ನವದೆಹಲಿ : ಭಾರತೀಯ ರೈಲ್ವೆ ಇಂದು 260 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಿದೆ. ಹಾಗಾಗಿ ಪ್ರಯಾಣಿಕರು ಮನೆಯಿಂದ ಹೊರಡುವ ಮುನ್ನ ರೈಲಿನ ವೇಳಾಪಟ್ಟಿಯನ್ನು ತಿಳಿದುಕೊಳ್ಳುವುದು ಉತ್ತಮ. ಅಲ್ಲದೆ, 35 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದು, ಸಂಪೂರ್ಣ ಮಾಹಿತಿ ಪಡೆದು ಪ್ರಯಾಣಿಸುವಂತೆ ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. 


COMMERCIAL BREAK
SCROLL TO CONTINUE READING

ಇನ್ನು ಜನರ ಅನುಕೂಲಕ್ಕಾಗಿ, ಭಾರತೀಯ ರೈಲ್ವೇಯು ರೈಲು ಸಂಚಾರಕ್ಕೆ ಸಂಬಂಧಿಸಿದ ರದ್ದತಿ, ವಿಳಂಬ, ಆಗಮನ ಮತ್ತು ನಿರ್ಗಮನದ ಮಾಹಿತಿಯನ್ನು ಪ್ರಕಟಿಸಿದೆ. ಇದರಲ್ಲಿ ರೈಲು ರದ್ದತಿ, ರೈಲು ಹಳಿತಪ್ಪುವಿಕೆ, ವಿಳಂಬ ಸೇರಿದಂತೆ ಹಲವು ಪಟ್ಟಿಗಳನ್ನು ಸಹ ನೀಡಿದೆ. ಈ ರೈಲ್ವೆ ಪಟ್ಟಿಯಲ್ಲಿ, ವಿವಿಧ ರಾಜ್ಯಗಳ ಮೂಲಕ ಹಾದುಹೋಗುವ ರೈಲುಗಳ ರದ್ದತಿಗೆ ಸಂಬಂಧಿಸಿದ ವಿವರಗನ್ನು ನೀವು ನೋಡಬಹುದು.


ಇದನ್ನೂ ಓದಿ: KVS Recruitment New Notification: ಕೇಂದ್ರೀಯ ವಿದ್ಯಾಲಯದಿಂದ ಹೊಸ ಅಧಿಸೂಚನೆ ಬಿಡುಗಡೆ: ಅರ್ಜಿ ನಮೂನೆಯನ್ನು ಹೀಗೆ ಡೌನ್ಲೋಡ್ ಮಾಡಿ


ಇಂದು ಬಿಡುಗಡೆಯಾದ ಭಾರತೀಯ ರೈಲ್ವೆಯ ಪಟ್ಟಿಯಲ್ಲಿ, 18ನೇ ಡಿಸೆಂಬರ್ 2022 ರಂದು, 260 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. 35 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಅವುಗಳಲ್ಲಿ, ಉತ್ತರ ಪ್ರದೇಶ, ಬಿಹಾರ ಮತ್ತು ಪಂಜಾಬ್ ಉತ್ತರ ರಾಜ್ಯಗಳಲ್ಲಿ ರೈಲ್ವೆ ಸಾರಿಗೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ತರಲಾಗಿದೆ. ಈ ಎಲ್ಲಾ ಮಾಹಿತಿಯನ್ನು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ enquiry.indianrail.gov.in ನಲ್ಲಿ ಪಡೆಯಬಹುದು.


18 ರೈಲುಗಳ ಸಮಯವನ್ನು ಪರಿಷ್ಕರಿಸಲಾಗಿದೆ. 18 ರೈಲುಗಳ ಮಾರ್ಗ ಬದಲಿಸಲಾಗಿದೆ. ಈಗ ಚಳಿಗಾಲವಾದ್ದರಿಂದ ನಾನಾ ಕಾರಣಗಳಿಂದ ರೈಲು ಸಂಚಾರ ವಿಳಂಬವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈಲು ಪ್ರಯಾಣಕ್ಕಾಗಿ ಮನೆಯಿಂದ ಹೊರಡುವ ಮುನ್ನ ರದ್ದಾದ ರೈಲುಗಳ ಪಟ್ಟಿಯನ್ನು ಪರಿಶೀಲಿಸುವಂತೆ ರೈಲ್ವೆ ಆಡಳಿತ ಸೂಚಿಸಿದೆ. ಈ ಬಾರಿ ಚಳಿ ಹೆಚ್ಚಾದ ಹಿನ್ನೆಲೆ ಇಡೀ ಉತ್ತರ ಭಾರತವೇ ಹಿಮದ ಹೊದಿಕೆ ಹೊದ್ದುಕೊಂಡಂತೆ ಕಾಣುತ್ತಿದೆ. ಇದು ರೈಲು ಸಂಚಾರದ ಮೇಲೆ ಪರಿಣಾಮ ಬೀರುತ್ತದೆ.


ಇದನ್ನೂ ಓದಿ: Good News: ಬೇಳೆಕಾಳು, ಆಲ್ಕೋಹಾಲ್ ಮೇಲಿನ GST ದರ ಇಳಿಕೆಗೆ ನಿರ್ಧಾರ!


ಕಳೆದ ಕೆಲವು ದಿನಗಳಿಂದ ಬೆಳಗ್ಗೆ ಮತ್ತು ರಾತ್ರಿ ವೇಳೆ ಹೆಚ್ಚು ಮಂಜು ಕವಿದ ವಾತಾವರಣ ಕಂಡು ಬಂದಿದೆ. ಇದು ರೈಲು ಸಾರಿಗೆ ಮಾತ್ರವಲ್ಲದೆ ರಸ್ತೆ ಮತ್ತು ವಾಯು ಸಾರಿಗೆಯ ಮೇಲೂ ಪರಿಣಾಮ ಬೀರುತ್ತದೆ. ಹತ್ತಿರದ ಸೈಬರ್ ಕೆಫೆಗೆ ಭೇಟಿ ನೀಡುವ ಮೂಲಕ ನಿಮ್ಮ ರೈಲಿನ ಪ್ರಸ್ತುತ ಸ್ಥಿತಿಯನ್ನು ನೀವು ಪರಿಶೀಲಿಸಬಹುದು. ಇದರೊಂದಿಗೆ ನಿಮ್ಮ ಮೊಬೈಲ್‌ನಲ್ಲಿ ರೈಲುಗಳ ಕಾರ್ಯಾಚರಣೆ, ಸ್ಥಿತಿ ಮತ್ತು ಸಮಯದ ಮಾಹಿತಿಯನ್ನು ಮನೆಯಲ್ಲಿಯೇ ಕುಳಿತು ಪಡೆಯಬಹುದು.


ರದ್ದಾದ ರೈಲುಗಳ ಸ್ಥಿತಿಯನ್ನು ತಿಳಿಯಲು, ನೀವು ನಿಮ್ಮ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ಭಾರತೀಯ ರೈಲ್ವೆಯ ವೆಬ್‌ಸೈಟ್ https://enquiry.indianrail.gov.in/mntes ಗೆ ಭೇಟಿ ನೀಡಬಹುದು. ಇದರ ಹೊರತಾಗಿ, ನೀವು IRCTC ಸೈಟ್ https://www.irctchelp.in/cancelled-trains-list/#list2 ನಿಂದ ರೈಲುಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.