ಮನೆಯ ಕಿಟಕಿ ಬಾಗಿಲು ತೆರೆದಿಡಿ, ಸ್ವಚ್ಛ ಗಾಳಿ ಬರುತ್ತಿದ್ದರೆ ಕರೋನಾ ಅಪಾಯ ಇಲ್ಲ

 ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ, ಸರ್ಕಾರವು ಸರಳ ಎಡ್ವೈಸರಿ ಜಾರಿ ಮಾಡಿದೆ.  ಇದರಲ್ಲಿ, ಕರೋನಾ ವೈರಸ್ ನ ಏರೋಸೆಲ್ ಗಳು ಗಾಳಿಯಲ್ಲಿ  10 ಮೀಟರ್ ವರೆಗೆ ತೇಲುತ್ತವೆ ಎಂದು ಹೇಳಿದೆ.

Written by - Ranjitha R K | Last Updated : May 21, 2021, 09:09 AM IST
  • ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ, ಸರಳ ಎಡ್ವೈಸರಿ ಜಾರಿ
  • ಕರೋನಾ ವೈರಸ್ ನ ಏರೋಸೆಲ್ ಗಳು ಗಾಳಿಯಲ್ಲಿ 10 ಮೀಟರ್ ವರೆಗೆ ತೇಲುತ್ತವೆ
  • ವೈರಸ್ ಹರಡುವುದನ್ನು ತಡೆಯಲು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವಂತೆ ಸೂಚನೆ
ಮನೆಯ ಕಿಟಕಿ ಬಾಗಿಲು ತೆರೆದಿಡಿ, ಸ್ವಚ್ಛ ಗಾಳಿ ಬರುತ್ತಿದ್ದರೆ ಕರೋನಾ ಅಪಾಯ ಇಲ್ಲ title=
ಸರಳ ಎಡ್ವೈಸರಿ ಜಾರಿ (file photo)

ನವದೆಹಲಿ : ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ, ಸರ್ಕಾರವು ಸರಳ ಎಡ್ವೈಸರಿ ಜಾರಿ ಮಾಡಿದೆ.  ಇದರಲ್ಲಿ, ಕರೋನಾ ವೈರಸ್ ನ ಏರೋಸೆಲ್ ಗಳು ಗಾಳಿಯಲ್ಲಿ  10 ಮೀಟರ್ ವರೆಗೆ ತೇಲುತ್ತವೆ ಎಂದು ಹೇಳಿದೆ.  ಸರ್ಕಾರದ  ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್ (Vijay Raghavan) ಕಚೇರಿ ಗುರುವಾರ  ಅಡ್ವೈಸರಿ ಜಾರಿ ಮಾಡಿದೆ. ಕೋವಿಡ್ -19 (Covid-19) ನಿಂದ ಬಳಲುತ್ತಿರುವ ವ್ಯಕ್ತಿಯ ಸೀನಿದಾಗ ಬಹೊರಹೊಮ್ಮುವಾಗ ಡ್ರಾಪ್ ಲೆಟ್ ಗಳು,  ಎರಡು ಮೀಟರ್ ವ್ಯಾಪ್ಯಿಯೊಳಗೆ ಬೀಳುತ್ತವೆ. ಆದರೆ ಅದರಿಂದ ಹೊರಹೊಮ್ಮುವ ಏರೋಸಾಸೆಲ್ ಗಳು  10 ಮೀಟರ್‌ಗಳಷ್ಟು ದೂರದಲ್ಲಿ ಇರಬಹುದು ಎಂದು ಅಡ್ವೈಸರಿಯಲ್ಲಿ ಹೇಳಲಾಗಿದೆ.  

ಪ್ರಧಾನ ವೈಜ್ಞಾನಿಕ ಸಲಹೆಗಾರರ ​​ಕಚೇರಿ ತನ್ನ 'ಈಜಿ ಟು ಫಾಲೋ " ಅಡ್ವೈಸರಿಯಲ್ಲಿ ಸೋಂಕು ಹರಡುವುದನ್ನು ನಿಲ್ಲಿಸಿ, ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಿ,  SARS-CoV-2 ವೈರಸ್ ಹರಡುವುದನ್ನು ತಡೆಯಲು ಮಾಸ್ಕ್ (Mask) ಧರಿಸಿ, ಸಾಮಾಜಿಕ ಅಂತರ (Social distancing) ಕಾಪಾಡಿ ಮತ್ತು ನೈರ್ಮಲ್ಯದತ್ತ ಗಮನಹರಿಸುವಂತೆ ಹೇಳಿದೆ. ಅಲ್ಲದೆ, ಮುಕ್ತ ವಾತಾವರಣವನ್ನು ಬಳಸುವಂತೆ ಹೇಳಿದೆ. 

