ಜಾಗತಿಕವಾಗಿ COVID 19 ವೈರಸ್ ಪೀಡಿತರ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ ಭಾರತ
ಕಳೆದ 8 ದಿನಗಳಿಂದಲೂ ಪ್ರತಿನಿತ್ಯ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಈಗ ಅದು 7 ಸಾವಿರಕ್ಕೂ ಹೆಚ್ಚಾಗಿದೆ. COVID 19 ವಿಷಯ ನಿಭಾಯಿಸಿರುವುದರಲ್ಲಿ ಭಾರತ ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ಪರವಾಗಿಲ್ಲ ಎಂದು ಬೀಗುತ್ತಿದ್ದವರು ಈಗ ಕೈ ಹಿಸುಕಿಕೊಳ್ಳುವಂತಾಗಿದೆ.
ನವದೆಹಲಿ: ಲಾಕ್ಡೌನ್ ಜಾರಿಗೊಳಿಸುವ ವಿಷಯದಲ್ಲಿ ಕೇಂದ್ರ ಸರ್ಕಾರ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದು ನಿಧಾನಕ್ಕೆ ಗೊತ್ತಾಗುತ್ತಿದೆ. ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕು ಲಾಕ್ಡೌನ್ (Lockdown) ಜಾರಿ ಮಾಡಿದ್ದರೂ COVID 19 ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂದಿಲ್ಲ. ಕಳೆದ ವಾರ ಪ್ರತಿನಿತ್ಯವೂ 6 ಸಾವಿರಕ್ಕೂ ಹೆಚ್ಚು COVID 19 ಪೀಡಿತರು ಕಾಣಿಸಿಕೊಳ್ಳುತ್ತಿದ್ದರು. ಈಗ ದಿನವೊಂದರಲ್ಲಿ 7 ಸಾವಿರಕ್ಕೂ ಹೆಚ್ಚು COVID 19 ಪೀಡಿತರು ಪತ್ತೆಯಾಗಿದ್ದಾರೆ. ಇದರ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ COVID 19 ವೈರಸ್ ಪೀಡಿತರ ಪಟ್ಟಿಯಲ್ಲಿ ಈಗ ಭಾರತ 9ನೇ ಸ್ಥಾನಕ್ಕೂ ಏರಿದೆ.
ಕಳೆದ 8 ದಿನಗಳಿಂದಲೂ ಪ್ರತಿನಿತ್ಯ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಈಗ ಅದು 7 ಸಾವಿರಕ್ಕೂ ಹೆಚ್ಚಾಗಿದೆ. ಕೋವಿಡ್ -19 (Covid-19) ವಿಷಯ ನಿಭಾಯಿಸಿರುವುದರಲ್ಲಿ ಭಾರತ ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ಪರವಾಗಿಲ್ಲ ಎಂದು ಬೀಗುತ್ತಿದ್ದವರು ಈಗ ಕೈ ಹಿಸುಕಿಕೊಳ್ಳುವಂತಾಗಿದೆ. ಇದನ್ನು ಅಂಕಿಅಂಶಗಳು ಸಾರಿ ಸಾರಿ ಹೇಳುತ್ತವೆ.
ನಿನ್ನೆ ಒಂದೇ ದಿನ ದೇಶದಲ್ಲಿ 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರೋನವೈರಸ್ (Coronavirus) COVID 19 ವೈರಸ್ ಪೀಡಿತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಭಾರತ ಈಗ 9ನೇ ಸ್ಥಾನಕ್ಕೂ ಏರಿದೆ.
ಸದ್ಯ ಭಾರತದ COVID 19 ವೈರಸ್ ಪೀಡಿತರ ಸಂಖ್ಯೆ 1,65,386ಕ್ಕೆ ಏರಿಕೆಯಾಗಿದೆ. ಈ ಮೂಲಕ COVID 19 ವೈರಸ್ ಪೀಡಿತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ಟರ್ಕಿಯನ್ನು ಭಾರತ ಹಿಂದಿಕ್ಕಿದೆ. ಈಗ 10ನೇ ಸ್ಥಾನಕ್ಕೆ ಕುಸಿದಿರುವ ಟರ್ಕಿಯ COVID 19 ವೈರಸ್ ಪೀಡಿತರ ಸಂಖ್ಯೆ 1,60,979ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ದಿನದಿಂದ ದಿನಕ್ಕೆ COVID 19 ವೈರಾಣು ಪೀಡಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಇತ್ತೀಚೆಗೆ 12ನೇ ಸ್ಥಾನದಲ್ಲಿದ್ದ ಚೀನಾವನ್ನು ಹಿಂದಿಕ್ಕಿ 11ನೇ ಸ್ಥಾನಕ್ಕೆ ಬಂದಿತ್ತು. ಬಳಿಕ ಇರಾನ್ ಅನ್ನು ಹಿಂದಿಕ್ಕಿ 10ನೇ ಸ್ಥಾನಕ್ಕೆ ಬಂದಿತ್ತು. ಮೊನ್ನೆಯಷ್ಟೇ ಭಾರತದ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದೂವರೆ ಲಕ್ಷದ ಗಡಿ ದಾಟಿತ್ತು.
ಇದಕ್ಕೂ ಮೊದಲು ಮೇ 6ರಿಂದ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದವು. ಮೇ 10ರಿಂದ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಮೇ17ರಿಂದ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾದವು. ಈಗ ಮೇ 21ರಿಂದ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸಿದ್ದವು. ಪ್ರತಿದಿನ ಭಾರತದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸುವ ಮಾಹಿತಿಗಳ ಪ್ರಕಾರ ಮೇ 6ರಿಂದ ಈವರೆಗಿನ ಚಿತ್ರಣ ಹೀಗಿದೆ...
ಮೇ 6ರಂದು 3,561,
ಮೇ 7ರಂದು 3,390,
ಮೇ 8ರಂದು 3,320,
ಮೇ 9ರಂದು 3,277,
ಮೇ 10ರಂದು 4,213,
ಮೇ 11ರಂದು 3,064,
ಮೇ 12ರಂದು 3,525,
ಮೇ 13ರಂದು 3,722,
ಮೇ 14ರಂದು 3,967,
ಮೇ 15ರಂದು 3,970,
ಮೇ 16ರಂದು 4,987,
ಮೇ 17ರಂದು 5,242,
ಮೇ 18ರಂದು 4,970,
ಮೇ 19ರಂದು 5,611,
ಮೇ 20ರಂದು 5,609,
ಮೇ 21ರಂದು 6,088,
ಮೇ 22ರಂದು 6,654,
ಮೇ 23ರಂದು 6,767,
ಮೇ 24ರಂದು 6,977,
ಮೇ 25ರಂದು 6,535,
ಮೇ 26ರಂದು 6,387,
ಮೇ 27ರಂದು 6,566,
ಮೇ 28ರಂದು 7 ಸಾವಿರಕ್ಕೂ ಹೆಚ್ಚು.
ಇದೇ ರೀತಿಯ ಟ್ರೆಂಡ್ ಮುಂದುವರೆದರೆ COVID 19 ವೈರಸ್ ಪೀಡಿತರ ಸಂಖ್ಯೆಯಲ್ಲಿ ಭಾರತ 8ನೇ ಸ್ಥಾನಕ್ಕೂ ಏರಲಿದೆ. ಜೊತೆಗೆ COVID 19 ವೈರಸ್ ಪೀಡಿತರ ಸಂಖ್ಯೆ 2 ಲಕ್ಷದ ಗಡಿಯನ್ನೂ ದಾಟಲಿದೆ.