ಪಂಜಾಬ್ :  ಪಂಜಾಬ್‌ನಲ್ಲಿ ಐಎಎಫ್ (IAF) ಯುದ್ಧ ವಿಮಾನ Mig-21 ಅಪಘಾತಕ್ಕೀಡಾಗಿ ಗುರುವಾರ ತಡರಾತ್ರಿ 11: 15 ರ ಸುಮಾರಿಗೆ ಪಂಜಾಬ್‌ನ ಮೊಗಾನಲ್ಲಿ ಪತನಗೊಂಡಿದೆ. ಮೊಗಾ ನಗರದ ಲಂಗೇನಾ ಎಂಬ ಹಳ್ಳಿಯ ಬಳಿ ಯುದ್ಧ ವಿಮಾನ (Fighter plane crash) ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಪೈಲಟ್ ಅಭಿನವ್ ಚೌಧರಿ ಮೃತಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ನಿತ್ಯದ ತರಬೇತಿಯಲ್ಲಿದ್ದ ಮಿಗ್ -21 : 
ರಾಜಸ್ಥಾನದ ಸೂರತ್‌ಘಡದ ವಾಯುನೆಲೆಯಿಂದ ಹಾರಾಟ ಆರಂಭಿಸಿದ್ದ ಮಿಗ್ -21, ಇನಾಯತ್ಪುರದಲ್ಲಿ ಅಭ್ಯಾಸ ನಡೆಸಿದ ನಂತರ ವಾಪಸ್ ಮರಳುತ್ತಿತ್ತು. ಪೈಲಟ್ (Pilot) ನಿತ್ಯದ ಅಭ್ಯಾಸ ನಡೆಸುತ್ತಿದ್ದರು. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ, ಬಟಿಂಡಾ ವಾಯುನೆಲೆ ಮತ್ತು ಹಲ್ವಾರಾ ವಾಯುನೆಲೆಯಿಂದ ತಂಡಗಳು ಘಟನಾ ಸ್ಥಳ ತಲುಪಿತು . 


ಇದನ್ನೂ ಓದಿ : ಮನೆಯ ಕಿಟಕಿ ಬಾಗಿಲು ತೆರೆದಿಡಿ, ಸ್ವಚ್ಛ ಗಾಳಿ ಬರುತ್ತಿದ್ದರೆ ಕರೋನಾ ಅಪಾಯ ಇಲ್ಲ


ಹೊಲಕ್ಕೆ ಅಪ್ಪಳಿಸಿದ ಮಿಗ್ -21 :  
Mig-21 ರಾತ್ರಿ 11: 15 ರ ಸುಮಾರಿಗೆ ಲ್ಯಾಂಗೆಯಾನಾ ಗ್ರಾಮದ ಮನೆಗಳಿಂದ 500 ಮೀಟರ್ ದೂರದಲ್ಲಿರುವ ಹೊಲಕ್ಕೆ ಅಪ್ಪಳಿಸಿದೆ. ಅಪಘಾತದಲ್ಲಿ ಪೈಲಟ್ ಮೃತಪಟ್ಟಿದ್ದಾರೆ. ಸುಮಾರು 4 ಗಂಟೆಗಳ ಶೋಧದ ಬಳಿಕ ಪೈಲಟ್ ಅಭಿನವ್ ಚೌಧರಿ (Abhinav Chaudary)  ಮೃತದೇಹ ಹೊಲದಲ್ಲಿ ಪತ್ತೆಯಾಗಿದೆ. ಅಪಘಾತದಿಂದ ಗ್ರಾಮದ ಯಾರಿಗೂ ನಷ್ಟವಾಗಿಲ್ಲ ಎಂದು ಹೇಳಲಾಗಿದೆ. 


ಪೈಲಟ್ ಅಭಿನವ್ ಚೌಧರಿ,  ಸೂರತ್‌ ಘಡದಿಂದ ಇನಾಯತ್‌ಪುರ ವಾಯುನೆಲೆಗೆ ಹಾರಾಟ ನಡೆಸಿದ್ದರು. ನಂತರ ಅಲ್ಲಿಂದ ಮತ್ತೆ ಸೂರತ್ ಘಡಕ್ಕೆ ವಾಪಾಸಾಗುತ್ತಿದ್ದ ವೇಳೆ, ಈ ಅಪಘಾತ ಸಂಭವಿಸಿದೆ.


ಇದನ್ನೂ ಓದಿ : ವಾರಣಾಸಿಯ ವೈದ್ಯರೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.