ಇದನ್ನೂ ಓದಿ : ವಾರಣಾಸಿಯ ವೈದ್ಯರೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ

ಅಡ್ವೈಸರಿಯ ಮುಖ್ಯಾಂಶಗಳು :
- ಕೋವಿಡ್ -19 (COVID-19) ವೈರಸ್ ಹರಡುವುದನ್ನು ಕಡಿಮೆ ಮಾಡುವಲ್ಲಿ ಸ್ವಚ್ಛ ಗಾಳಿ ಮತ್ತು ತೆರೆದ ವಾತಾವರಣ ಪ್ರಮುಖ ಪಾತ್ರ ವಹಿಸುತ್ತದೆ. ಮುಕ್ತ ವಾತಾವರಣದಲ್ಲಿ  ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸೋಂಕು ಹರಡುವ ಅಪಾಯವೂ ಕಡಿಮೆ.

- ಸೀನುವ ಸಂದರ್ಭದಲ್ಲಿ ವೈರಸ್ (Virus) ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸೀನುವಾಗ  ಹೊರಬರುವ ಡ್ರಾಪ್ ಲೆಟ್ ನೆಲದ ಮೇಲೆ ಬೀಳುತ್ತವೆ. ಆದರೆ ಅದರ ಸಣ್ಣ ಕಣಗಳು ಗಾಳಿಯಲ್ಲಿ ಬಹಳ ದೂರದವರೆಗೆ ಹೋಗುತ್ತದೆ. 

ಇದನ್ನೂ ಓದಿ : ಎರಡನೇ ಕೊರೊನಾ ಅಲೆಯಲ್ಲಿ 300ಕ್ಕೂ ಅಧಿಕ ವೈದ್ಯರ ಸಾವು

- ಗಾಳಿಯ ಪ್ರಸರಣವಿಲ್ಲದ ಸ್ಥಳಗಳಲ್ಲಿ, ಸೋಂಕಿತ ಹನಿಗಳು ಕೇಂದ್ರೀಕೃತವಾಗಿರುತ್ತವೆ ಮತ್ತು ಇದು ಆ ಪ್ರದೇಶದ ಜನರಲ್ಲಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

- ಸೋಂಕಿತ ವ್ಯಕ್ತಿಯ ಮೂಗಿನಿಂದ ಹೊರಬರುವ ಹನಿಗಳು (Droplets) ಎರಡು ಮೀಟರ್ ಪ್ರದೇಶದಲ್ಲಿ ಬೀಳಬಹುದು ಮತ್ತು ಹೆಚ್ಚು ಸಣ್ಣ ಹನಿಗಳು ಗಾಳಿಯ ಮೂಲಕ ಹತ್ತು ಮೀಟರ್ ವರೆಗೆ ಹೋಗಬಹುದು. 

 - ಹಿಂದಿನ ಪ್ರೋಟೋಕಾಲ್ ಪ್ರಕಾರ, ಸೋಂಕನ್ನು ತಡೆಗಟ್ಟಲು ಆರು ಅಡಿಗಳಷ್ಟು ಅಂತರವನ್ನು ಕಾಪಾಡುವುದು ಅಗತ್ಯ ಎಂದು ಹೇಳಲಾಗಿತ್ತು. ಆದರೆ ಯಾರ ಸಂಪರ್ಕಕ್ಕೂ ಬಾರದೇ ಹೋದರೂ ಸೋಂಕಿಗೆ ಒಳಗಾಗಿರುವ ಬಗ್ಗೆ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ (Social media) ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇವರುಗಳು ಇದ್ದ ಸ್ಥಳಗಳಲ್ಲಿ ಸ್ವಚ್ಛ ಗಾಳಿ ಬರುತ್ತಿದ್ದರೆ ಸೋಂಕಿನಿಂದ ರಕ್ಷಣೆಯಾಗಿರುತ್ತಿತ್ತು ಎನ್ನಲಾಗಿದೆ. 

- ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆದರೆ ಮತ್ತು ಎಕ್ಸಾಸ್ಟಿಂಗ್ ಫ್ಯಾನ್ ಹಾಕಿದರೆ ಯಾವ ರೀತಿ ಕೆಟ್ಟ ವಾಸನೆಗಳು ಕಡಿಮೆಯಾಗುತ್ತದೆಯೋ ಅದೇ ರೀತಿ, ಹೊರಗಿನ ಸ್ವಚ್ಛ ಗಾಳಿ ಬರುತ್ತಿದ್ದರೆ ವೈರಸ್ ಗಳ ಸಂಖ್ಯೆ ಕಡಿಮೆಯಾಗುತ್ತದೆ.  

ಇದನ್ನೂ ಓದಿ :  'Black Fungus' ನ್ನು ಸಾಂಕ್ರಾಮಿಕ ಕಾಯ್ದೆ ಅಡಿ ತರಲು ರಾಜ್ಯಗಳಿಗೆ ಕೇಂದ್ರ ಸೂಚನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News