೆರವಾಗಿ ಪ್ರಶ್ನೆಗಳನ್ನು ಕೇಳಬಹುದು. ಅವರ ಪ್ರಶ್ನೆಗಳಿಗೆ ಅಮಿತ್ ಷಾ ಅವರೇ ಉತ್ತರಿಸುತ್ತಾರೆ.


ಒಟ್ಟಾರೆಯಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಕಮಲ ಪಾಳಯ ದೊಡ್ಡ ರೀತಿಯಲ್ಲಿ ತಯಾರಿ ನಡೆಸುತ್ತಿದೆ ಎಂದು ಹೇಳಬಹುದು. ಕರೋನಾ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಅಮಿತ್ ಶಾ ವರ್ಚುವಲ್ ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದು ನಂಬಲಾಗಿದೆ.