ಪಠಾಣ್‌ಕೋಟ್: ವಿಂಗ್ ಕಮಾಂಡರ್ ಅಭಿನಂದನ್ ಅವರು ಏರ್‌ಚೀಫ್ ಮಾರ್ಷಲ್ ಬಿಎಸ್ ಧನೋವಾ ಅವರೊಂದಿಗೆ ಭಾರತೀಯ ವಾಯುಪಡೆಯ ಪಠಾಣ್‌ಕೋಟ್ ಏರ್‌ಬೇಸ್‌ನಿಂದ ಸೋಮವಾರ MIG 21 ಹಾರಾಟ ನಡೆಸಿದ್ದಾರೆ. ಇಬ್ಬರೂ ಸುಮಾರು ಅರ್ಧ ಘಂಟೆಯವರೆಗೆ ವಿಮಾನ ಹಾರಾಟ ನಡೆಸಿದರು.
ಹಾರಾಟದ ಬಳಿಕ ಮಾತನಾಡಿದ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧಾನೋವಾ, 'ಅಭಿನಂದನ್ ಅವರನ್ನು 6 ತಿಂಗಳ ನಂತರ ವಾಯುಸೇನೆಯಲ್ಲಿ ಸ್ವಾಗತಿಸಲಾಗುತ್ತಿದೆ. ಮಿಗ್ -21 ಸ್ವರ್ಡನ್‌ನಲ್ಲಿ ಅಭಿನಂದನ್ ಅರನ್ನು ಮತ್ತೆ ಸ್ವಾಗತಿಸಲಾಗಿದೆ. ಅಭಿನಂದನ್ ಅವರೊಂದಿಗೆ ಮಿಗ್ 21 ರಲ್ಲಿ ಹಾರಲು ಆಹ್ಲಾದಕರವಾಗಿದೆ. ನಾನು ಅಭಿನಂದನ್ ಅವರ ತಂದೆಯೊಂದಿಗೆ ಹಾರಾಟ ನಡೆಸಿದೆ. ನಮಗೆ ಒಂದು ಸಾಮ್ಯತೆ ಇದೆ. ನಾವಿಬ್ಬರೂ ಪಾಕಿಸ್ತಾನದ ವಿರುದ್ಧ ಹೋರಾಡಿದ್ದೆವು. ನಾನು ಕಾರ್ಗಿಲ್‌ನಲ್ಲಿ ಮತ್ತು ಅಭಿನಂದನ್ ಬಾಲಕೋಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದ್ದೇವೆ ಎಂದು ಹೇಳಿದರು.
ಈ ವರ್ಷ ಆರಂಭದಲ್ಲಿ ಫೆಬ್ರವರಿ 27 ರಂದು ಪಾಕಿಸ್ತಾನದ ವಿಮಾನಗಳು ಭಾರತೀಯ ಗಡಿಯಲ್ಲಿ ನುಸುಳಲು ಪ್ರಯತ್ನಿಸಿದವು. ಈ ಸಂದರ್ಭದಲ್ಲಿ ಪಾಕಿಸ್ತಾನದ ಎಫ್ -16 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್ ಹೊಡೆದುರುಳಿಸಿದ್ದರು. ಇದರ ನಂತರ ಅವರ ವಿಮಾನ ಅಪಘಾತಕ್ಕೀಡಾಗಿ ನಂತರ ಅವರು ಪಾಕಿಸ್ತಾನದ ಗಡಿಯಲ್ಲಿ ಇಳಿದಿದ್ದರಿಂದ ಪಾಕಿಸ್ತಾನದ ಸೈನಿಕರು ಅಭಿನಂದನ್ ಅವರನ್ನು ಬಂಧಿಸಿದ್ದರು. ಇದರ ನಂತರ ಭಾರತ ರಾಜತಾಂತ್ರಿಕತೆಯ ಮೂಲಕ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗುವಂತೆ ಮಾಡಲಾಗಿತ್ತು.