Good News: ಬೇಳೆಕಾಳು, ಆಲ್ಕೋಹಾಲ್ ಮೇಲಿನ GST ದರ ಇಳಿಕೆಗೆ ನಿರ್ಧಾರ!

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಸಚಿವರ ನಿಯೋಗ (GoM)ವು ಒಂದೆರಡು ದಿನಗಳ ಹಿಂದಷ್ಟೇ ತನ್ನ ವರದಿ ಸಲ್ಲಿಸಿದ್ದರಿಂದ ಆನ್‌ಲೈನ್ ಗೇಮಿಂಗ್ ಮತ್ತು ಕ್ಯಾಸಿನೊಗಳ ಮೇಲಿನ GST ಕುರಿತ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ.

Written by - Puttaraj K Alur | Last Updated : Dec 18, 2022, 08:35 AM IST
  • ಈಥೈಲ್ ಆಲ್ಕೋಹಾಲ್‌ನ ಮೇಲಿನ ಜಿಎಸ್‌ಟಿ ದರ ಶೇ.18ರಿಂದ ಶೇ.5ಕ್ಕೆ ಇಳಿಕೆ
  • ದ್ವಿದಳ ಧಾನ್ಯಗಳ ಮೇಲಿನ ಜಿಎಸ್‌ಟಿಯನ್ನು ಶೇ.5 ರಿಂದ ಶೂನ್ಯಕ್ಕೆ ಇಳಿಸಲು ನಿರ್ಧಾರ
  • ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ 48ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ
Good News: ಬೇಳೆಕಾಳು, ಆಲ್ಕೋಹಾಲ್ ಮೇಲಿನ GST ದರ ಇಳಿಕೆಗೆ ನಿರ್ಧಾರ! title=
ಜನಸಾಮಾನ್ಯರಿಗೆ ಗುಡ್ ನ್ಯೂಸ್

ನವದೆಹಲಿ: ಮೋಟಾರ್ ಸ್ಪಿರಿಟ್(ಪೆಟ್ರೋಲ್)ನೊಂದಿಗೆ ಮಿಶ್ರಣ ಮಾಡಲು ಸಂಸ್ಕರಣಾಗಾರಗಳಿಗೆ ಸರಬರಾಜು ಮಾಡುವ ಈಥೈಲ್ ಆಲ್ಕೋಹಾಲ್‌ನ ಮೇಲಿನ ಜಿಎಸ್‌ಟಿ ದರವನ್ನು ಈಗಿರುವ ಶೇ.18ರಿಂದ ಶೇ.5ಕ್ಕೆ ಇಳಿಸಲು ಸರಕು ಮತ್ತು ಸೇವಾ ತೆರಿಗೆ (GST) ಕೌನ್ಸಿಲ್ ಶನಿವಾರ ಶಿಫಾರಸು ಮಾಡಿದೆ. ದ್ವಿದಳ ಧಾನ್ಯಗಳ ಮೇಲಿನ ಜಿಎಸ್‌ಟಿಯನ್ನು ಶೇ.5 ರಿಂದ ಶೂನ್ಯಕ್ಕೆ ಇಳಿಸಲು ನಿರ್ಧರಿಸಲಾಗಿದೆ.

ಇದು ಮಿಶ್ರಣದ ಪ್ರಯತ್ನಗಳನ್ನು ಮತ್ತಷ್ಟು ಉತ್ತೇಜಿಸುತ್ತದೆ. ಇದಲ್ಲದೆ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ವಿದೇಶಿ ವಿನಿಮಯವನ್ನು ಉಳಿಸುತ್ತದೆ ಎಂದು ಹೇಳಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ 48ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಇದನ್ನೂ ಓದಿ: SBI ಖಾತೆದಾರರಿಗೆ ಸಿಹಿ ಸುದ್ದಿ : ಎಫ್‌ಡಿ ಬಡ್ಡಿ ದರ ಹೆಚ್ಚಿಸಿದ ಬ್ಯಾಂಕ್!

ದಿವಾಳಿತನ ಮತ್ತು ದಿವಾಳಿತನ ಸಂಹಿತೆ 2016ರಡಿ ಪ್ರಕ್ರಿಯೆಗಳನ್ನು ಅಂತಿಮಗೊಳಿಸಿರುವ ತೆರಿಗೆದಾರರಿಗೆ GST ಕಾನೂನಿನಡಿ ಶಾಸನಬದ್ಧ ಬಾಕಿ ವಸೂಲಿ ಮಾಡುವ ಸುತ್ತೋಲೆಯನ್ನು ಹೊರಡಿಸಲು ಶಿಫಾರಸು ಮಾಡಿದೆ. ಇದಲ್ಲದೆ ಕೆಲವು ಅಪರಾಧಗಳನ್ನು ಅಪರಾಧೀಕರಿಸಲು ಮತ್ತು GST ಕಾನೂನಿನಡಿ ವ್ಯಾಖ್ಯಾನಿಸಲಾದ ತೆರಿಗೆಯ ಪ್ರಾಸಿಕ್ಯೂಷನ್ ಪ್ರಾರಂಭಿಸಲು ಕನಿಷ್ಠ ಮಿತಿ ಹೆಚ್ಚಿಸಲು ಕೌನ್ಸಿಲ್ ಒಪ್ಪಿಕೊಂಡಿದೆ.

