ನವದೆಹಲಿ: ಭಾರತ ಮತ್ತೆ ಬಾಂಗ್ಲಾದೇಶಕ್ಕೆ ಈರುಳ್ಳಿ ರಫ್ತು (Onion Export) ಪುನಃಸ್ಥಾಪಿಸಿದೆ. ಪ್ರಸ್ತುತ, 25 ಸಾವಿರ ಈರುಳ್ಳಿಯನ್ನು ತುರ್ತು ಆಧಾರದ ಮೇಲೆ ಢಾಕಾಗೆ ಕಳುಹಿಸಲಾಗಿದೆ.


COMMERCIAL BREAK
SCROLL TO CONTINUE READING

ಭಾರತದಲ್ಲಿ ಈರುಳ್ಳಿ ಬೆಲೆ ಹೆಚ್ಚಳದಿಂದಾಗಿ ಬಾಂಗ್ಲಾದೇಶ (Bangladesh)ಕ್ಕೆ ರಫ್ತು ಮಾಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇದರಿಂದಾಗಿ ಬಾಂಗ್ಲಾದೇಶದಲ್ಲಿ ಈರುಳ್ಳಿ ಕೊರತೆ ಉಂಟಾಯಿತು ಮತ್ತು ಅಲ್ಲಿ ಅದರ ಬೆಲೆಗಳು ವೇಗವಾಗಿ ಹೆಚ್ಚಾದವು. 


ದೇಶದಲ್ಲಿ ಈರುಳ್ಳಿ ಬೆಲೆ ಅಗ್ಗವಾಗಿಸಲು ಸರ್ಕಾರ ಕೈಗೊಂಡಿದೆ ಈ ನಿರ್ಧಾರ


ಅದರ ನಂತರ ಬಾಂಗ್ಲಾದೇಶ ಸರ್ಕಾರದ ಕೋರಿಕೆಯ ಮೇರೆಗೆ ಪ್ರಸ್ತುತ 25 ಸಾವಿರ ಟನ್ ಈರುಳ್ಳಿ (Onion) ಯನ್ನು ಢಾಕಾಗೆ ಕಳುಹಿಸಲಾಗಿದೆ. ಇದು ಭಾರತದಿಂದ ಬಾಂಗ್ಲಾದೇಶಕ್ಕೆ ವಿಶೇಷ ಗೌರವವಾಗಿದೆ.


ಈರುಳ್ಳಿ ರಫ್ತು ನಿಷೇಧಿಸಿದ ಭಾರತದ ನಿರ್ಧಾರದಿಂದಾಗಿ ನೆರೆಯ ದೇಶದಲ್ಲಿ ಕಣ್ಣೀರು


ಮಾಹಿತಿಯ ಪ್ರಕಾರ ಈರುಳ್ಳಿ ತುಂಬಿದ ಸುಮಾರು 250 ಟ್ರಕ್‌ಗಳು ಬಾಂಗ್ಲಾದೇಶವನ್ನು ತಲುಪಲಿವೆ. ಈ ಹಿಂದೆ ಭಾರತದಲ್ಲಿ ಪೋಸ್ಟ್ ಮಾಡಿದ ಬಾಂಗ್ಲಾದೇಶ ಹೈಕಮಿಷನರ್ ತಮ್ಮ ವಿದೇಶಾಂಗ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದು ತುರ್ತು ಪರಿಸ್ಥಿತಿಯಾಗಿ ಭಾರತ ಸರ್ಕಾರವು ತನ್ನ ದೇಶಕ್ಕೆ ಈರುಳ್ಳಿ ರಫ್ತು ಪುನಃಸ್ಥಾಪಿಸಿದೆ ಎಂದು ತಿಳಿಸಿದೆ.


ಭಾರತದ ಸಂದೇಶ ಸ್ವೀಕರಿಸಿದ ಬಾಂಗ್ಲಾದೇಶ ವಿದೇಶಾಂಗ ಕಾರ್ಯದರ್ಶಿ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.