ದೇಶದಲ್ಲಿ ಈರುಳ್ಳಿ ಬೆಲೆ ಅಗ್ಗವಾಗಿಸಲು ಸರ್ಕಾರ ಕೈಗೊಂಡಿದೆ ಈ ನಿರ್ಧಾರ

ಏರುತ್ತಿರುವ ಈರುಳ್ಳಿಯ ಬೆಲೆಯನ್ನು ತಡೆಯಲು ಸರ್ಕಾರ ಎಲ್ಲಾ ಬಗೆಯ ಈರುಳ್ಳಿ ರಫ್ತು ನಿಷೇಧಿಸಿದೆ.

Last Updated : Sep 15, 2020, 10:06 AM IST
  • ಈರುಳ್ಳಿ ರಫ್ತು ನಿಷೇಧಿಸಿದ ಸರ್ಕಾರ
  • ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಇಳಿಯಲಿದೆ
  • ಈರುಳ್ಳಿಯ ಏರುತ್ತಿರುವ ಬೆಲೆಗಳಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ದೇಶದಲ್ಲಿ ಈರುಳ್ಳಿ ಬೆಲೆ ಅಗ್ಗವಾಗಿಸಲು ಸರ್ಕಾರ ಕೈಗೊಂಡಿದೆ ಈ ನಿರ್ಧಾರ title=

ನವದೆಹಲಿ: ಹೆಚ್ಚುತ್ತಿರುವ ಈರುಳ್ಳಿ ಬೆಲೆ (Onion Price) ನಿಗ್ರಹಿಸಲು ಸರ್ಕಾರ ಎಲ್ಲಾ ಬಗೆಯ ಈರುಳ್ಳಿ ರಫ್ತು ನಿಷೇಧಿಸಿದೆ. ಸರ್ಕಾರದ ಈ ಹಂತವು ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿ (Onion) ಲಭ್ಯತೆಯನ್ನು ಹೆಚ್ಚಿಸುತ್ತದೆ, ಇದು ಬೆಲೆಗಳನ್ನು ಸಹ ಕಡಿಮೆ ಮಾಡುತ್ತದೆ.

ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ಹೊರಡಿಸಿದ ಅಧಿಸೂಚನೆಯಲ್ಲಿ ಎಲ್ಲಾ ಬಗೆಯ ಈರುಳ್ಳಿಯನ್ನು ರಫ್ತು ಮಾಡುವುದನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ.  ಮತ್ತು ಆಮದು-ರಫ್ತು ವಿಷಯಗಳು ಡಿಜಿಎಫ್‌ಟಿ ವಾಣಿಜ್ಯ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ.

ರಫ್ತು ನಿಷೇಧ ಏಕೆ?
ಈರುಳ್ಳಿ ಬೆಲೆ ಏರಿಕೆಯ ಹೊರತಾಗಿಯೂ ಆಗಸ್ಟ್‌ನಲ್ಲಿ ಈರುಳ್ಳಿಗೆ ಸಗಟು ಹಣದುಬ್ಬರ ದರವು (-) 34.48% ಆಗಿದೆ. ದೆಹಲಿಯಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 40 ರೂ. ವಾಸ್ತವವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರಿ ಮಳೆಯಿಂದಾಗಿ ಈ ಬಾರಿ ಈರುಳ್ಳಿ ಬೆಳೆ ಸಾಕಷ್ಟು ನಷ್ಟ ಅನುಭವಿಸಿದೆ. ಈ ಕಾರಣದಿಂದಾಗಿ ದೇಶೀಯ ಮಾರುಕಟ್ಟೆಯಲ್ಲೂ ಈರುಳ್ಳಿ ಬೆಲೆ ಹೆಚ್ಚಾಗಿದೆ. ಸಗಟು ಮಾರುಕಟ್ಟೆಗಳಲ್ಲಿ ಆಗಸ್ಟ್ 8 ರಿಂದ ಈರುಳ್ಳಿ ಬೆಲೆ ಸ್ಥಿರವಾಗಿ ಹೆಚ್ಚುತ್ತಿದೆ.

ಏಪ್ರಿಲ್ ಮತ್ತು ಜೂನ್ ನಡುವೆ ಭಾರತ ಸುಮಾರು 198 ಮಿಲಿಯನ್ ಈರುಳ್ಳಿ ರಫ್ತು ಮಾಡಿದೆ. ಕಳೆದ ವರ್ಷ $ 450 ಮಿಲಿಯನ್ ಈರುಳ್ಳಿ ರಫ್ತು ಮಾಡಲಾಗಿತ್ತು. ಭಾರತದಿಂದ ಹೆಚ್ಚಾಗಿ ಶ್ರೀಲಂಕಾ, ಬಾಂಗ್ಲಾದೇಶ, ಮಲೇಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಈರುಳ್ಳಿಯನ್ನು ರಫ್ತು ಮಾಡಲಾಗುತ್ತದೆ.

ರಫ್ತು ನಿಷೇಧ ಹೇರುವ ಮೊದಲೇ...
ಇದಕ್ಕೂ ಮೊದಲು 2019ರ ಸೆಪ್ಟೆಂಬರ್‌ನಲ್ಲಿ ಈರುಳ್ಳಿ ರಫ್ತು ಮಾಡುವುದನ್ನು ಸರ್ಕಾರ ನಿಷೇಧಿಸಿತ್ತು. ಆ ಸಮಯದಲ್ಲಿ ಬೇಡಿಕೆ ಮತ್ತು ಪೂರೈಕೆಯಲ್ಲಿ ಭಾರಿ ವ್ಯತ್ಯಾಸದಿಂದಾಗಿ ಈರುಳ್ಳಿ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ಮಹಾರಾಷ್ಟ್ರದಂತಹ ಪ್ರಮುಖ ಈರುಳ್ಳಿ ಉತ್ಪಾದಿಸುವ ರಾಜ್ಯಗಳಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ ಈರುಳ್ಳಿ ಬೆಳೆ ತೀವ್ರವಾಗಿ ಹಾನಿಗೊಳಗಾಗಿತ್ತು ಇದರಿಂದಾಗಿ ಅನಿವಾರ್ಯವಾಗಿ ಈರುಳ್ಳಿ ರಫ್ತನ್ನು ನಿಷೇಧಿಸಬೇಕಾಯಿತು.
 

Trending News