ಸರಕು ಅಥವಾ ಸೇವೆಗಳು ಅಥವಾ ಎರಡನ್ನೂ ಪೂರೈಸದೆ ಇನ್‌ವಾಯ್ಸ್‌ಗಳನ್ನು ನೀಡಿದ ಅಪರಾಧವನ್ನು ಹೊರತುಪಡಿಸಿ GST ಅಡಿ ಹಿಂದಿನ ಮಿತಿಯನ್ನು 1 ಕೋಟಿ ರೂ.ನಿಂದ 2 ಕೋಟಿ ರೂ.ಗೆ ದ್ವಿಗುಣಗೊಳಿಸಲಾಗಿದೆ. ಸಮಯದ ಕೊರತೆಯಿಂದ ಕೌನ್ಸಿಲ್ 15 ಅಜೆಂಡಾಗಳಲ್ಲಿ 8 ವಿಷಯಗಳ ಬಗ್ಗೆ ಮಾತ್ರ ಚರ್ಚಿಸಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಜಿಎಸ್‌ಟಿಗಾಗಿ ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲು ಸಂಬಂಧಿಸಿದ ಒಂದು ಅಂಶವನ್ನು ಪರಿಗಣಿಸಲಾಗಿಲ್ಲವೆಂದು ಇದೇ ವೇಳೆ ಅವರು ತಿಳಿಸಿದರು.

ಇದನ್ನೂ ಓದಿ: PAN Card ಹೊಂದಿರುವವರಿಗೆ ಎಚ್ಚರಿಕೆ ನೀಡಿದ ಆದಾಯ ತೆರಿಗೆ ಇಲಾಖೆ!

ಪಾನ್ ಮಸಾಲಾ ಮತ್ತು ಗುಟ್ಕಾ ವ್ಯವಹಾರಗಳಲ್ಲಿ ತೆರಿಗೆ ವಂಚನೆಯನ್ನು ತಡೆಯುವ ಕಾರ್ಯವಿಧಾನದ ಸಮಸ್ಯೆಯನ್ನು ಸಹ ತೆಗೆದುಕೊಳ್ಳಲಾಗಲಿಲ್ಲ. 48ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಯಾವುದೇ ಹೊಸ ತೆರಿಗೆ ವಿಧಿಸಿಲ್ಲವೆಂದು ಸೀತಾರಾಮನ್ ಹೇಳಿದ್ದಾರೆ. 1500 cc ಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ, 4000 mm ಗಿಂತ ಉದ್ದ ಮತ್ತು 170 mm ಅಥವಾ ಅದಕ್ಕಿಂತ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ SUV ಯಂತಹ ಆಟೋಮೊಬೈಲ್‌ಗಳಿಗೆ ಶೇ.22ರಷ್ಟು ಹೆಚ್ಚಿನ ಪರಿಹಾರ ಸೆಸ್ ಅನ್ವಯಿಸುತ್ತದೆ ಎಂದು ಕೌನ್ಸಿಲ್ ಸ್ಪಷ್ಟಪಡಿಸಿದೆ. 

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಸಚಿವರ ನಿಯೋಗ (GoM)ವು ಒಂದೆರಡು ದಿನಗಳ ಹಿಂದಷ್ಟೇ ತನ್ನ ವರದಿ ಸಲ್ಲಿಸಿದ್ದರಿಂದ ಆನ್‌ಲೈನ್ ಗೇಮಿಂಗ್ ಮತ್ತು ಕ್ಯಾಸಿನೊಗಳ ಮೇಲಿನ GST ಕುರಿತ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ. ಜಿಎಸ್‌ಟಿ ಕೌನ್ಸಿಲ್ ಸದಸ್ಯರಿಗೆ ಜಿಒಎಂ ವರದಿಯನ್ನು ರವಾನಿಸಿಲ್ಲವೆಂದು ತಿಳಿದುಬಂದಿದೆ. GST ಕೌನ್ಸಿಲ್ ಒಂದು ರಾಷ್ಟ್ರ, ಒಂದು ತೆರಿಗೆ ಸರಕು ಮತ್ತು ಸೇವಾ ತೆರಿಗೆ (GST) ಆಡಳಿತದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಇದು ಕೇಂದ್ರ ಹಣಕಾಸು ಸಚಿವರ ನೇತೃತ್ವದಲ್ಲಿದ್ದು, ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News